ಗಣಪತಿ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ….
1 min read
ಗಣಪತಿ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ…
*ಮೂಡಿಗೆರೆ ಪೊಲೀಸ್ ಠಾಣೆ*
ಈ ದಿವಸ ಬೆಳಿಗ್ಗೆ 11:00 ಗಂಟೆಯಿಂದ 12:30 ಗಂಟೆಯವರೆಗೂ ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಸಂಬಂಧಿಸಿದಂತೆ *ಸೌಹಾರ್ದ ಸಭೆಯನ್ನು* ಮೂಡಿಗೆರೆ ತಾಲೂಕು ದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆಯಿತು. ಸದರಿ ಕಾರ್ಯಕ್ರಮಕ್ಕೆ ಮೆಸ್ಕಾಂ, pdo,ಅರಣ್ಯ ಇಲಾಖೆ ಒಳಗೊಂಡಂತೆ ತಾಲೂಕಿನ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಎಲ್ಲಾ ಗಣಪತಿ ಆಯೋಜಕರು ಹಾಗೂ ಅಂಜುಮನ್ ಕಮಿಟಿ ಮತ್ತು ಮಸೀದಿಯ ಮುಖ್ಯಸ್ಥರುಗಳಿಗೆ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.

