लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮುತಾಲಿಕ್‌ ಜತೆ ಶಾಸಕಿ ವೇದಿಕೆ ಹಂಚಿಕೆ: ಮೋಟಮ್ಮ ಸಮರ್ಥನೆ……

1 min read

ಮುತಾಲಿಕ್‌ ಜತೆ ಶಾಸಕಿ ವೇದಿಕೆ ಹಂಚಿಕೆ: ಮೋಟಮ್ಮ ಸಮರ್ಥನೆ

ಮೂಡಿಗೆರೆ: ಯಾವ ಸಂಘಟನೆಯಾಗಲಿ ಪಕ್ಷವಾಗಲಿ ಹಿಂದುತ್ವವನ್ನು
ಗುತ್ತಿಗೆ ಪಡೆದಿಲ್ಲ. ಅದು ಬಿಜೆಪಿಯ ಅಥವಾ ಶ್ರೀ ರಾಮಸೇನೆಯ ಸ್ವತ್ತಲ್ಲ. ಕಾಂಗ್ರೆಸ್ ಪಕ್ಷ ಹಿಂದುತ್ವದ ವಿರೋಧಿಯಲ್ಲ ಎಂಬುದು ತೋರಿಸಿಕೊಡಲು ಶಾಸಕಿ ನಯನಾ ಮೋಟಮ್ಮ ಸಾರ್ವಜನಿಕ ಪೆಂಡಾ ಲಿನಲ್ಲಿ ನಡೆದ ಸಾರ್ವಜನಿಕ ಮಹಾಗಣಪತಿ ಲಾಂಛನದ ಬಿಡುಗಡೆ ಕಾರ್ಯಕ್ರಮಕ್ಕೆ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಭಾಗವಹಿಸಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಅವರೊಂದಿಗೆ ಶಾಸಕಿ ನಯನಾ ಅವರು ವೇದಿಕೆ ಹಂಚಿಕೊಂಡಿದ್ದನ್ನು ಮಾಜಿ ಸಚಿವೆ ಮೋಟಮ್ಮ ಸಮರ್ಥಿ ಸಿಕೊಂಡಿದ್ದಾರೆ.

ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಾ ಗಣಪತಿ ಸಮಿತಿ ಮತ್ತು ದುರ್ಗಾ ಸೇವಾ ಸಮಿತಿ ಈ ಎರಡೂ ಸಮಿತಿ ಗಳಿಗೂ ಶಾಸಕರಾದವರು ಕಾರ್ಯಾಧ್ಯಕ್ಷರಾಗಿರುತ್ತಾರೆ. ಕಾವಿ ಶಾಲು ಧರ್ಮದೇವರು ಯಾವುದೇ ವರ್ಗಕ್ಕೂ ಸೀಮಿತಗೊಳಿಸಿಲ್ಲ.

ಮುತಾಲಿಕ್ ಜತೆ ಶಾಸಕಿ ವೇದಿಕೆ ಹಂಚಿಕೆ:
ಸಮರ್ಥನೆ
ನಾನೂ ಕೂಡಾ ಹಲವಾರು ಬಾರಿ ಕೇಸರಿಬಣ್ಣದ ಸೀರೆ ಧರಿಸಿದ್ದೇನೆ. ಕೇಸರಿ ಸೀರೆ ಧರಿಸಿದರೆ ಅಥವಾ ಶಾಲು ಹೊದ್ದುಕೊಂಡ ಮಾತ್ರಕ್ಕೆ ನನ್ನ ಸಿದ್ದಾಂತ ಬದಲಾವಣೆಯಾಗದು. ಗಣಪತಿ ಸಮಿತಿಯ ಕೆಲ ವಿದ್ಯಾಮಾನಗಳನ್ನು ಸರಿಪಡಿಸಿ ಎಲ್ಲ ಹಿಂದೂಗಳು ಒಟ್ಟಾಗಿ ಸಾರ್ವಜನಿಕಗಣಪತಿ ಉತ್ಸವವನ್ನು ಆಚರಿಸುವ ಸದುದ್ದೇಶದಿಂದ ಸಮಿತಿಗೆ ಹೋಗಿದ್ದಾರೆ. ಕಾರ್ಯಾಧ್ಯಕ್ಷೆಯಾಗಿ

ಉತ್ತರಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಅವರು ‘ಆಯೋಜಿಸಿದ್ದ ಕುಂಭಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸ್ಪೀಕ‌ರ್ ಯು.ಟಿ.ಖಾದರ್ ಭಾಗವಹಿಸಿದ್ದರು. ಅವರವರ ನಂಬಿಕೆಯಂತೆ ಎಲ್ಲ ಕಡೆಗೂ ಎಲ್ಲಾ ಧರ್ಮಿಯರು ಹೋಗುತ್ತಾರೆ. ಅದನ್ನು ವಿವಾದವನ್ನಾಗಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ನನ್ನ ಪುತ್ರಿ ಶಾಸಕಿ ನಯನಾ ಮೋಟಮ್ಮ ಅವರು ಪ್ರಮೋದ್ ಮುತಾಲಿಕ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಅಪಸ್ವರವಿಲ್ಲ. ಪ್ರತಿಯೊಬ್ಬರ ಅಭಿಪ್ರಾಯ

ಶಾಸಕಿ ವಿಭಿನ್ನವಾಗಿರುವುದರಿಂದ ವೈಯುಕ್ತಿಕವಾಗಿ ತಮ್ಮತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಸಹಜ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸರಿಪಡಿಸಿಕೊಳ್ಳುತ್ತೇವೆ. ನಯನಾಮೋಟಮ್ಮ ಅವರು ಕಾಂಗ್ರೆಸ್ ಸಿದ್ದಾಂತವನ್ನು ಕಡೆಗೆಣಿಸಿಲ್ಲ ಪಕ್ಷವನ್ನು ಬಿಡುವ ಮಾತನ್ನು ಅವರು ಹೇಳಿಲ್ಲ. ಪ್ರತಿಯೊಂದು ಸಮುದಾಯದವರು ಕೂಡಾ ಬೆಂಬಲ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ತಪ್ಪು ಕಂಡುಬಂದಿಲ್ಲ. ವಿವಾದದ ಬಗ್ಗೆ ವಿವರಣೆ ಪಡೆಯಲು ಪಕ್ಷದಿಂದ ಯಾರೂ ಅಲ್ಲದೆ ಅವರ ಭಾಷಣದಲ್ಲಿ ಯಾವುದೇ ವಿಚಾರವಾಗಿ ನನ್ನನ್ನು ಸಂಪರ್ಕಿಸಿಲ್ಲ. ಕೆಪಿಸಿಸಿ ಕಚೇರಿಗೆ ನಾನು ಬೇಟಿ ನೀಡಿದಾಗ ಕೆಲವರು ಅಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜಿವಾಲ ವಿವರಣೆ ಕೇಳಿದ್ದಾರೆ ಎಂದಷ್ಟೇ ನನಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ.
ಈ ವಿಚಾರಕ್ಕೆ ಸಂಭಂದಪಟ್ಟಂತೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಜಾಲತಾಣಗಳಲ್ಲಿ ಅವಹೇಳನ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed