ದಸರಾ ಉತ್ಸಾವದ ಉದ್ಘಾಟನೆಯನ್ನೇಕೆ ವಿರೋಧಿಸುತ್ತೀರಿ?…
1 min read
ದಸರಾ ಉತ್ಸಾವದ ಉದ್ಘಾಟನೆಯನ್ನೇಕೆ ವಿರೋಧಿಸುತ್ತೀರಿ?
ಟಿಪ್ಪು ಸುಲ್ತಾನ್ ರವರು ಪರಿಚಯಿಸಿದ ರೇಷ್ಮೆಯ ಗರಿಗರಿಯ ಬಟ್ಟೆಯನ್ನು
ಹಾಕಿಕೊಂಡು ಮೈಸೂರಿನ ಅರಮನೆಯನ್ನು ಸುತ್ತಾಡಿದ ನೀವೇಕೆ
ದಸರಾ ಉದ್ಘಾಟನೆಯನ್ನು ವಿರೋಧಿಸುತ್ತೀರಾ?
ಭಾರತದ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಮೊಗಲ್ ದೊರೆ ಷಹಾಜನ್ ಕಟ್ಟಿಸಿದ
ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದಾಗ ನಾಡಿನಲ್ಲಿ ಸಂಭ್ರಮಿಸುವ ನೀವೇಕೆ
ದಸರಾ ಉದ್ಘಾಟನೆಯನ್ನು ವಿರೋಧಿಸುತ್ತೀರಿ?
ಕುಟುಂಬದ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿ ಷಹಾಜನ್ ಕಟ್ಟಿಸಿದ
ತಾಜ್ ಮಹಲ್ ನೋಡಿ ಮನವನ್ನು ತಣಿಸಿಕೊಳ್ಳುವ ನೀವೇಕೆ
ದಸರಾ ಉದ್ಘಾಟನೆಯನ್ನು ವಿರೋಧಿಸುತ್ತೀರಿ?
ಕನ್ನಡದ ಕವಿ ನಿಸಾರ್ ಅಹಮ್ಮದ್ ರವರು ಬರೆದಿರುವ ನಿತ್ಯೋತ್ಸವ ತಾಯಿ
ನಿತ್ಯೋತ್ಸವ ಎಂಬಾ ಗೀತೆಯನ್ನು ಶಾಲೆಯಲ್ಲಿ ರಾಗವಾಗಿ ಹಾಡಿದ ನೀವೇಕೆ
ದಸರಾ ಉದ್ಘಾಟನೆಯನ್ನು ವಿರೋಧಿಸುತೀರಿ? ವಿರೋಧಿಸುತ್ತೀರಿ?
ಕ್ಷಿಪಣಿ ಮನುಷ್ಯ ಎಂದೇ ಹೆಸರನ್ನು ಪಡೆದು ವಿಶ್ವವೇ ಭಾರತ ಕಡೆಗೆ ತಿರುಗಿ
ನೋಡುವಂತೆ ಮಾಡಿ ರಾಷ್ಟ್ರಪತಿಯಾದ ಅಬ್ದುಲ್ ಕಲಾಂ ರನ್ನು ಒಪ್ಪಿಕೊಂಡ ನೀವೇಕೆ
ದಸರಾ ಉದ್ಘಾಟನೆಯನ್ನು ವಿರೋಧಿಸುತ್ತೀರಿ?
2023 ರ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಫೈನಲ್ ಹಂತದ ತನಕ
ತೆಗೆದುಕೊಂಡು ಹೋದ ಮಹಮ್ಮದ್ ಶಮಿಯ ಆಟಕ್ಕೆ ಕುಣಿದು ಕುಪ್ಪಳಿಸಿದ ನೀವೇಕೆ
ದಸರಾ ಉತ್ಸಾವವನ್ನು ವಿರೋಧಿಸುತ್ತೀರಿ?
(ಭಾರತ ಜಾತ್ಯತೀತ ರಾಷ್ಟ್ರ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ)
ರಚನೆ: ಡಾ. ಹರೀಶ್ ನಲ್ಕೆ

