लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಜುಕೇಟ್ ಗರ್ಲ್ಸ್ ಗಾಗಿ (Educate Girls ) ಸಫೀನಾ ಹುಸೇನ್ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಭಾಜನ:..

1 min read

ಅವಿನ್ ಟಿವಿ ಸುದ್ದಿಜಾಲ ✒️: ಎಜುಕೇಟ್ ಗರ್ಲ್ಸ್ ಗಾಗಿ (Educate Girls ) ಸಫೀನಾ ಹುಸೇನ್ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಭಾಜನ:

ಭಾರತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ Educate Girls.

ನೋಬೆಲ್ ಪ್ರಶಸ್ತಿಯ ಬಳಿಕ ಅತ್ಯಂತ ದೊಡ್ಡ ಪ್ರಶಸ್ತಿ ಎಂದು ಪರಿಗಣನೆಗೆ ಒಳಪಟ್ಟು, ಏಷ್ಯಾದ ನೊಬೆಲ್ ಪ್ರಶಸ್ತಿ ಎಂದೇ ಕರೆಸಿಕೊಂಡಿರುವ ಪ್ರತಿಷ್ಠಿತವಾದ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯು ಈ ಬಾರಿ ದೆಹಲಿಯ ಸಫೀನಾ ಹುಸೇನ್ ಅವರು ಸಂಸ್ಥಾಪಿಸಿ, ಆ ಸಂಸ್ಥೆಯ ಮುಖ್ಯಸ್ಥರಾಗಿ ದುಡಿಯುತ್ತಿರುವ ಎಜುಕೆಟ್ ಗರ್ಲ್ಸ್ ಎಂಬ ಸಂಸ್ಥೆಗೆ ಲಭಿಸಿದೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯ ಮೂಲಕ ಸಫೀನಾ ಹುಸೇನ್ ಅವರು ಭಾರತದ ಹೆಮ್ಮೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯದಿದ್ದಾರೆ.ಇದು ಶಾಲೆ ಬಿಟ್ಟ ಹೆಣ್ಣು ಮಕ್ಕಳ ಶಿಕ್ಷಣದ ಸಬಲೀಕರಣಕ್ಕಾಗಿ ಹೆಜ್ಜೆ ಇಟ್ಟ ಹಾದಿಯಾಗಿದೆ…

ಈ ಪ್ರಶಸ್ತಿಯನ್ನು ತಂದುಕೊಟ್ಟ ಸಫೀನಾ ಹುಸೇನ್ ಅವರ ಬದುಕೆ ಒಂದು ಯಶೋಗಾಥೆಯಂತಿದೆ,

ದೇಶದ ರಾಜಧಾನಿ ದೆಹಲಿಯ ಪಹರ್ ಗಂಜ್ ಎಂಬ ಸಾಮಾನ್ಯ ನಗರದಲ್ಲಿ ಹುಟ್ಟಿ ಬೆಳೆದ ಸಫೀನ ಹುಸೇನ್ ಅವರ ತಂದೆ ಯೂಸಫ್ ಹುಸೇನ್ ಅವರು ಬಾಲಿವುಡ್ ಸಿನಿಮಾ ನಟರು, ಹೀಗಿದ್ದು ಕೂಡ, ಸಂಪ್ರದಾಯ, ಬಡತನ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದು ಮುಖ್ಯವಲ್ಲ ಎಂಬ ಕುಟುಂಬದ ಮಾನಸಿಕ ಮಾಲಿನ್ಯದ ಕಾರಣ ಸಫೀನಾ ಹುಸೇನ್ ಅವರು ಶಿಕ್ಷಣದಿಂದ ವಂಚಿತರಾಗಿ, ಕುಟುಂಬದವರು ಇವರನ್ನು ಮದುವೆ ಮಾಡಲು ಹೊರಟಿದ್ದರು.

ಈ ಸಮಯದಲ್ಲಿ,ಅವರ ಗೆಳತಿ ಸಫೀನಾ ಹುಸೈನ್ ಅವರಿಗೆ ಶಿಕ್ಷಣವನ್ನು ದೊರೆಯುವಂತೆ ಮಾಡಿದ್ದು ಅವರ ಬದುಕಿನಲ್ಲಿ ಬಹುಮುಖ್ಯತಿರುವನ್ನು ಪಡೆದುಕೊಂಡಿತು, ಮುಂದೆ ಇದೇ ಸಫೀನಾ ಹುಸೇನ್ ಅವರು ಲಂಡನ್ ನ ಪ್ರತಿಷ್ಠಿತ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವಿ ಪಡೆದು, ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಿ, ತದನಂತರ ತನ್ನ ಮಾತೃದೇಶದ ಅಭಿಮಾನದಿಂದ ತಾಯ್ನಾಡದ ಭಾರತಕ್ಕೆ ಮರಳಿ, ತನ್ನ ತಾಯ್ನಾಡಿನಲ್ಲಿ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಹೊಂದಿ, ಎಜುಕೆಟ್ ಗರ್ಲ್ಸ್ ಎಂಬ ಸಂಸ್ಥೆಯನ್ನು ಕಟ್ಟಿ, ಈ ಸಂಸ್ಥೆಯ ಮೂಲಕ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಬೆಳಕಾಗಿದ್ದು ಒಂದು ಪ್ರಕಾರವಾದ ಶಿಖರವಾಗಿದೆ.

ಭಾರತಕ್ಕೆ ಮರಳಿದ ನಂತರ, ರಾಜಸ್ಥಾನದ ಪಾಲಿ ಮತ್ತು ಜಲೂರ್ ಎಂಬ ಎರಡು ಹಿಂದುಳಿದ ಜಿಲ್ಲೆಗಳಲ್ಲಿ ಎರಡು ಹಳ್ಳಿಯನ್ನು ಆಯ್ದುಕೊಂಡು, ಆ ಹಳ್ಳಿಯಲ್ಲಿ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಪೋಷಕರ ಮನವೊಲಿಸಿ, ಅವರಿಗೆ ಶಿಕ್ಷಣವನ್ನು ಕಟ್ಟಿ ಕೊಡುವ ಕೆಲಸವನ್ನು ಆರಂಭಿಸಿದರು.

ಹೀಗೆ ರಾಜಸ್ಥಾನದ ಎರಡು ಹಳ್ಳಿಗಳಿಂದ ಆರಂಭವಾದ ಈ ಎಜುಕೇಟ್ ಗರ್ಲ್ಸ್ ಎಂಬ ಶಿಕ್ಷಣದ ಆಂದೋಲನ , ಇಂದು ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಈ ನಾಲ್ಕು ರಾಜ್ಯಗಳ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ, ಎರಡು ದಶಕಗಳ ಅವಧಿಯಲ್ಲಿ ಸರಿಸುಮಾರು ಎರಡು ಲಕ್ಷಕ್ಕೂ ಹೆಚ್ಚು ಶಾಲೆಗೆ ಹೋಗದ ಹೆಣ್ಣು ಮಕ್ಕಳನ್ನು ಗುರುತಿಸಿ, ಅವರಿಗೆ ಶಿಕ್ಷಣವನ್ನು ಕೊಡಿಸಿ ಸ್ವಾಭಿಮಾನಿ ಬದುಕನ್ನು ಬದುಕುವ ಹಾಗೆ ಬದುಕು ಹಾಗೆ ರೂಪಿಸಿದ ಇವರ ಸೇವೆಯನ್ನು ಪರಿಗಣಿಸಿ ಏಷ್ಯಾ ಖಂಡದ ನೋಬೆಲ್ ಪ್ರಶಸ್ತಿ ಎಂದೇ ಖ್ಯಾತವಾಗಿರುವ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿದೆ.

ದೇಶದಲ್ಲೇ ಪ್ರಥಮ ಬಾರಿಗೆ ಸ್ವಯಂ ಸೇವಾ ಸಂಸ್ಥೆ ಒಂದಕ್ಕೆ ಈ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿ ಸಿಕ್ಕಿರುವುದು ಕೇವಲ ಎಜುಕೇಟೆಡ್ ಗರ್ಲ್ಸ್ ಸಂಸ್ಥೆಗೆ ಸಿಕ್ಕಿರುವ ಗೌರವವಲ್ಲ,ಅದು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಸಾವಿರಾರು ಸ್ವಯಂಸೇವಾ ಸಂಸ್ಥೆಗಳಿಗೆ, ಆ ಸಂಸ್ಥೆಯಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಸ್ವಯಂಸೇವಕರಿಗೆ ಮತ್ತು ತಮತಮ ಹಕ್ಕಿಗಾಗಿ ಹೋರಾಡುತ್ತಿರುವ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಈ ಪ್ರಶಸ್ತಿ ಸ್ಪೂರ್ತಿಯಾಗಿದೆ.

ಶಿಕ್ಷಣದ ಹಕ್ಕು ಎಂಬುದು ಒಂದು ಮೂಲಭೂತವಾದ ಮಾನವ ಹಕ್ಕಾಗಿದ್ದು, ಇದನ್ನು, ಭಾರತದ ಈ ನೆಲದಿಂದ ವಿಶ್ವಕ್ಕೆ ನೆನಪು ಮಾಡುವ ಮೂಲಕ, ಬಡತನ ಮತ್ತು ಪಿತೃ ಪ್ರಧಾನವಾದ ಶಕ್ತಿಯನ್ನು , ಹೆಣ್ಣಿನ ಅಸಮಾನತೆಯ ಮಾಲಿನ್ಯವನ್ನು ಮುರಿಯುವ ಸಾಧನ ಈ ಶಿಕ್ಷಣವೇ ಆಗಿದೆ ಎಂಬುದನ್ನು ಜಗತ್ತಿಗೆ ಈ ಪ್ರಶಸ್ತಿಯು ದೃಢಪಡಿಸಿದೆ.

ಸಫೀನಾ ಹುಸೇನ್ ಅವರ ಕನಸು ಕೇವಲ ಈಗ ಭಾರತಕ್ಕಷ್ಟೇ ಸೀಮಿತವಾಗದೆ, ಇತರೆ ದೇಶಗಳಿಗೂ ಇದೇ ಮಾದರಿ ಅನುಸರಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದಾರೆ,

ಮುಂದಿನ ದಿನಗಳಲ್ಲಿ ಟೆನ್ ಬೈ ಟೆನ್ ಕಾರ್ಯಕ್ರಮದ ಮೂಲಕ, ಶಿಕ್ಷಣದಿಂದ ವಂಚಿತರಾದ ಒಂದು ಕೋಟಿಗೂ ಹೆಚ್ಚು ಹೆಣ್ಣು ಮಕ್ಕಳನ್ನು ಈ ಶಿಕ್ಷಣದ ಹಾದಿಗೆ ಕರೆತರುವ ಆಶಯವನ್ನು ಇಟ್ಟುಕೊಂಡಿದ್ದಾರೆ .

ಈ ಸಮುದಾಯ ಆಧಾರಿತ ಕಾರ್ಯಕ್ರಮ, ಸಮಾಜದಲ್ಲಿ ಬದಲಾವಣೆ ತರುವಲ್ಲಿ ಅತ್ಯಂತ ಯಶಸ್ವಿಯಾಗಿದೆ. ಶಿಕ್ಷಣದಿಂದ ವಂಚಿತರಾದ ಲಕ್ಷಾಂತರ ಹೆಣ್ಣು ಮಕ್ಕಳು ಇಂದು ಈ ಎಜುಕೇಟೆಡ್ ಗರ್ಲ್ಸ್ ಸಂಸ್ಥೆ ಮೂಲಕ ಹಳ್ಳಿಗಳಲ್ಲಿ ಎದ್ದುನಿಂತು ಸ್ವಾಭಿಮಾನದ ಪ್ರತೀಕವಾಗಿದ್ದಾರೆ.

ಎಜುಕೇಟೆಡ್ ಸಮಸ್ತೆಯ ಈ ಸಾಧನೆ ಇಡೀ ವಿಶ್ವದ ಗಮನ ಸೆಳೆದು ಅಭಿನಂದನೆ ಸಲ್ಲಿಸುತ್ತಿದ್ದರು ಕೂಡ, ನಾನು ಇನ್ನೂ ಗುರಿಯನ್ನು ಮುಟ್ಟಿಲ್ಲ, ಶಿಕ್ಷಣದ ಮೂಲಕ ಸಮಾನತೆ, ಸ್ವಾವಲಂಬನೆ, ಆರ್ಥಿಕ ಸದೃಢತೆಯೊಂದಿಗೆ ಅಭಿವೃದ್ಧಿಯ ಪಥದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇಡಬೇಕಾಗಿದೆ, ಈ ಹಾದಿಯಲ್ಲಿ ನನ್ನ ಪಯಣ ಮುಂದುವರೆಯುತ್ತದೆ ಎಂದು ಮ್ಯಾಗ್ಸೆ ಸ್ಸೆ ಪ್ರಶಸ್ತಿ ವಿಜೇತ ಸಫೀನಾ ಹುಸೇನ್ ಅವರು ವಿಶ್ವಕ್ಕೆ ಕರೆಕೊಟ್ಟಿದ್ದಾರೆ.

ಸಂಪ್ರದಾಯ ಮತ್ತು ಬಡತನದ ಹೆಸರಿನಲ್ಲಿ ಶಿಕ್ಷಣದಿಂದ ವಂಚಿತರಾದ ಸಫೀನಾ ಹುಸೇನ್ ಅವರು, ಲಂಡನ್ ನಲ್ಲಿ ಓದಿ ಪದವಿ ಪಡೆದು, ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ಕೆಲಸ ಮಾಡಿ, ಕೈ ತುಂಬಾ ಸಂಬಳ ಪಡೆದುಕೊಂಡು ಜೀವನ ಸಾಗಿಸಬಹುದಿತ್ತು. ಆದರೆ, ತನ್ನಂತೆ ಇತರೆ ಮಕ್ಕಳು ಶಾಲೆಯಿಂದ ಹೊರಗುಳಿದು, ಶಿಕ್ಷಣದಿಂದ ವಂಚಿತರಾಗಿ ಭವಿಷ್ಯವನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ, ಮರಳಿ ಭಾರತಕ್ಕೆ ಬಂದು, ಎಜುಕೆಟ್ ಗರ್ಲ್ಸ್ ಸಂಸ್ಥೆಯನ್ನು ಕಟ್ಟಿ, ಇಪ್ಪತ್ತು ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಸ್ವಾಭಿಮಾನಿಗಳನ್ನಾಗಿ ಮಾಡಿ, ಮುಂದಿನ ದಿನಗಳಲ್ಲಿ ಶಾಲೆಗೆ ಸೇರದ ಸೇರದ ಕೋಟ್ಯಾಂತರ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕಟ್ಟಿಕೊಡಲು ಹೊರಟಿರುವ ಅವರ ಸಾಧನೆಯ ಹಾದಿಗೆ ಮತ್ತು ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಕ್ಕೆ ನ್ಯೂಸ್ ಕಿಂಗ್ ಒಂದು ಬಿಗ್ ಸೆಲ್ಯೂಟ್ ನ್ನು ಕೊಟ್ಟು ಅವರನ್ನು ಗೌರವಿಸುತ್ತಿದೆ.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed