लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

D.S.S ಗಟ್ಟಿಯಾಗಿದ್ದರೆ, ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಯಾವೊತ್ತೋ.. ನ್ಯಾಯಾ ಸಿಗುತ್ತಿತ್ತು…………..

1 min read

D.S.S ಗಟ್ಟಿಯಾಗಿದ್ದರೆ, ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಯಾವೊತ್ತೋ.. ನ್ಯಾಯಾ ಸಿಗುತ್ತಿತ್ತು………….. ✊✊✊✊✊✊✊ ನ್ಯೂಸ್ ಚಾನಲ್ ಆನ್ ಮಾಡಿದರೆ ಸಾಕು ಮೂಳೆ, ಅಸ್ಥಿಪಂಜರದೆ ಕಥೆ. ಈ ದಿನ ಎರಡನೇ ಸ್ಥಳವನ್ನು ಅಗೆಯಲಾಗಿದೆ. ಅಷ್ಟು ಮೂಳೆ ಗಳು ಸಿಕ್ಕಿತು, ಇಷ್ಟು ಮೂಳೆ ಸಿಕ್ಕಿತು. ಅಸ್ತಿಪಂಜರ ನಾಳೆ ಸಿಗಬಹುದು. ಅನಾಮಿಕ ವ್ಯಕ್ತಿ ಭೀಮಾ ಹೇಳುತ್ತಿರುವುದು ಭಯಂಕರವಾಗಿದೆ ಎಂಬುವ ಸುದ್ದಿ ದಿನಂಪ್ರತಿ. ಉತ್ಕನ್ನನ ಕಾರ್ಯಕ್ಕೆ ದಿನಂಪ್ರತಿ ಖರ್ಚಾಗುತ್ತಿರುವ ಹಣ ಲಕ್ಷಾಂತರ ರೂಪಾಯಿಗಳು. ಸುದ್ದಿ ಮಾಡಲು ಹೋದವರು ಮೇಲೆ ಮಾರಾಣಾಂತಿಕ ಹಲ್ಲೆ, ಆರೋಪಿಗಳಿಗೆ ಪ್ರಭುತ್ವದಿಂದ ಶ್ರೀ ರಕ್ಷೆ. S.I.T ತನಿಖೆ ಬೆಳಕಿಗೆ ಬಂದ ತಕ್ಷಣ ಸಂತಸ್ತರಿಗೆ ನ್ಯಾಯ ಸಿಗುತ್ತದೆ ಎಂದೇಳುವುದು ಕಷ್ಟ ಸಾಧ್ಯಾ. ಒಂದು ವೇಳೆ ಸಿಕ್ಕರು ಪ್ರಭಾವಿಗಳಿಗೆ ಶಿಕ್ಷೆ ಆಗುವ ಪ್ರಮಾಣ ಕಡಿಮೆ. ಏಕೆಂದರೆ ಪ್ರಭುತ್ವದ ಶ್ರೀ ರಕ್ಷೆ. ಆದರೆ ಈ ದಿನಮಾನಗಳಲ್ಲಿ “ದಲಿತ ಸಂಘರ್ಷ ಸಮಿತಿ”(D.S.S) ಗಟ್ಟಿಯಾಗಿದ್ದರೆ ಖಂಡಿತವಾಗಿಯೂ ಧರ್ಮಸ್ಥಳದಲ್ಲಿ ನಡೆದಿರುವ ಅಮಾನೀಯಾ ಜೀವ ವಿರೋಧಿ ಕೃತ್ಯಗಳಿಗೆ ಬಹಳ ವರ್ಷಗಳ ಹಿಂದೆಯೇ ನ್ಯಾಯ ಸಿಗುತ್ತಿತ್ತು. ದಲಿತ ಸಂಘರ್ಷ ಸಮಿತಿಯ ಹೋರಾಟಗಳು ಜಾತಿಮೀರಿದ, ಧರ್ಮಮೀರಿದ ಲಿಂಗ ತಾರತಮ್ಯವಿಲ್ಲದ ಪ್ರಾಮಾಣಿಕ ಸಾಮಾಜಿಕ ಹೋರಾಟವಾಗಿತ್ತು. ಅದಕ್ಕೆ ದೊಡ್ಡ ಉದಾಹರಣೆ ಎಂದರೆ ………………………..ಅನುಸೂಯಮ್ಮನ ಪ್ರಕರಣ: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೀಕಲ್ಲು ಹೋಬಳಿಯ ಹುಣಸೀಕೋಟೆ ಒಂದು ಚಿಕ್ಕ ಗ್ರಾಮ. ಶೇಷಗಿರಿಯಪ್ಪ ಎಂಬ ಬಡ ಕುಂಬಾರ ಮಡಿಕೆ, ಕುಡಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅದೇ ಊರಿನ ಕೃಷ್ಣೇಗೌಡ ಮಾಲೂರು ತಾಲ್ಲೂಕಿನ ಬೋರ್ಡ್ ಅಧ್ಯಕ್ಷ ಅಲ್ಲದೆ ದೊಡ್ಡ ಜಮೀನ್ದಾರ ಹೀಗಿರುವಾಗ ಕೃಷ್ಣೇಗೌಡ 27 ಗುಂಟೆ ಭೂ ಸಂಬಂಧವಾಗಿ ಮನಸ್ತಾಪ ಉಂಟಾಯಿತು. ಹುಣಸೆ ಕೋಟೆ, ಮುನಿಸ್ವಾಮಿ ಅವರ ಮಗ ಎಚ್.ಎಂ. ಕೃಷ್ಣಪ್ಪ ತನ್ನ 27 ಗುಂಟೆ ಜಮೀನನ್ನು ಮಾರಾಟ ಮಾಡಲು ಬಯಸಿದ ಕೃಷ್ಣಪ್ಪನ ಈ ಜಮೀನನ್ನು ಕೃಷ್ಣೇಗೌಡ ತನಗೆ ಬೇಕಾಗಿದ್ದ ಹೆಂಗಸಿಗೆ ಕೊಡಿಸಬೇಕೆಂದುಕೊಂಡಿದ್ದ ಆದರೆ ಕೃಷ್ಣಪ್ಪನೇ ಶೇಷಗಿರಿಯಪ್ಪನ ಬಡತನ ಹಾಗೂ ನಾಲ್ಕಾರು ಮಕ್ಕಳು ಇರುವುದನ್ನು ಗಮನಿಸಿ ಹೇಗೋ ಬದುಕಿಕೊಳ್ಳಲಿ ಎಂದು ಶೇಷಗಿರಿಯಪ್ಪನಿಗೆ ಕೊಟ್ಟಿದ್ದ ಇದರಿಂದ ತಾನು ಬೇರೆ ಯಾರಿಗೂ ಕೊಡಿಸಬೇಕೆಂದಿದ್ದ ಜಮೀನನ್ನು ಶೇಷಗಿರಿಯಪ್ಪ ಕೊಂಡುಕೊಂಡನಲ್ಲ ಎಂಬ ಆಘಾತ ಕೃಷ್ಣೆಗೌಡನಿಗೆ ಆಯಿತು ಅಂದಿನಿಂದ ಕೃಷ್ಣೇಗೌಡ ಶೇಷಗಿರಿಯಪ್ಪನ ಮೇಲೆ ದ್ವೇಷಕಾರತೊಡಗಿದ ಶೇಷಗಿರಿಯಪ್ಪನ ಸಂಸಾರವನ್ನು ನಾಶ ಮಾಡಲು ತನ್ನ ಹಣ ಅಧಿಕಾರ ಬಳಸಿ ಕಿರುಕುಳ ಕೊಡಲಾರಂಬಿಸಿದ. ಶೇಷಗಿರಿಯಪ್ಪ ತನ್ನ ಗುಡಿಸಲ ಮುಂದೆ ಮಡಿಕೆಗಳನ್ನು ಸುಡುವ ಆವುಗೆಯನ್ನು ಕಟ್ಟಿಕೊಂಡಿದ್ದ ಕೃಷ್ಣೇಗೌಡ ಈ ಆವುಗೆ ಜನ ಸಮುದಾಯಕ್ಕೆ ತೊಂದರೆ ಮಾಡುತ್ತದೆಂದು ಊರಿನ ಸೌಂದರ್ಯಕ್ಕೆ ಮಸಿ ಬಳಿದಿದೆ ಎಂದು ಆರೋಪಿಸಿ ಅದನ್ನು ಕಿತ್ತು ಹಾಕುವಂತೆ P.D.O ಅವರಿಂದ ನೋಟಿಸ್ ಕಳಿಸಿದ ಶೇಷಗಿರಿಯಪ್ಪನಿಗೆ ಎರಡು ಎಕರೆ ಪಿತ್ರಾರ್ಜಿತ ಆಸ್ತಿ ಇತ್ತು, ಕೃಷ್ಣೇಗೌಡನಿಗೆ ಇದರ ಮೇಲು ಕಣ್ಣು ಬಿತ್ತು, ಇದರಿಂದ ರಾಗಿ ಬೆಳೆಯುತ್ತಿದ್ದ ಆ ಭೂಮಿಯನ್ನು ನಿವೇಶನ ಇಲ್ಲದವರಿಗೆ ನಿವೇಶನ ಆಯ್ಕೆ ಮಾಡಲಾಗಿದೆ. ಎಂದು ಜಿಲ್ಲಾಧಿಕಾರಿಗಳಿಂದ ಆಜ್ಞೆ ಹೊರಡಿಸಿದ ಇನ್ನೂ ಇದರಲ್ಲಿ ಸೀಬೆ ಬೆಳೆಯುತ್ತಿದ್ದ ಒಂದು ಎಕರೆ ಭೂಮಿಯನ್ನು 1962-63 ರಲ್ಲಿ ಕೋಲಾರದ ಸಬ್ ಡಿವಿಸನ್ ಸಾಹೇಬರು ಮಂಜೂರು ಮಾಡಿದರು. ಆದರೆ ಕೃಷ್ಣೆಗೌಡ ಇದನ್ನು ಅಕ್ರಮ ಸಾಗುವಳಿ ಎಂದು ತಹಶೀಲ್ದಾರ್ ರವರಿಗೆ ಹೇಳಿಕೊಟ್ಟ ಇಂತಹ ತಪ್ಪಿಗಾಗಿ 2780 ಗಳನ್ನು ಕಟ್ಟುವಂತೆ ನೋಟಿಸ್ ಜಾರಿ ಮಾಡಿಸಿದ ಆದರೆ ಶೇಷಗಿರಿಯಪ್ಪ ತನ್ನಲಿದ್ದ ದಾಖಲೆಗಳ ಮೂಲಕ ತಾನು ತಪ್ಪು ಮಾಡಿಲ್ಲವೆಂದು ಹಾಗೂ ಕೃಷ್ಣೇಗೌಡ ಮುಂತಾದವರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆಂದು ಮೇಲಾಧಿಕಾರಿಗಳಿಗೆ ತಿಳಿಸಿದ ಇದರಿಂದ ಕೃಷ್ಣೇಗೌಡನಿಗೆ ಮಿತಿಮೀರಿದ ಕೋಪ ಬಂತು ಸರ್ಕಾರದ ಕಾನೂನನ್ನು ತನ್ನ ಕೈಗೆ ತೆಗೆದುಕೊಂಡ ಶೇಷಗಿರಿಯಪ್ಪನ ಗುಡಿಸಲು ಅಕ್ರಮ ವೆಂದು ಅದನ್ನು ಕಿತ್ತು ಬಿಸಾಕಿದರು. ಮಡಿಕೆಗಳನ್ನು ಒಡೆದರು, ರಾಗಿ ಬೆಳೆಯನ್ನು ಕುಯ್ದು ಮನೆಗೆ ಸಾಗಿಸಿದರು ಸೀಬೆ ಗಿಡವನ್ನು ಕಡಿದು ವನಮಹೋತ್ಸವ ಆಚರಿಸಿದರು. ದೊಣ್ಣೆ, ಮಚ್ಚು, ಹಾರೆಗಳನ್ನು ಹಿಡಿದು ಶೇಷಗಿರಿಯಪ್ಪನನ್ನು ಕೊಂದೆ ಹಾಕುತ್ತೇವೆ ಎಂದು ಕೂಗಾಡಿದರು. ತನ್ನ ಆಸ್ತಿ ಮತ್ತು ಜೀವ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ರಿಗೆ 01.02.1979 ರಿಂದ 04.12.1979 ವರೆಗೆ ಸುಮಾರು 17 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಯಾವುದಕ್ಕೂ ಉತ್ತರ ಸಿಗಲಿಲ್ಲ ಇಷ್ಟೇ ಅಲ್ಲದೆ 26.05.1979 ರಂದು ಆಗಿನ ಮುಖ್ಯಮಂತ್ರಿ, ದೇವರಾಜು ಅರಸು ಅವರಿಗೂ ಅರ್ಜಿ ಬರೆದು ತನ್ನ ಜೀವಭೀತಿ ಹೇಳಿಕೊಂಡರು ಅರ್ಜಿಯ ಪ್ರತಿಯನ್ನು ವಿರೋಧ ಪಕ್ಷದ ನಾಯಕರಿಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗೃಹ ಇಲಾಖೆಗೆ ಐ.ಜಿ.ಪಿ ಗೆ ಡಿ.ಜಿ.ಪಿ ಅವರಿಗೂ ಕಳಿಸಿದರು. 27.07 1974 ರಂದು ಕ್ಷೇತ್ರದ ಶಾಸಕರಾಗಿದ್ದ ಪಿ.ಎನ್. ರೆಡ್ಡಿ ಅವರಿಗೂ ಅರ್ಜಿ ಸಲ್ಲಿಸಿ ಕೃಷ್ಣೇಗೌಡ ಮತ್ತು ಅವರ ಸಹೋದರರಿಂದ ನನ್ನ ಪ್ರಾಣ ಉಳಿಸಿ ಎಂದು ಬೇಡಿಕೊಂಡ ಅಂದು ಶಾಸಕನಾಗಿದ್ದ ಶ್ರೀಮತಿ ರೇಣುಕಾ ರಾಜೇಂದ್ರನ್ ಅವರ ಮೂಲಕ ಜಿಲ್ಲೆಯ S.P ಅವರಿಗೂ ಹೇಳಿಸಲಾಗಿತ್ತು ಇಷ್ಟೆಲ್ಲ ಪ್ರಯತ್ನಗಳು ನಡೆದರು ಶೇಷಗಿರಿಯಪ್ಪನಿಗೆ ಯಾವುದೇ ಫಲ ಸಿಗಲಿಲ್ಲ. ಶೇಷಗಿರಿಯಪ್ಪನ ಬದುಕಿನ ಕರಾಳ ದಿನಗಳು ಕಾಣಿಸತೊಡಗಿದವು. ಅಂದರೆ 1979ರ ಆಗಸ್ಟ್ 6ನೇ ತಾರೀಕು ಕೃಷ್ಣೇಗೌಡನ ತಮ್ಮ ವೆಂಕಟೇಶಪ್ಪ, ನಂಜುಂಡ ಮುಂತಾದವರು 15-20 ಜನ ಗುಂಡಾಗಳು ಸೀಬೆ ತೋಪು ಕಾಯುತ್ತಿದ್ದ ಶೇಷಗಿರಿಯಪ್ಪನ 19 ವರ್ಷದ ವಿಧವೆ ಮಗಳು ಅನುಸೂಯಮ್ಮನ ಮೇಲೆ ಬರ್ಬರವಾಗಿ ನಿರಾತಂಕವಾಗಿ ಅತ್ಯಾಚಾರ ಮಾಡಿದರು. ಇಷ್ಟಕ್ಕೆ ಸಮಾಧಾನವಾಗದೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೂಸೂಯಮ್ಮನ ಬಾಯಲ್ಲಿ ಮೂತ್ರ ವಿಸರ್ಜನೆ ಮಾಡಿ ಹೋದರು. ಈ ಬಗ್ಗೆ ಪ್ರಕರಣ ದಾಖಲಿಸಿದರು ಶೇಷಗಿರಿಯಪ್ಪನಿಗೆ ಸರ್ಕಾರ, ಅಧಿಕಾರಿಗಳು, ಮಂತ್ರಿಗಳು, ಶಾಸಕರಿಂದ ಯಾವುದೇ ನ್ಯಾಯ ದೊರೆಯಲಿಲ್ಲ. ಕೊನೆಗೆ ಟೀಕಲ್ಲು ಪೊಲೀಸರಿಗೆ ಅರ್ಜಿ ಸಲ್ಲಿಸಿ ನನ್ನ ಕೊಲೆ ಆಗುವುದನ್ನು ತಪ್ಪಿಸಿ ಎಂದು ಅಂಗಲಾಚಿದ್ದ ಅದು ಕೂಡ ಸಾಧ್ಯವಾಗದಂತೆ ಕಾಣಲಿಲ್ಲ ಇಷ್ಟೆಲ್ಲ ನಡೆದ ತರುವಾಯ, ಶೇಷಗಿರಿಯಪ್ಪನಿಗೆ ದಿಕ್ಕು ತೋಚದಂತಾಗಿದೆ ಆದರೂ ನ್ಯಾಯಕ್ಕಾಗಿ 1979 ರ ನವೆಂಬರ್ ನಲ್ಲಿ ದಲಿತ ಸಂಘರ್ಷ ಸಮಿತಿ ಮಾಲೂರು ತಾಲ್ಲೂಕಿನಲ್ಲಿ ಜಾಥಾ ಹೋಗುತ್ತಿರುವ ಸಂದರ್ಭದಲ್ಲಿ ಕುಂಬಾರ ಶೇಷಗಿರಿಯಪ್ಪ ತನ್ನ ಮೇಲೆ ನಡೆದ ದಬ್ಬಾಳಿಕೆಯನ್ನು ತನ್ನ ಮಗಳು ಅನುಸೂಯಮ್ಮನ ಮೇಲೆ ನಡೆದ ಅತ್ಯಾಚಾರವನ್ನು ದಲಿತ ಸಂಘರ್ಷ ಸಮಿತಿಯ ಹೋರಾಟಗಾರರೊಂದಿಗೆ ಹೇಳಿಕೊಂಡ. ಇದನ್ನು ಆಲಿಸಿದ (D.S.S) ದಲಿತ ಸಂಘರ್ಷ ಸಮಿತಿಯ ಕೋಲಾರ ಶಾಖೆಯು ಈ ಅನ್ಯಾಯವನ್ನು ಪ್ರತಿಭಟಿಸಿ 29.11.1979 ರಂದು ಮಾಲೂರಿನಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ಈ ಬಗ್ಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮೆರವಣಿಗೆ ಧರಣಿ ಸತ್ಯಾಗ್ರಹ ಖಂಡನಾ ಸಭೆಗಳನ್ನು ನಡೆಸಲಾಯಿತು. ಇದರಲ್ಲಿ ಹೋರಾಟಗಾರರನ್ನು ಬಂಧಿಸಿ ಅವರ ಮೇಲೆ ಮೊಕದ್ದಮೆ ದಾಖಲಿಸುತ್ತಾರೆಯೇ ವಿನಃ ಅಪರಾಧಿಗಳನ್ನು ಬಂಧಿಸಲಿಲ್ಲ. ಸರ್ಕಾರದ ಯಂತ್ರ ಮತ್ತು ಅಧಿಕಾರಿಗಳು ಕೃಷ್ಣೇಗೌಡನ ಪರವಾಗಿದ್ದರು. ಇದರಿಂದ ನಾವು ಏನು ಮಾಡಿದರೂ ನಡೆಯುತ್ತದೆ ಎಂದು ಹುರುಪುಗೊಂಡ ಕೃಷ್ಣೇಗೌಡ ತನ್ನ ದುಷ್ಟ ಕೂಟವನ್ನು ಕಟ್ಟಿಕೊಂಡು 30.03.1981 ರಂದು ಶೇಷಗಿರಿಯಪ್ಪನ ಮನೆಗೆ ನುಗ್ಗಿ ಅವನನ್ನು ಕೊಲೆ ಮಾಡಿ, ಅವನ ತಾಯಿಯ ತೋಳು ಕತ್ತರಿಸಿದರು. ಮನೆ ಮಂದಿ ಗೆಲ್ಲಾ ಭೀಕರ ಗಾಯಗಳಾಗಿ ಆಸ್ಪತ್ರೆ ಸೇರಿದರು. ಕೊನೆಗೂ ನಿರೀಕ್ಷಿತ ಶೇಷಗಿರಿಯಪ್ಪನ ಕೊಲೆಯನ್ನು ಯಾರಿಂದಲೂ ತಡೆಯಲಾಗಲಿಲ್ಲ. ಈ ಘಟನೆಯು ಡಿ.ಎಸ್.ಎಸ್ ಸಂಘಟನೆ ಅವರಿಗೆ ಬರಸಿಡಿಲು ಬಡಿದಂತಾಯಿತ್ತು.ಈ ಘಟನೆಯನ್ನು ಖಂಡಿಸಿ ನೂರಾರು ಕಾರ್ಯಕರ್ತರು ಹುಣಸೆ ಕೋಟೆಯಲ್ಲಿ ಜಮಾವಣೆಗೊಂಡರು ಆದರೂ ಕೃಷ್ಣೇಗೌಡನ ದರ್ಪ ಅಹಂಕಾರ ಮಾತ್ರ ಕಡಿಮೆಯಾಗಲಿಲ್ಲ. ಜಾಥಾಕ್ಕೆ ತೊಂದರೆ ಮಾಡಲು ಗುಂಡಾ ಪಡೆಯನ್ನು ಬಿಟ್ಟಿದ್ದನು. ಇದಾವುದನ್ನು ಲೆಕ್ಕಿಸದೆ ಕಾರ್ಯಕರ್ತರು ಹಿರಿಯರೊಬ್ಬರ ಹಣತಿಯಂತೆ ಶೇಷಗಿರಿಯಪ್ಪನ ಸಮಾಧಿಯ ಬಳಿ ಎರಡು ನಿಮಿಷ ಮೌನ ಆಚರಿಸಿ ಅನುಸೂಯಮ್ಮನ ಕೈಗೆ ಉರಿಯುತ್ತಿದ್ದ ಪಂಜನ್ನು ನೀಡಿ ಅಧಿಕೃತವಾಗಿ ಜಾಥಾ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಅನುಸೂಯಮ್ಮನ ಅತ್ಯಾಚಾರ ಪ್ರಕರಣ ವನ್ನು ಕುರಿತು ಕೋಟಿಗಾನಹಳ್ಳಿ ರಾಮಯ್ಯನವರು “ಕೋಟಿ ಕೋಟಿ ಬಾಧೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀವು ಹುಟ್ಟಿ ಬೆಳೆದೆಯವ್ವ ನನ್ನ ತಂಗಿ ನನ್ನ ತಂಗಿ ಅನುಸೂಯ” ಎನ್ನುವ ಹಾಡು ಇಡೀ ಪ್ರಕರಣವನ್ನು ಕುರಿತಂತಹ ಒಟ್ಟು ಸಾರಾಂಶವಾಗಿತ್ತು. ಹುಣಸೇ ಕೋಟೆಯಿಂದ ಹೊರಟ ಜಾಥಾ ಕುಂತೂರು, ಮಾಲೂರು ಹೊಸಕೋಟೆ ಮೂಲಕ ಬೆಂಗಳೂರನ್ನು ತಲುಪುತ್ತಿದ್ದಂತೆ ಘೋಷಣೆಗಳು ಮುಗಿಲು ಮುಟ್ಟಿದವು ನ್ಯಾಯಕ್ಕಾಗಿ ಬಂದಿದೆ ದಲಿತ ಸಂಘರ್ಷ ಸಮಿತಿಯು ಆಗ್ರಹಿಸುತ್ತಿದೆ ಕೊಲೆಗಡುಕ ಕೃಷ್ಣೇಗೌಡನಿಗೆ ಸಿಕ್ಕಿರುವ ನಿರೀಕ್ಷಣಾ ಜಾಮೀನು ರದ್ದಾಗಲಿ, ಕೊಲೆಗಡುಕರಿಗೆ ಶಾಮಿಲ್ ಆಗಿರುವ ಕೋರ್ಟ್, ಪೊಲೀಸ್ ಅಧಿಕಾರಿಗಳಿಗೆ, ಸರ್ಕಾರಕ್ಕೆ ಧಿಕ್ಕಾರ… ಕೃಷ್ಣೆಗೌಡನ್ನು ಅರೆಸ್ಟ್ ಮಾಡಲಾಗದ ಷಂಡ ಸರ್ಕಾರವೇ ನಮ್ಮನ್ನಾದರೂ ಅರೆಸ್ಟ್ ಮಾಡಿ ಇತ್ಯಾದಿ ಘೋಷಣೆಗಳು ಹಾಡುಗಳು ಕೇಳುತ್ತಿದ್ದವು ಹೀಗೆ ಬಂದ ಜಾಥಾ ಕಬ್ಬನ್ ಪಾರ್ಕ್ ನಲ್ಲಿ ಸಭೆ ನಡೆಸಿತು. ದಲಿತ ಸಂಘರ್ಷ ಸಮಿತಿಯು ಉಗ್ರವಾದ ಹೋರಾಟಕ್ಕೆ ಹೆದರಿದ ಸರ್ಕಾರ ಅಂತಿಮವಾಗಿ ತನ್ನ ತಪ್ಪಿನ ಅರಿವಾಗಿ ಕೃಷ್ಣೇಗೌಡ ಮತ್ತು ಅವರ ದುಷ್ಟಕೂಟ ಸೇರಿದಂತೆ 26 ಜನರಿಗೆ ಜೀವಾವಧಿ ಶಿಕ್ಷೆಯಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶೇಷಗಿರಿಯಪ್ಪ ಕುಂಬಾರ ಸಮುದಾಯದವರು ಆದರೂ ಜಾತಿ ಮೀರಿ ಹೋರಾಟ ಮಾಡಿದ ಫಲವಾಗಿ ಕೃಷ್ಣೆಗೌಡನ ಸಹಚಾರರಿಗೆ ಜೈಲು ಶಿಕ್ಷೆ ಆಯಿತು. ಇಂತಹ ಅನೇಕ ದಲಿತೇತರರಿಗೆ ದಲಿತ ಸಂಘರ್ಷ ಸಮಿತಿಯು ನ್ಯಾಯಾ ಕೊಡಿಸಿದ್ದು ಚರಿತ್ರೆ ಪುಟಗಳಲ್ಲಿ ದಾಖಲಾಗಿದೆ. ಮಾತ್ರವಲ್ಲದೆ ಹೋರಾಟದ ಮೂಲಕ PTCL ಕಾಯ್ದೆ ತಂದಿದ್ದು, ವಸತಿ ಶಾಲೆಯನ್ನು ಸ್ಥಾಪಿಸಲು ನಿರಂತರ ಹೋರಾಟ ಮಾಡಿದ ಫಲವಾಗಿ ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಪ್ರಾರಂಭವಾದವು ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ಅನೇಕ ಭೂ ಸುಧಾರಣೆಗಳು ಜಾರಿಯಾದವು ಸರ್ಕಾರವನ್ನೇ ನಡುಗಿಸುತ್ತಿದ್ದ D.S.S ಹೋರಾಟವನ್ನು ಗಮನಿಸಿದ ಪ್ರಭುತ್ವ ನಿಧಾನವಾಗಿ ಸಂಘಟನೆಯನ್ನು ಒಡೆಯುವ ಪ್ರಯತ್ನ ಮಾಡಿ ಅದ್ದರಿಂದ ಯಶಸ್ಥಿಯಾಯಿತು. ಶತ್ರುವಿನ ಸ್ವರೂಪ ಬದಲಾಗಿ ದಲಿತ ಸಂಘರ್ಷ ಸಮಿತಿ ವಿಭಾಗವಾಯಿತು. ಒಂದು ವೇಳೆ 1974 ರಿಂದ 1985 ರ ವರೆಗೆ ಗಟ್ಟಿಯಾಗಿದ್ದಂತಹ ದಲಿತ ಸಂಘರ್ಷ ಸಮಿತಿಯು ಈಗ ರಾಜ್ಯದಲ್ಲಿದ್ದಿದ್ದರೆ ಧರ್ಮಸ್ಥಳದಲ್ಲಿ ನಡೆದಿರುವ ಅಮಾನೀಯಾ ಜೀವ ವಿರೋಧಿ ಕೃತ್ಯವನ್ನು ಯಾವೊತ್ತೋ.. ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡಿಸುತ್ತಿತ್ತು. ಸಮಾಜದಲ್ಲಿ ಶೋಷಣೆಗೊಳಗಾಗಿರುವ ಶೋಷಕರ ಧ್ವನಿಯಾಗಿರುವ ದಲಿತ ಸಂಘರ್ಷ ಸಮಿತಿಯು ಏಕೀಕೃತ ಸಂಘಟನೆಯಾಗಿ ಕರ್ನಾಟಕದಾದ್ಯಂತ ಪುನಃ ಪ್ರಾರಂಭಿಸಬೇಕಾಗಿದೆ. ಈ ಬೆಳವಣಿಗೆ ಬಹುಬೇಗನೆ ಆಗಬೇಕೆಂಬುದೇ ನನ್ನ ಅಂತಿಮ ಆಶಯವಾಗಿದೆ. ಸೌಜನ್ಯ ಸೇರಿದಂತೆ ಮುಗ್ಧ ಹೆಣ್ಣು ಮಕ್ಕಳನ್ನು ಬಲಿ ತೆಗೆದುಕೊಂಡ ದುಷ್ಕರ್ಮಿಗಳಿಗೆ ಉಗ್ರವಾದ ಶಿಕ್ಷೆಯಾಗಲಿ, ಧರ್ಮಸ್ಥಳ ವನ್ನು ಮುಜಾರಾಯಿ ಇಲಾಖೆಗೆ ಸೇರಿಸಲಿ … ಬರಹ: ✍️ ಡಾ. ಹರೀಶ್ ನಲ್ಕೆ ಸಂಶೋಧನಾ ಬರಹಗಾರರು…

About Author

Leave a Reply

Your email address will not be published. Required fields are marked *

You may have missed