ಸೌಹಾರ್ದ ಗಣಪತಿ ಉತ್ಸವಕ್ಕೆ ಮೂಡಿಗೆರೆಯ ಬಿಳಗುಳ ಸಾಕ್ಷಿ……
1 min read
ಸೌಹಾರ್ದ ಗಣಪತಿ ಉತ್ಸವಕ್ಕೆ ಮೂಡಿಗೆರೆಯ ಬಿಳಗುಳ ಸಾಕ್ಷಿ……
ಬಿಳಗುಳ ಗಣಪತಿ ಉತ್ಸವದ ಕೊನೆಯ ದಿನದ ಮೆರವಣಿಗೆಯು ಬಿಳಗುಳ ಮಸೀದಿಯ ಹತ್ತಿರ ಬಂದಾಗ ಮುಸ್ಲಿಂ ಬಾಂದವರು ಸಿಹಿ ಹಂಚಿ ಗಣಪತಿ ಉತ್ಸವದಲ್ಲಿ ಸಂಭ್ರಮಿಸಿದರು.
ಕಳೆದ 40.ವರ್ಷದಲ್ಲಿ ಯಾವುದೆ ಹಿಂದು.ಮುಸ್ಲಿಂ ಗಲಾಟೆ ಬಿಳಗುಳದಲ್ಲಿ ನಡೆದಿಲ್ಲ.ಸಣ್ಣ ಪುಟ್ಟ ಮನಸ್ಥಾಪ ಬಂದಾಗ ಹಿರಿಯರ ಸಮ್ಮುಖದಲ್ಲಿ ಸರಿಯಾಗಿದೆ ಎಂದು ಕಾಫ಼ಿನಾಡು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸಮಾಜ ಸೇವಕ ಹಸೆನಾರ್ ತಿಳಿಸಿದರು.
ಎಲ್ಲಾ ಜಾತಿ.ದರ್ಮದ ಜನರು ಇಲ್ಲಿ ವಾಸಿಸುತಿದ್ದಾರೆ.
ಮುಂದೆಯೂ ಎಲ್ಲಾ ಹಬ್ಬಗಳಲ್ಲಿ ಸೌಹಾರ್ದ ಮೆರೆದು ವಿಶ್ವಕ್ಕೆ ಮಾದರಿಯಾಗಲಿ ಎಂದು ಆಶಿಸಿದರು.

