ತರೀಕೆರೆ ಪೋಲೀಸ್ ಠಾಣೆಯಲ್ಲಿ ಇಂದು ರಕ್ಷಾ ಬಂಧನ…..
1 min read
ತರೀಕೆರೆ ಪೋಲೀಸ್ ಠಾಣೆಯಲ್ಲಿ ಇಂದು ರಕ್ಷಾ ಬಂಧನ

ಕಾರ್ಯಕ್ರಮ, ನಮ್ಮ ಭಾರತ ವ್ಯಸನ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಿಬ್ಬಂದಿ ಸಹೋದರ ಸಹೋದರಿಯರಿಗೆ ವ್ಯಸನ ಮುಕ್ತರಾಗಲು ಶಪಥ ನಾನು ಭಾರತ ಮಾತೆಯ ಪುತ್ರ/ಪುತ್ರಿ ನನ್ನ ಆರೋಗ್ಯಕ್ಕಾಗಿ, ನನ್ನ ಪರಿವಾರದ ಸುಖ ಶಾಂತಿಗಾಗಿ, ಸಮಾಜದ ಕಲ್ಯಾಣಕ್ಕಾಗಿ, ಪ್ರಕೃತಿಯ ಅನೇಕ ಪ್ರಕಾರದ ಮಾಲಿನ್ಯದಿಂದ ಸಂರಕ್ಷಣೆಗಾಗಿ, ನಮ್ಮ ಭಾರತದ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ನಾನು ನನ್ನ ಇಷ್ಟ ದೇವರ ಉಪಸ್ಥಿಯಲ್ಲಿ ಈ ಪ್ರತಿಜ್ಞೆ ಮಾಡುತಿದ್ದೇನೆ ಇವತ್ತಿನಿಂದ ಯಾವುದೇ ಪ್ರಕಾರದ ವ್ಯಸನ ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು, ಶರಾಬು, ಡ್ರಗ್ಸ್, ಇದು ಯಾವುದನ್ನು ಸ್ವೀಕಾರ ಮಾಡಲ್ಲ ಮಾಡುವವರಿಗೆ ಜಾಗೃತಿ ಮೂಡಿಸುವ ಸೇವೆ ಮಾಡುತ್ತೇನೆ, ಈ ಪ್ರತಿಜ್ಞೆ ಮಾಡಿಸಿ ರಾಖಿ ಕಟ್ಟಿ ಸಿಹಿ ಹಂಚುವ ಮೂಲಕ ಈ ಕಾರ್ಯಕ್ರಮ ಸಂಪನ್ನ ಮಾಡಿಸಲಾಯಿತು. DYSP , SI Ramu Nayak, B K Kalaivani, B K Kavitha, Bharathi, nagaratna, ಮಂಜುನಾಥ್, ಉಪಸ್ಥಿತರಿದ್ದರು.

