ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಚಿನ್ಹೆ ಅಗತ್ಯದ ಮಹತ್ವ….
1 min read
ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಚಿನ್ಹೆ ಅಗತ್ಯದ ಮಹತ್ವ
ಇನ್ನೇನು ಗ್ರಾಮ ಪಂಚಾಯತ್ ಚುನಾವಣೆ ಕೆಲವು ತಿಂಗಳಲ್ಲಿ ಬರಲಿದೆ, ಈ ಚುನಾವಣೆಯಲ್ಲಿ ಗ್ರಾಮಗಳಲ್ಲಿ ರಾಜಕೀಯ ಹೊರತಾಗಿ. ಯಾವುದೆ ರಾಜಕೀಯ ವೈಷ್ಣಮ್ಯ ಗಳಿಗೆ ಆಸ್ಪದ ಕೊಡದೆ ಭ್ರಷ್ಟಾಚಾರ ವಿಲ್ಲದ ಯೋಗ್ಯ ಅಭ್ಯರ್ಥಿಗಳು ನಿಂತು ಗ್ರಾಮ ಅಭಿವೃದ್ಧಿ ಆಗಲಿ ಅನ್ನುವ ಯೋಚನೆ ಇತ್ತೇನೋ ಈ ಚುನಾವಣೆಗಳಲ್ಲಿ ಪಕ್ಷದ ಚಿನ್ಹೆ ಬೇಡ ಅನ್ನುವ ತೀರ್ಮಾನ ಮಾಡಿದ ಹಿರಿಯ ತಜ್ಞರ ನಿಲವು
ಆದರೆ ಈ ಉದ್ದೇಶ ಈಡೇರಿತ ಅಂದ್ರೆ ಅದು ಇಲ್ಲ
ಇಂದು ಹೆಸರಿಗಷ್ಟೆ ಚಿನ್ಹೆ ಇಲ್ಲ ಆದರೆ ಬಹುತೇಕ ಅಭ್ಯರ್ಥಿಗಳು ಚುನಾವಣೆ ಎದುರಿಸುವುದು ರಾಜಕೀಯ ಪಕ್ಷದ ಬೆಂಬಲದಿಂದನೆ.
ಇನ್ನು ಇಂದಿನ ಗ್ರಾಮಪಂಚಾಯ್ತಿ ಚುನಾವಣೆ ಯಲ್ಲಿ ಕೆಲವು ಅಭ್ಯರ್ಥಿಗಳು ಗೆಲ್ಲಲು ಖರ್ಚು ಮಾಡುವ ದುಡ್ಡು ನಮ್ಮಂತವರು ಆರಾಮಾವಾಗಿ ಒಂದು ಜಿಲ್ಲಾ ಪಂಚಾಯತ್ ಚುನಾವಣೆ ಮಾಡಿ ಮುಗಿಸಬಹುದು ಅಷ್ಟೊಂದು
ಇನ್ನು ಗೆಲ್ಲಿಸಿದ ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕುದುರೆ ವ್ಯಾಪಾರ ನಾಚಿಸುವಂತೆ ತಮ್ಮ ರೇಟ್ ಹೆಚ್ಚಿಸಿಕೊಂಡು ಎಲ್ಲೊ ದೂರದ ಕಡೆ ಕಳ್ಳರಂಗೆ ಕದ್ದು ಕೂತು ಒಂದು 10 ದಿನ ಯಾರಾದ್ದೋ ದುಡ್ಡಿನಲ್ಲಿ ಮಜಾ ಮಾಡಿ ಯಾರು ಜಾಸ್ತಿ ಕೊಡುತ್ತಾರೆ ಅವರಿಗೆ ಜೈ ಅನ್ನುತ್ತಾರೆ, ಕುದುರೆ ವ್ಯಾಪಾರ ಮಾಡುವಾಗ ಕುದುರೆ ಸಾಮರ್ಥ್ಯ ಕ್ಕೆ ತಕ್ಕ ಹಾಗೆ ಬೆಲೆ ಇರುತ್ತದೆ ಇಲ್ಲಿ ಹಾಗಲ್ಲ ಒಂದು ವೋಟ್ ಅಷ್ಟೆ
ಇಲ್ಲಿ ಹಗಲಿರುಳು ಓಡಾಟ ಮಾಡಿ ಗೆಲ್ಲಿಸಿದ, ವೋಟ್ ಹಾಕಿದ ಮತದಾರ ನಿಗೂ ಸಂಬಂಧ ಇರುವುದಿಲ್ಲ ಆ ತರ ಗೆದ್ದ ತಕ್ಷಣ ಕಲಿತು ಬಿಡುತ್ತಾರೆ
ಇಲ್ಲಿಂದ ಭ್ರಷ್ಟಾಚಾರದ ಮೊದಲ ಹೆಜ್ಜೆ ಶುರು
ಅಧ್ಯಕ್ಷನಾದವನು ಮಾಡಿದ ಖರ್ಚು ಬಡ್ಡಿ ಸಮೇತ ಮತ್ತು ಜಾಸ್ತಿ ಗಳಿಸಬೇಕು,
ಇನ್ನು ಸದಸ್ಯರು ಸಹ ಜನರಿಗೆ ರಾತ್ರಿ ಹಂಚಿರುತ್ತಾರಲ್ಲ ಅದನ್ನು ಸಹ ಇನ್ನು ಹೆಚ್ಚಿಗೆ ಗಳಿಸಬೇಕು ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ಗುಪ್ತ ವಿಚಾರ
ಕೆಲವರು ಇದಕ್ಕೆ ಹೊರತಾಗಿರಬಹುದು
ಇನ್ನು ಈ ಭ್ರಷ್ಟಾಚಾರಕ್ಕೆ ಒತ್ತು ಕೊಡುತ್ತಿರುವುದು ಈ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಪಕ್ಷದ ಅಧಿಕೃತ ಚಿನ್ಹೆ ಬಳಕೆ ಮಾಡಲು ಅನುಮತಿ ಕೊಡದೆ ಇರುವುದು ಸಹ ಒಂದು,
ಇಲ್ಲಿ ಪಕ್ಷಗಳ ಚಿನ್ಹೆ ಮೇಲೆ ಗೆದ್ದು ಆ ಪಕ್ಷದ ಸೂಚನೆ ಪಾಲಿಸದ ಸದಸ್ಯನ ಸದಸ್ಯತ್ವ ವಜಾ ಆಗುವ ಕಾನೂನು ಬರಬೇಕು, ಆಗ ಈ ಕದ್ದು ಕೂರುವುದು ದುಡ್ಡಿಗೆ ಜನರ ಆದೇಶಕ್ಕೆ ವಿರುದ್ಧವಾಗಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ತನ್ನ ಸ್ವಾರ್ಥಕ್ಕೆ ತನ್ನನ್ನು ಮಾರಿಕೊಳ್ಳುವುದು ತಪ್ಪುತ್ತದೆ, ಸ್ವಲ್ಪ ಮಟ್ಟಿನ ಕಳ್ಳ ದಂದೆಗೆ ಕಡಿವಾಣ ಬೀಳುತ್ತದೆ, ಹಾಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯಯಲ್ಲೂ ಒಂದಿಷ್ಟು ಯೋಚಿಸಿ ಬದಲಾವಣೆ ಮಾಡಬೇಕಿದೆ
ಪುರಸಭಾ ಚುನಾವಣೆ, ಪಟ್ಟಣ ಪಂಚಾಯತ್ ಚುನಾವಣೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪಕ್ಷಗಳ ಚಿನ್ಹೆ ಇದೆ ಗ್ರಾಮ ಪಂಚಾಯತ್ ಚುನಾವಣೆಗೆ ಯಾಕಿಲ್ಲ,
ಎಲ್ಲಾ ಪಕ್ಷದ ನಾಯಕರು, ಸರ್ಕಾರ,ಸಮಾಜದ ಗಣ್ಯರು ಯೋಚಿಸಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ
✍️ ಅವರೇಕಾಡು ಪೃಥ್ವಿ

