लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಸಬಾ ಹೋಬಳಿ ಘಟಕದ ತೇಜಸ್ವಿ ನೆನಪು ಕಾರ್ಯಕ್ರಮ..
ಇಂದು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಿತು ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ವತಿಯಿಂದ ತೇಜಸ್ವಿ ಅವರ ಜನ್ಮ ದಿನ ಅಂಗವಾಗಿ ಪ್ರಬಂಧ ಸ್ಪರ್ಧೆ ಅಂದವಾದ ಬರವಣಿಗೆ . ಕಾರ್ಯಕ್ರಮವನ್ನು ಸರ್ಕಾರಿ ಪದವಿಪೂರ್ವ ಕಾಲೇಜು ಮೂಡಿಗೆರೆನಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಹಳಸೆ ಶಿವಣ್ಣವರು. ತೇಜಸ್ವಿ ಒಡನಾಟದ ಸವಿಸ್ತಾರವಾಗಿ ತಿಳಿಸಿದರು, ಉಪನ್ಯಾಸ ನೀಡಿದ ಎಂ ಎಸ್ ನಾಗರಾಜ್ ಸಾಹಿತಿಗಳು ಮಲೆನಾಡಿನ ಪರಿಸರದಲ್ಲಿ ಬಗ್ಗೆ ಅವರ ಕಾಳಜಿ ಅವರು ಬರೆದಿರುವ ಪುಸ್ತಕಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು,ತಾಲೂಕು ಅಧ್ಯಕ್ಷರಾದ ಡಿ. ಕೆ. ಲಕ್ಷ್ಮಣ್ ಗೌಡ್ರು ತೇಜಸ್ವಿ ನಾನು ಬಿ. ಎಸ್. ಎನ್.ಎಲ್. ನೌಕರರು ಆಗಿದ್ದಾಗ ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡರು, ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾಯಕ್ ಮಾತನಾಡಿ ತೇಜಸ್ವಿ ಅವರ ಸರಳ ಜೀವನ ಕಿರಗೂರಿನ ಗಯ್ಯಾಳಿಗಳು ಪುಸ್ತಕದ ಬಗ್ಗೆ ವಿವರಿಸುತ್ತಾ ಮಹಿಳೆಯರ ಸಮಾನ ಹಕ್ಕಿನ ಬಗ್ಗೆ ತಿಳಿಸಿದರು ಗೋಣಿಬೀಡು ಹೋಬಳಿಯ ಅಧ್ಯಕ್ಷರಾದ ನವೀನ್ ಆನೆದಿಬ್ಬ ಅವರು ಬರವಣಿಗೆ ಒಬ್ಬ ವ್ಯಕ್ತಿಯ ವಿಕಾಸಕ್ಕೆ ಕಾರಣವಾಗುತ್ತದೆ ಮಕ್ಕಳೆಲ್ಲ ನಿಮ್ಮ ಶಾಲೆಯ ಪಕ್ಕದಲ್ಲಿರುವ ರಾಜಣ್ಣ ಕ್ಯಾಂಟೀನ್ ಒಮ್ಮೆ ಭೇಟಿ ಕೊಡಿ ಅಲ್ಲಿರುವ ಬರವಣಿಗೆಯನ್ನು ಗಮನಿಸಿ ನಿಮ್ಮಲ್ಲಿ ಹೊಸ ಚೇತನ ತುಂಬುತ್ತದೆ ಎಂದು ತಿಳಿಸಿದರು, ಕಸಬಾ ಹೋಬಳಿಯ ಅಧ್ಯಕ್ಷರಾದ ರವಿ ಕುನ್ನಳ್ಳಿ ಅವರು ಮಾತನಾಡಿ ತೇಜಸ್ವಿ ಅವರ ಪ್ರತಿಷ್ಠಾಪನೆಗೆ ಭೇಟಿ ಕೊಡಿ ಅಲ್ಲಿರುವ ವಸ್ತು ಸಂಗ್ರಹ ನೋಡಿದರೆ ಅಲ್ಲಿರುವ ಅಪರೂಪದ ಕೀಟಗಳು ಹಿಂದೆ ನಮ್ಮ ಪೂರ್ವಜರು ದಿನನಿತ್ಯ ಬಳಸುತ್ತಿದ್ದ ವಸ್ತುಗಳನ್ನು ನೋಡಿ ಬನ್ನಿ ನೀವು ಹೊರಡುವ ಒಂದು ದಿನದ ಪ್ರವಾಸದ ವೆಚ್ಚವನ್ನು ನಾನು ಬರಿಸುತ್ತೇನೆ ಇವರು ಮಲೆನಾಡಿನ ಮಾಣಿಕ್ಯ ಎಂದರು, ಈ ಸಮಾರಂಭದಲ್ಲಿ ಭಾಗವಹಿಸಿದ ಕಸಬಾ ಹೋಬಳಿಯ ಕೋಶ್ಯಾಧ್ಯಕ್ಷರದ ಹಸೇನಾರ್ ತಾಲೂಕು ಕಾರ್ಯದರ್ಶಿಗಳಾದ ಸುಚಿತ್ರ ಪ್ರಸನ್ನ, ಪ್ರಕಾಶ್ ಬಕ್ಕಿ ನಿವೃತ್ತಿ ಶಿಕ್ಷಕಿಯಾದ ದಾಕ್ಷಾಯಿಣಿ ಉಪಸ್ಥಿತಿ ಇದ್ದರು,
ಕಾರ್ಯಕ್ರಮದ ನಿರೂಪಣೆ ಮಾಡಿದರು ರವಿಕುಮಾರ್ ಶಿಕ್ಷಕರು ವಂದಿಸಿದರು…

About Author

Leave a Reply

Your email address will not be published. Required fields are marked *

You may have missed