ಪುತ್ತೂರಿನ ಶಾಲೇಲಿ ಇದ್ದಾರೆ ಅಷ್ಟ ಅವಳಿಜವಳಿ ಮಕ್ಕಳು…..
1 min read
ಪುತ್ತೂರಿನ ಶಾಲೇಲಿ ಇದ್ದಾರೆ ಅಷ್ಟ ಅವಳಿಜವಳಿ ಮಕ್ಕಳು!
ಪುತ್ತೂರು
ಅವಳಿ ವೀರರಾದ ಕೋಟಿ ಚೆನ್ನಯರ ಹುಟ್ಟೂರು, ಬೆಳೆದೂರು ಎಂಬ ಐತಿಹಾಸಿಕ ಖ್ಯಾತಿ ಪಡೆದಿರುವ ಪುತ್ತೂರು ಪ್ರದೇಶದಲ್ಲಿ 8 ಜೋಡಿ ಅವಳಿಗಳು ಕಲಿಯುತ್ತಿರುವುದು ವಿಶೇಷವಾಗಿದೆ. ಕೋಟಿ ಚೆನ್ನಯರ ಹುಟ್ಟೂರಿನ ಸಮೀಪದಲ್ಲಿನ ಶಾಲೆಯೊಂದರಲ್ಲಿ 8 ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡೂರು ಗ್ರಾಮದ ಈಶ್ವರಮಂಗಲ ಎಂಬಲ್ಲಿರುವ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಷ್ಟ ಅವಳಿಗಳು ಗಮನ ಸೆಳೆಯುತ್ತಾರೆ.

