ಶ್ರಾವಣ ಸಂಜೆಗೆ ತೆರೆ”. ಕಳಸ…
1 min read
“ಶ್ರಾವಣ ಸಂಜೆಗೆ ತೆರೆ”. ಕಳಸ. ಅಭೂತಪೂರ್ವ ಯಶಸ್ಸಿನೊಂದಿಗೆ… ಸಮಾರೋಪ ಕಾರ್ಯಕ್ರಮದ ಮೂಲಕ “ಶ್ರಾವಣ ಸಂಜೆಗೆ ” ತೆರೆ ಎಳೆಯಲಾಯಿತು… ಕಸಾಪ ಕಳಸ ಮತ್ತು ಅದರ ಎಲ್ಲಾ ಸಂಘ ಸಂಸ್ಥೆಗಳು ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆದ ಯೋಗ ಶಿಬಿರ, ಆರೋಗ್ಯ ಸಲಹೆ ಮತ್ತು ವಿವಿಧ ಸಾಹಿತ್ಯ ಮತ್ತು ಕಲಾ ಪ್ರಕಾರಗಳನ್ನೊಳಗೊಂಡ ವೈವಿಧ್ಯಮಯ ಕಾರ್ಯಕ್ರಮದ ಸಮಾರೋಪ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಕಸಾಪ ಕಳಸ ತಾಲ್ಲೂಕು ಅಧ್ಯಕ್ಷರಾದ
ಅ. ರಾ. ಸತೀಶ್ಚಂದ್ರರವರ ಅಧ್ಯಕ್ಷತೆಯಲ್ಲಿ…ಕನ್ನಡ ಪರೀಕ್ಷೆಯಲ್ಲಿ 125 ಅಂಕ ಪಡೆದ ವಿಧ್ಯಾರ್ಥಿಗಳಿಗೆ ಗೌರವಿಸಲಾಯಿತು…
ಯೋಗ ಗುರುಗಳಾದ ಪ್ರೇಮ್ ಕುಮಾರ್ ರವರಿಗೆ ಮತ್ತು ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಿರಣ ಬ್ರಹ್ಮದೇವ ರವರಿಗೆ ಸನ್ಮಾನಿಸಲಾಯಿತು…
ಜಿಲ್ಲಾ ಸಂಚಾಲಕರಾದ ಪಾಂಡು ರಂಗರವರು ಪ್ರವೇಶ ನುಡಿ ಮತ್ತು ಕಸಾಪ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಮ್ ಆಶಯ ನುಡಿಗಳನ್ನು ಹೇಳಿದರು…
ಡಾ. ಜಾನಕಿ ಸುಂದರೇಶ್… ಗೀತಾ ಮಕ್ಕಿಮನೆ… ಅಜಿತ್ ಪ್ರಸಾದ್… ರಜಿತ್ ಕೆಳಗೂರು… ಕೃಷ್ಣಮೂರ್ತಿ ಭಟ್… ಶೇಖರ್ ಶೆಟ್ಟಿ ಇವರುಗಳು ಮಾತನಾಡಿ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು…ಸುಜಯಾ ಸದಾನಂದರವರು ಮಂಡಾಳೆಯ ಬಗ್ಗೆ ಕವನ ಸ್ಪರ್ಧೆ ನಡೆಸಿ ಬಹುಮಾನಗಳನ್ನು ನೀಡಿದರು.
ನಗೀನ ಮತ್ತು ತಂಡದವರಿಂದ ನಾಡಗೀತೆ….ಆನುರಾಧ ಭಟ್ ರವರ ಪ್ರಾರ್ಥನೆ… ಚರಣ್ ರವರು ಸ್ವಾಗತಿಸಿ ಪ್ರಶಾಂತ್ ರವರು ವಂದಿಸಿ.. ಹಿತೇಶ್ ನಿರೂಪಿಸಿದರು….

