ವಿಶ್ವ ಮಾನವನಿಗೆ ಸಿಗಲಿ ಭಾರತ ರತ್ನ…….
1 min read
ವಿಶ್ವ ಮಾನವನಿಗೆ ಸಿಗಲಿ ಭಾರತ ರತ್ನ
ಕನ್ನಡ ಬಾಷೆಗೆ ಮೊಟ್ಟ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ರಾಷ್ಟ್ರ ಕವಿ ಕುವೆಂಪು ರವರು ರಾಜ್ಯಕ್ಕೆ ನಾಡಗೀತೆ ಕೊಟ್ಟವರು ಸಾರ್ವಜನಾಂಗದ ಶಾಂತಿಯ ತೋಟ ಎಂದು ಐಕ್ಯತೆಯನ್ನು ಸಾರಿದರು . ರಸ ಖುಷಿ. ಹಿಂದೂ. ಕ್ರೈಸ್ತ. ಮುಸಲ್ಮಾನ .ಪಾರಸಿಕ ಜೈನರುದ್ಯಾನ ಎಂದು ಸಮಾನತೆ ಸಂದೇಶ ಸಾರಿದವರು. ಕುಲಪತಿಗಳಾಗಿ. ತನ್ನ ಸ್ವಾರ್ಥಕ್ಕಾಗಿ ಎಲ್ಲಿಯೂ ಬಳಸಿಕೊಳ್ಳದೆ. ತನ್ನ ಹೆಂಡತಿ ಮಕ್ಕಳಿಗಾಗಿ ಸಹ ಏನನ್ನೂ ಬಯಸದೆ ಬದುಕಿದವರು .”ವಿಶ್ವ ಪಥ ಮನುಜ ಮತ ” ಸಾರಿದವರು ಸರಳವಾಗಿ ಜೀವನ ನಡೆಸಲು ಮಂತ್ರ ಮಾಂಗಲ್ಯ ಹೇಳಿ ಕೊಟ್ಟವರು. ಸ್ವಾತಂತ್ರ್ಯ. ಸಮಾನತೆ. ಸಹೋದರತ್ವ. ಭಾತೃತ್ವದ ಮೇಲೆ ನಂಬಿಕೆ ಉಳ್ಳವರು ಶ್ರೀ ರಾಮಾಯಣ ದರ್ಶನಂ ಕೃತಿಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ರಾಷ್ಟ್ರ ಕವಿಗೆ ಎಂದೊ ಭಾರತ ರತ್ನ ಲಭಿಸಬೇಕಿತ್ತು ನಮ್ಮ ದುರಂತ ಅಧಿಕಾರಕ್ಕೆ ಬರುವ ರಾಜಕಾರಣಿಗಳು ಜಾತಿ ಧರ್ಮ.ಲಾಭ ನಷ್ಟದ ಮೇಲೆ ಅಧಿಕಾರ ಮಾಡುತ್ತಿರುವುದು ದುರಂತವೇ ಸರಿ ಈ ಬಾರಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳು ಬುದ್ದ ಬಸವ ಅಂಬೇಡ್ಕರ್ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಉಳ್ಳವರು ಸಮಾನತೆಯ ಹರಿಕಾರರಾದ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕುವೆಂಪು ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಶ್ಲಾಘನೀಯ. ಇವನು ಯಾರವ ಇವನು ಯಾರವ ಎಂದೆನಿಸದೆ. ಇವ ನಮ್ಮವ ಇವ ನಮ್ಮವ ನಮ್ಮ ಮನೆ ಮಗ ಎಂದೆನಿಸಿ ಭಾರತ ಸರ್ಕಾರ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ಬಯಕೆ ನನ್ನದು 🙏🙏🙏
ಲೋಕೇಶ್ ಬೆಟ್ಟಗೆರೆ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
ಬಣಕಲ್ ಹೋಬಳಿ.ಮೂಡಿಗೆರೆ.ತಾಲೂಕು…

