ಸುಗ್ರೀವಾಜ್ಞೆ ಸೂಕ್ತ ನಿರ್ಧಾರ…,
1 min read
ಸುಗ್ರೀವಾಜ್ಞೆ ಸೂಕ್ತ ನಿರ್ಧಾರ
ಚುನಾವಣೆಯಲ್ಲಿ ಇವಿಎಂ ಕೈಬಿಟ್ಟು ಬ್ಯಾಲೆಟ್ ಬಳಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸು ತ್ತಿರುವುದು ಸೂಕ್ತ ನಿರ್ಧಾರವಾಗಿದೆ. ಚಲಾವಣೆಯಾದ ಮತಗಳನ್ನು ತಿರುಚಿ ಸೋಲು ಕಾಣಬೇಕಾದ ಅಭ್ಯರ್ಥಿಯನ್ನು ಕೂಡ ಗೆಲ್ಲಿಸಲು ಇವಿಎಂನಲ್ಲಿ ಅವಕಾಶವಿದೆ ಎಂದು ತಜ್ಞರು ಈ ಹಿಂದೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವಿಎಂ ಕಂಡುಹಿಡಿದ ಜಪಾನ್ ಸೇರಿದಂತೆ ಯಾವುದೇ ದೇಶಗಳು ಇವಿಎಂ ಬಳಸದೆ ಬ್ಯಾಲೆಟ್ ಬಳಸುತ್ತಿವೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಇವಿಎಂ ಬಳಸದೆ ಬ್ಯಾಲೆಟ್ ಬಳಸುವಂತೆ ಕಾನೂನಿಗೆ ತಿದ್ದುಪಡಿ ತರಬೇಕು. ಆಗ ಮಾತ್ರ ಪಾರದರ್ಶಕ ಚುನಾವಣೆ ನಡೆಯುತ್ತದೆ.
| ಕೆ.ಸಿ.ಚಂದ್ರಶೇಖರ್
ಮೂಡಿಗೆರೆ ವಕೀಲ

