ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕನಿಗೆ ಶಾಲೆಯ ಮಕ್ಕಳಿಂದ ಭವ್ಯ ಸ್ವಾಗತ
1 min read
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ದಿನಾಂಕ 14-09-2025ರ ಭಾನುವಾರದಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಶ್ರೀ ಮಧುಬಂಗಾರಪ್ಪ ರವರಿಂದ ಪ್ರಶಸ್ತಿಯನ್ನು ಸ್ವೀಕರಿಸಿ ಬಂದ ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ ಬಣಕಲ್, ಮೂಡಿಗೆರೆ ತಾಲ್ಲೂಕು.ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶೇಖರಪ್ಪ.ಹೆಚ್.ಎಸ್.ಇವರಿಗೆ ಶಾಲಾ ಮಕ್ಕಳು,ಶಿಕ್ಷಕರು, ಮತ್ತು ಶಾಲಾ ಆಡಳಿತ ಮಂಡಳಿಯ ಸರ್ವ ಪದಾಧಿಕಾರಿಗಳು ಭವ್ಯ ಸ್ವಾಗತವನ್ನು ನೀಡಿದರು.
ಶಾಲಾ ಪ್ರಾರ್ಥನಾ ಸಮಯಕ್ಕೆ ಬಂದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶೇಖರಪ್ಪ ಮತ್ತು ಅವರ ಧರ್ಮಪತ್ನಿ ಲೀಲಾಮಣಿರವರಿಗೆ ಅಚ್ಚರಿ ಕಾದಿತ್ತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಿದರೆ ಶಾಲಾ ಮಕ್ಕಳು ಮತ್ತು ಶಿಕ್ಷಕರು ಪ್ರಶಸ್ತಿ ಪುರಸ್ಕೃತರಿಗೆ ಪುಷ್ಪ ವೃಷ್ಠಿಯ ಮೂಲಕ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮಶೆಟ್ಟಿ.ಮಾತನಾಡಿ ಶ್ರೀಯುತ ಶೇಖರಪ್ಪನವರು ನಮ್ಮ ಸಂಸ್ಥೆಯಲ್ಲಿ ಸುಮಾರು 28 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತಿದ್ದು ಇವರಿಂದ ತರಬೇತಿಯನ್ನು ಪಡೆದು ಬಹಳಷ್ಟು ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅಭಿನಂದನಾರ್ಹ ಮತ್ತು ಇದರಿಂದ ನಮ್ಮ ಸಂಸ್ಥೆಯ ಗರಿಮೆಯು ಹೆಚ್ಚಾಗಿದೆ. ಇವರ ಸೇವೆ ಇನ್ನಷ್ಟು ಮಕ್ಕಳಿಗೆ ಸಿಗುವಂತೆ ಭಗವಂತನ ಅನುಗ್ರಹ ಇವರ ಮೇಲೆ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ ಈ ವರ್ಷದ ಶೈಕ್ಷಣಿಕ ಸಾಲಿನ ವಿವಿಧ ವಿಭಾಗದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಇವರ ಕೈಯಿಂದಲೇ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಈ.ಸುಬ್ರಾಯಗೌಡ. ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ. ನಿರ್ದೇಶಕ ಬಿ.ಬಿ.ಮಂಜುನಾಥ್.ಸ್ಥಳಿಯರಾದ ಗಂಗಾಧರ್.ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ್. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ. ಮುಖ್ಯ ಶಿಕ್ಷಕ ನಾಗರಾಜ್.ಉಪಮುಖ್ಯ ಶಿಕ್ಷಕ ವಸಂತ್ ಹಾರ್ಗೋಡು. ಶಿಕ್ಷಕರಾದ ಭಕ್ತೇಶ್.ವಿಜಯೇಂದ್ರ.ಲೋಕೇಶ್.ಪ್ರತಾಪ್.ಲಿಂಗರಾಜು.ಗೀತಾ.ಅಶ್ವತ್.ಕಮಲಮ್ಮ.ಅಶ್ವಿತಾ.ಶ್ವೇತಾ.ಪದ್ಮಶ್ರೀ.ಸಂಗೀತಾ.ಕನ್ನಿಕಾ.ಆಶಾ.ಅನುಷ.ಪೂಜಾ.ಆರೋಗ್ಯವಾಣಿ.ಸುಶ್ಮಿತಾ.ಶಾಲಾ ಸಿಬ್ಬಂದಿ.ಅಡುಗೆ ಸಿಬ್ಬಂದಿ.ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ವಸಂತ್ ಹಾರ್ಗೋಡು
ವರದಿ
ಮಗ್ಗಲಮಕ್ಕಿ ಗಣೇಶ್
ಸ್ಥಾನಿಕ ಸಂಪಾದಕರು
ನ್ಯೂಸ್ ಬ್ಯೂರೊ ಅವಿನ್ ಟಿ.ವಿ

