ನಾಗರಾಳು ಗ್ರಾ.ಪಂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ….
1 min read
ನಾಗರಾಳು ಗ್ರಾ.ಪಂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ
ಚಿಕ್ಕಮಗಳೂರು: ಜಗತ್ತಿನಲ್ಲಿ ಅಸಾಧ್ಯ
ಎಂಬುವುದಿಲ್ಲ. ಕಷ್ಟಸಾಧ್ಯ ಇದೆ. ನಾಗರಾಳು ಪಂಚಾಯಿತಿಯನ್ನು ಜನಪ್ರತಿನಿಧಿಗಳು ಸಂಕಲ್ಪ ಮಾಡಿದರೆ ಗ್ರಾಮಸ್ಥರ ಸಹಕಾರ, ಸಹಯೋಗದೊಂದಿಗೆ ಕಾರ್ಯೋನ್ಮುಖರಾದರೆ ಯಾವುದೂ ಅಸಾಧ್ಯವಿಲ್ಲ. ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸಲು ಶ್ರಮಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ಅವರು ಕಡೂರು ತಾಲ್ಲೂಕು ನಾಗರಾಳು ಗ್ರಾ.ಪಂ ಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾ.ಪಂ ಕಡೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೂತನ ಗ್ರಾ.ಪಂ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಾಸಕ ಹೆಚ್.ಡಿ. ತಮ್ಮಯ್ಯ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್ಆರ್ಇಜಿಎ ಮತ್ತು 15ನೇ ಹಣ-ಕಾಸು ಯೋಜನೆಯ ಹಣದ ಜೊತೆಗೆ ಗ್ರಾಮ ಪಂಚಾಯಿತಿಯ ಎಲ್ಲಾ ಅಧ್ಯಕ್ಷರು ಸದಸ್ಯರ ವಂತಿಕೆಯ ಮೂಲಕ 47.50 ಲಕ್ಷ ರೂ ವೆಚ್ಚದಲ್ಲಿ ಸುಂದರ ಕಟ್ಟಡ ನಿರ್ಮಾಣ ಮಾಡಿರುವುದು ಲೋಕಾರ್ಪಣೆ ಮಾಡಿದ್ದೇವೆ ಎಂದರು.
ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡಿದರೆ ಪ್ರತಿನಿತ್ಯ ಪೂಜೆ ಸಲ್ಲಿಸುವಂತೆ, ನೂತನ ಗ್ರಾಪಂ ಕಟ್ಟಡ ಕಟ್ಟಿದರೆ ಸ್ಥಳೀಯ ಸಂಸ್ಥೆಗೆ ಹೆಸರು ಬರುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಶಶಿಧರ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಭಾರಿ ಅಧ್ಯಕ್ಷ ಪ್ರಸನ್ನ, ಎನ್.ಎಸ್ ಬಸವರಾಜ್, ಜಿಪಂ ಮಾಜಿ ಸದಸ್ಯ ವಿಜಯ್ ಕುಮಾರ್, ಪ್ರವೀಣ್, ಕಲ್ಲಪ್ಪ, ಶಶಿಧರ್.ಜಿ.ಇ, ಚೇತನ್, ರವಿಕುಮಾರ್, ಹೇಮಾವತಿ ನಾಗಪ್ಪ, ಚಂದ್ರಪ್ಪ, ಹೇಮಾವತಿ ನಾಗರಾಜ್, ಚಂದ್ರಬಾಯಿ ರಾಜನಾಯ್ಕ, ಬಾಬು, ಅಶೋಕ್, ಚಂದ್ರಕಲಾ, ಯಶೋಧಮ್ಮ, ಮನೊರಂಜನಿ ರಮೇಶ್, ಆಶಾವಿಜಯ್ ಕುಮಾರ್, ವಿಶಾಲಾಕ್ಷಮ್ಮ, ಶೈಲಜಾ, ದೇವಿರಮ್ಮ, ಎಂ. ರಂಗಶೆಟ್ಟಿ, ಕವಿತ, ವಿನೋದ ಬಾಯಿ, ಬಾಲಾಜಿ ನಾಯ್ಕ, ನಳಿನಾ, ಷನ್ಮುಕಣ್ಣ, ನಟರಾಜ್, ವಿಜಯ್ ಕುಮಾರ್.ಜಿ.ಎನ್, ಅಶೋಕ್.ಸಿ. ಶಂಕರಮೂರ್ತಿ, ಎಸ್, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಶಾರದ ಸ್ವಾಗತಿಸಿದರು.
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏

