ಚಿತ್ಪಾವನ ಬ್ರಾಹ್ಮಣ ಸಮಾಜದಿಂದ ಚಿಂತನ ಮಂಥನ….
1 min read
ಚಿತ್ಪಾವನ ಬ್ರಾಹ್ಮಣ ಸಮಾಜದಿಂದ ಚಿಂತನ ಮಂಥನ
ಶೃಂಗೇರಿ: ಬ್ರಾಹ್ಮಣ ಸಮಾಜದಲ್ಲಿ ಒಳ ಪಂಗಡವಿದ್ದು, ಪ್ರತಿಯೊಂದು ಪಂಗಡದಲ್ಲೂ ವೈವಿಧ್ಯಮಯ ಆಚಾರ, ವಿಚಾರವಿದೆ ಎಂದು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್ ಹೇಳಿದರು.
ರಾಜಾನಗರದಲ್ಲಿರುವ ವಿದ್ಯಾಭಾರತೀ ಭವನದಲ್ಲಿ ಗುರುವಾರ ಚಿತ್ಪಾವನ ಬ್ರಾಹ್ಮಣ ಸಮಾಜದಿಂದ ಏರ್ಪಡಿಸಿದ್ದ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಾಹ್ಮಣ ಸಮಾಜದ ಬಂಧುಗಳು ಗಾಯತ್ರಿ ಉಪಾಸನೆ ಸಮಾನವಾಗಿದೆ.ಆಹಾರ ಕ್ರಮ, ಆಚರಣೆ ಸಮಾಜದ ಒಳ ಪಂಗಡದಲ್ಲಿ ವಿಭಿನ್ನವಾಗಿದ್ದರೂ, ಎಲ್ಲಾ ಪಂಗಡವೂ ಬ್ರಾಹ್ಮಣ ಪಂಗಡದವರಾಗಿದ್ದಾರೆ ಎಂದರು.
ಚಿತ್ಪಾವನ ಸಮಾಜದ ಮುಖಂಡ ನಾಗೇಶ್ ಡೋಂಗ್ರೆ ಮಾತನಾಡಿ, ನಮ್ಮ ಸಮಾಜ ಬಂಧುಗಳು ನಮಗಿರುವ ಆಚಾರ, ವಿಚಾರವನ್ನು ಮರೆಯಬಾರದು. ಸಮಾಜದ ಯುವಕರು ವಿವಾಹದ ಸಮಸ್ಯೆ ಎದುರಿಸುತ್ತಿದ್ದು, ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ನಗರ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಯುವತಿಯರು ವಿವಾಹ ಮುಂದೂಡುತ್ತಿರುವುದು ಸರಿಯಲ್ಲ. ವಿದ್ಯಾರ್ಥಿ ಜೀವನ ಮುಗಿದ ನಂತರ ಉದ್ಯೋಗವನ್ನು ಪಡೆದ ನಂತರವೂ ವಿವಾಹ ಮುಂದೂಡಿಕೆ ಮಾಡಬಾರದು ಎಂದರು.
ಚಿತ್ಪಾವನ ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಮಹಾಬಲ ಭೀಡೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಘಟಕದ ಅಧ್ಯಕ್ಷ ಗಣಪತಿ ಜೋಷಿ ಸಂಘಟನೆಯ ಅಗತ್ಯವನ್ನು ತಿಳಿಸಿದರು. ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ಗಜಾನನ ಎಂ ಗೋಖಲೆ, ಸುರೇಶ್ ಬಾಪಟ್ ಇತರರು ಇದ್ದರು.
ಜಗದ್ಗುರುಗಳ ಆಶೀರ್ವಾದ-ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಮಾಜದ ವಿವಿಧ ಘಟಕದ ಸದಸ್ಯರು, ಪದಾಧಿಕಾರಿಗಳು ಶ್ರೀಮಠದ ಗುರುಭವನದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಜಗದ್ಗುರು ಶ್ರೀ ವಿದುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

