लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಿಲ್ಲೆಯ ಪಾರಂಪರಿಕ ಸ್ಮಾರಕ ಪಟ್ಟಿಯಲ್ಲಿ ಜಾವಣಿಗೆ ಸೀಮೆಯ ಪಾಳೇಗಾರ ನಾಡುಮನೆ ದ್ಯಾವಣ್ಣಗೌಡರ ಮನೆ ಸ್ಥಾನ ಪಡೆದುಕೊಳ್ಳಲಿ.*

1 min read

ಅವಿನ್ ಟಿವಿ ಸುದ್ದಿಜಾಲ ✒️: *ಜಿಲ್ಲೆಯ ಪಾರಂಪರಿಕ ಸ್ಮಾರಕ ಪಟ್ಟಿಯಲ್ಲಿ ಜಾವಣಿಗೆ ಸೀಮೆಯ ಪಾಳೇಗಾರ ನಾಡುಮನೆ ದ್ಯಾವಣ್ಣಗೌಡರ ಮನೆ ಸ್ಥಾನ ಪಡೆದುಕೊಳ್ಳಲಿ.*

ಇದು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಪುಸ್ತಕ ಓದು ಸಂವಾದ ಕಾರ್ಯಕ್ರಮ…..

ಇತಿಹಾಸದ ಕಲೆಗುರುತುಗಳು ಮತ್ತು ಅ ಕಲೆಗುರುತುಗಳಲ್ಲಿ ಅಚ್ಚೊತ್ತಿರುವ ಕಲೆ,ಸಾಹಿತ್ಯ ಸಂಸ್ಕೃತಿ,ಜನಜೀವನ, ಜನಸಾಮಾನ್ಯರ ಅಸಮಾನ್ಯ ಬದುಕಿನ ಯಶೋಗಾಥೆಗಳ ಕುರುಹುಗಳು ಅಲ್ಲಲ್ಲಿ ಇಂದಿಗೂ ನಮ್ಮ ಹಳ್ಳಿಗಳಲ್ಲಿ ಕಾಣಸಿಗುತ್ತವೆ.

ಇಂತಹ ಇತಿಹಾಸದ ಕುರುಹುಗಳಲ್ಲಿ ಒಂದಾದದ್ದು ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಸಮೀಪವಿರುವ ಮಳಲೂರು.

ಈ ಮಳಲೂರನ್ನು ಜಾವಣಿಗೆ ಸೀಮೆಯ ನಾಡು ಎಂದು ಕರೆಯುತ್ತಾರೆ, ಸುಮಾರು ಹದಿನಾರು ಹಳ್ಳಿಗಳಿಂದ ಕೂಡಿದ ಈ ಜಾವಣಿಗೆ ಸೀಮೆಯ ನಾಡಿಗೆ ಮೈಸೂರು ಸಂಸ್ಥಾನದ ಅರಸರ ಆಳ್ವಿಕೆಯ ಛಾಯೆಯಿದೆ.

ಇಂತಹ ಜಾವಣಿಗೆ ಸೀಮೆಯ ನಾಡನ್ನು ಆಳಿದ ಪಾಳೆಗಾರ ನಾಡ ಮನೆ ದ್ಯಾವಣ್ಣ ಗೌಡರ ಆಳ್ವಿಕೆಗೆ 16 ಮತ್ತು 17ನೇ ಶತಮಾನಗಳ ಇತಿಹಾಸವಿದೆ, ಮಳಲೂರಿನಲ್ಲಿ ಈ ಪಾಳೇಗಾರ ನಾಡುಮನೆ ದ್ಯಾವಣ್ಣಗೌಡರ ಮನೆ ಮತ್ತು ಆ ಮನೆತನದ ವಂಶಸ್ಥರು ಈ 16ನೇ ಶತಮಾನದ ಹಿಂದೆಯೇ ಅಂದರೆ 12ನೇ ಶತಮಾನದಲ್ಲಿ ಕಲ್ಯಾಣದ ಶರಣರ ಸತ್ಕ್ಕ್ರಾಂತಿಯ ವಿಪ್ಲವದ ನಂತರ ಕಲ್ಯಾಣದಿಂದ ಇಲ್ಲಿಗೆ ವಲಸೆ ಬಂದವರು ಎಂದು ನಂಬಲಾಗಿದೆ, ಅಂದಿನಿಂದ ಇಂದಿನವರೆಗೂ ಈ ಗ್ರಾಮದಲ್ಲೇ ಈ ಮನೆತನ ನೆಲೆಯೂರಿದೆ. ಈ ಮನೆತನ ಮೈಸೂರು ರಾಜ ಮನೆತನದ ಅಡಿಯಲ್ಲಿ ಪಾಳೇಗಾರರಾಗಿ ಶತಶತಮಾನಗಳ ಕಾಲ ಆಡಳಿತ ನೀಡಿದ ಇತಿಹಾಸ ಈ ನೆಲದ ಜನಪದ ಸಂಸ್ಕೃತಿಯೊಳಗೆ ಇರುವುದನ್ನು ಕಾಣಬಹುದು.

ಗತಿಸಿ ಗತಕಾಲಕ್ಕೆ ಸರಿದಿರುವ ಇಂತಹ ಇತಿಹಾಸವನ್ನು ಕುರಿತು ಸಾಹಿತಿ ಕುಂದೂರು ಅಶೋಕ್ ಅವರುಹೊರ ತಂದಿರುವ ಪುಸ್ತಕ *ಜಾವಣಿಗೆನಾಡ ಸಂಸ್ಕೃತಿ ಮತ್ತು ಮಳಲೂರಮ್ಮನವರ ಜನಪದ ಜಾತ್ರೆ*

ಇತ್ತೀಚೆಗೆ, ಈ ಪುಸ್ತಕವನ್ನು ಕುರಿತು,ಕುಂಬಕ ಓದುಗ ಬಳಗದ ವತಿಯಿಂದ , ಮಳಲೂರಿನ ಪಾಳೇಗಾರ ನಾಡಮನೆ ದ್ಯಾವಣ್ಣಗೌಡರ ಮನೆಯ ಪ್ರಾಂಗಣದಲ್ಲಿ ಪುಸ್ತಕ ಓದು ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಈ ಮನೆತನದ ವಂಶಸ್ಥರು, ಸಾಹಿತಿಗಳು,ಲೇಖಕರು ಕವಿಗಳು,ರೈತಪರ ಮತ್ತು ನೀರಾವರಿ ಹೋರಾಟಗಾರರು, ಉಪನ್ಯಾಸಕರು ಮತ್ತು ಗ್ರಾಮಸ್ಥರು ಈ ಸಮಾರಂಭದಲ್ಲಿ ಭಾಗಿಯಾಗಿ ಪಾಳೇಗಾರ ನಾಡಮನೆ ದ್ಯಾವಣ್ಣ ಗೌಡರ ವೈಭವದ ದಿನಗಳನ್ನು, ಅವರ ಸಾಹಸಗಾಥೆಗಳನ್ನು, ಜನನಾಯಕರಾಗಿ ನೀಡಿದ ಆಡಳಿತವನ್ನು ನೆನಪಿಸಿಕೊಂಡು, ಜಾವಣಿಗೆ ಸೀಮೆಯ ಈ ಸಿರಿ ಸಂಪದವನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ ಕೊಡುವ ನಿಟ್ಟಿನಲ್ಲಿ ಓದು ಮತ್ತು ಸಂವಾದದಲ್ಲಿ ಪಾಲ್ಗೊಂಡರು.
••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿ ಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed