ಚನ್ನಬಸವ ಕೊಟಗಿಯವರಿಗೆ ಗೌರವ ಡಾಕ್ಟರೇಟ್…
1 min read
ಚನ್ನಬಸವ ಕೊಟಗಿಯವರಿಗೆ ಗೌರವ ಡಾಕ್ಟರೇಟ್
ಗಂಗಾವತಿ.
ಪತ್ರಿಕಾ ಬಳಗದಲ್ಲಿ ಸುಮಾರು 15 ವರ್ಷಗಳ -ಸಾರ್ಥಕ ಸೇವೆ, ಚಲನಚಿತ್ರರಂಗ, ನಾಟಕ, ಕಲೆ, ಸಾಹಿತ್ಯ, ರಂಗಭೂಮಿ ಹಾಗೂ ಪ್ರವಾಸೋದ್ಯಮದಲ್ಲಿ ಸಲ್ಲಿಸಿದ ಕಾರ್ಯಕ್ಕಾಗಿ ಮ್ಯಾಜಿಕ್ ಆರ್ಟ್ ಯೂನಿವರ್ಸಿಟಿ, ಫರೀದಾಬಾದ್ ಹರ್ಯಾಣ, ನವ ದೆಹಲಿ ವತಿಯಿಂದ ದಿನಾಂಕ 13-9-2025 ರಂದು ನವದೆಹಲಿಯಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು.
ಉದಯೋನ್ಮುಖ ಪ್ರತಿಭೆ ಚನ್ನಬಸವ ಕೊಟಗಿಯವರ ಗೌರವ ಡಾಕ್ಟರೇಟ್ ಸಮಾರಂಭಕ್ಕೆ ಗಣ್ಯರು ಸ್ನೇಹಿತರು, ಆತ್ಮೀಯರು ಶುಭ ಹಾರೈಸಿದ್ದಾರೆ.
<span;> ಚನ್ನಬಸವ ಕೊಟಗಿಯವರು ಕನ್ನಡ ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರಗಳನ್ನು ಪಡೆದಿರುತ್ತಾರೆ. ವಿವಿಧ ಸಮಾಜದ ಹಿರಿಯರೊಂದಿಗೆ ಸಹೃದಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಟ್ ಅಂಡ್ ಮ್ಯೂಸಿಕ್ ಯೂನಿವರ್ಸಿಟಿ ಯ ‘ ನಿರ್ದೇಶಕರು, ಡೀನ್, ರಿಜಿಸ್ಟರ್ ಹಾಗೂ ಸಂಸ್ಥೆಯ ಸಂಪರ್ಕ ಅದಿಕಾರಿ ಶ್ರೀಮತಿ ಆಶಾ ರವರಿಗೆ ವೈಯಕ್ತಿಕವಾಗಿ ಜನತೆ ಪರವಾಗಿ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾಗಲಿರುವ ಚನ್ನಬಸವ ಕೊಟಗಿ ಅವರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

