लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಯನಮೋಟಮ್ಮ ನಡೆ ಸರಿಯೆ……♦

 

ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರ ನಡೆ, ಸರಿ ಇಲ್ಲಾ, ಬುದ್ಧಿ ಕಮ್ಮಿಯಾಗಿದೆ, ಕೋಮುವಾದಿಗಳೊಂದಿಗೆ ಕೈ ಜೋಡಿಸದ್ದಾರೆ ಇವೆಲ್ಲ ಬರವಣಿಗೆಗಳಿಗೆ, ಯಾರು ನೊಂದುಕೊಳ್ಳುವುದು ಇಲ್ಲಾ, ಬೇಸರ ಪಡೋದು ಇಲ್ಲಾ.

ಕಾರಣ ಇಷ್ಟೇ ಗಣಪತಿ ಎಂಬ ದೇವರು ಕೋಮುವಾದಿಯು ಅಲ್ಲಾ, ಬಿಜೆಪಿಯ ಸದಸ್ಯನು ಅಲ್ಲಾ, ಗಣೇಶ ಚತುರ್ಥಿ, ಪ್ರತಿಷ್ಠಾಪನೆ ಕಾರ್ಯಕ್ಕೆ ಶ್ರೀಮತಿ, ನಯನ ಮೋಟಮ್ಮ ಕಾರ್ಯದ್ಯಾಕ್ಸರು, ಧರ್ಮ ಕೆಲಸದಲ್ಲಿ ಪಾಲ್ಗೊಂಡಿದ್ದು ಅಪರಾಧವೆ,,,?
ನಡೆದ ಕಾರ್ಯಕ್ರಮ ಯಾವುದೇ ಪಕ್ಷದ ಸಭೆ ಅಥವಾ ಸಮಾರಂಭ ಅಲ್ಲಾ, ಸ್ವಲ್ಪ ವಿವೇಚನೆ ಇಟ್ಟು ಆಲೋಚಿಸಿ,,,,
ಮೊಸರಲ್ಲೂ ಕಲ್ಲು ಹುಡುಕುವ ಮನಸ್ಥಿತಿಯಿಂದ ಹೊರ ಬನ್ನಿ,
ಕಾಂಗ್ರೆಸ್ ಪಕ್ಷದ ಶಾಸಕಿಯಾದ ಮಾತ್ರಕ್ಕೆ ಧರ್ಮದ ಕಾರ್ಯದಲ್ಲಿ ಪಾಲ್ಗೊಂಳ್ಳಬಾರದ,,
ಆಗಾದರೇ ನಯನ ಮೋಟಮ್ಮ ಚರ್ಚ್ ಗೆ ಹೋಗಿದ್ದಾರೆ, ಮಸೀದಿಗೆ ಹೋಗಿದ್ದಾರೆ, ಜೈನ ಬಸದಿಗಳಿಗೆ ಹೋಗಿದ್ದಾರೆ ಆವಾಗ ಯಾಕಿಲ್ಲ ಈ ಪ್ರಶ್ನೆ,,,,
ಹಿಂದೂ ಗಣಪತಿಯ ಸೇವೆಗೆ ಮುಂದಾದರೆ ತಪ್ಪೇ,,,,?
ಸರಿ ಆಗಾದರೆ ಯಾವ ಸಭೆಯಲ್ಲೂ ಬಿಜೆಪಿ ನಾಯಕರು, ಸಂಘ ಪಾರಿವಾರದ ನಾಯಕರುಗಳು ವೇದಿಕೆ ಹಂಚಿಕೊಂಡಿಲ್ಲವೇ,,,,, ನಿಮಗೆ ಯಾರಿಗೂ ಗೊತ್ತಿಲ್ಲವೇ,
ಯಾರ ಮೇಲು ಪ್ರಶ್ನೆ ಮಾಡದ ನೀವು ಒಬ್ಬ ಮಹಿಳಾ ಶಾಸಕೀಯ ಮೇಲೆ ಪ್ರಶ್ನೆಗಳ, ಮೇಲೆ ಪ್ರಶ್ನೆಯನ್ನು ಹಾಕುತ್ತಿರುವ ಉದ್ದೇಶ ಒಂದೇ,
ಮಹಿಳಾ ಶಾಸಕಿಯ ಏಳ್ಗೆಯನ್ನು ನಿಮ್ಮಿಂದ ಸಹಿಸಲು ಆಗುತ್ತಿಲ್ಲ ಎಂಬುದು ಬಿಟ್ಟರೆ ಬೇರೆ ಉದ್ದೇಶ ನಿಮ್ಮದಲ್ಲ,,,
ಒಂದು ಮಾತಿದೆ ಶತ್ರುವನ್ನು ಮಣಿಸಲು, ಆಗದೆ ಇರುವಾಗ ಅಪಪ್ರಚಾರ ಒಂದೇ ಅಸ್ತ್ರ,,, ಅದನ್ನೇ ನೀವು ಇವಾಗ ಮಾಡುತ್ತಾ ಇರುವುದು ಧನ್ಯವಾದಗಳು ನಿಮಗೆಲ್ಲಾ,,,
ಕಾಂಗ್ರೆಸ್ ಪಕ್ಷಕ್ಕೂ,, ನೆನ್ನೆ ನಡೆದ ಗಣಪತಿ ಉತ್ಸವದ ಕಾರ್ಯಕ್ರಮಕ್ಕೂ ನಂಟು ಹುಡುಕುವುದು ಹಾಸ್ಯಸ್ಪದವಲ್ಲದೆ ಬೇರೇನೂ ಇಲ್ಲಾ,,,
ಧಾರ್ಮಿಕ ನಂಬಿಕೆಗೂ,, ಪಕ್ಷಕ್ಕೂ ವ್ಯತ್ಯಾಸ ಬಹಳಷ್ಟು ಇದೆ ಅರ್ಥೈಸಿಕೊಳ್ಳಿ,,,,
ವಿರೋಧ ಮಾಡೋದು ತಪ್ಪಲ್ಲ,, ವಿರೋಧ ಮಾಡಲೇಬೇಕು ಎಂದು ಮಾಡಿದರೆ ಅದು ತಪ್ಪು,,,
ಶಾಸಕರ ಜೊತೆ ನಮ್ಮ ನಡೆ,,,,

ಚಂದ್ರುಓಡೆಯಾರ್…
ಕಾಂಗ್ರೆಸ್ ಕಾರ್ಯಕರ್ತ.
ಮೂಡಿಗೆರೆ…

About Author

Leave a Reply

Your email address will not be published. Required fields are marked *

You may have missed