लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮಾನವ ಕಳ್ಳ ಸಾಗಣೆ: ಕಾನೂನು ಅರಿವು ನೆರವು ಕಾರ್ಯಕ್ರಮ*
**************************************
ಮೂಡಿಗೆರೆ: ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಮಾನವ ಕಳ್ಳ ಸಾಗಣೆ ಮಾಡುವುದು ಕಾನೂನು ಬಾಹಿರವಾಗಿದ್ದು ಇಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯದೀಶರು ಮತ್ತು ತಾಲೋಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಪಿ. ಎಂ ತಿಳಿಸಿದರು.

ಬುದುವಾರ ಗೋಣಿಬೀಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಹಾಗೂ ತಾಲೋಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಣಿಕೆ ವಿರೋಧಿ ದಿನದ ಅರಿವು – ನೆರವು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ನುಡಿದ ಹಿರಿಯ ಸಿವಿಲ್ ನ್ಯಾಯದೀಶರಾದ ಪ್ರಕಾಶ್ ಪಿ ಎಂ. ಮಹಿಳೆಯರು ಮತ್ತು ಮಕ್ಕಳನ್ನು ವಾಮ ಮಾರ್ಗದಿಂದ ಮಾರಾಟ ಮಾಡಿ ಹಣ ಸಂಪಾದನೆ ಮಾಡುವವರು ಇದ್ದು ಮಾನವ ಕಳ್ಳ ಸಾಗಾಣಿಕೆಯಂತ ನೀಚ ಕಾರ್ಯ ಮಾಡುವವರ ಮಾಹಿತಿ ಇದ್ದವರು ಯಾವುದೆ ಭಯವಿಲ್ಲದೆ ದೂರು ನೀಡಬೇಕೆಂದರು.

ಪ್ರದಾನ ಸಿವಿಲ್ ನ್ಯಾಯದೀಶರಾದ ಶ್ರೀ ವಿಶ್ವನಾಥ್ ಎ ಮಾತನಾಡಿ ಬಡವರು ಮತ್ತು ನಿರ್ಗತಿಕರ ಮಕ್ಕಳನ್ನೇ ಗುರಿಯಾಗಿಸಿಕೊಂಡು ಅಪಹರಿಸುವ ಜಾಲಗಳು ಹುಟ್ಟಿಕೊಂಡಿದ್ದು ಮಕ್ಕಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಮತ್ತು ಹೆಣ್ಣು ಮಕ್ಕಳನ್ನು ಲೈಗಿಂಕ ಕ್ರಿಯೆಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು ಇಂಥ ಹೀನ ಕ್ರತ್ಯ ತಪ್ಪಿಸುವುದು ನಾಗರೀಕ ಸಮಾಜದ ಜವಾಬ್ದಾರಿಯಾಗಿದ್ದು ಮಹಿಳೆಯರು ಹೊರ ಹೋಗಬೇಕಾದರೆ ಒಂಟಿಯಾಗಿ ಹೋಗದೆ ಇನ್ನೊಬ್ಬರ ಜೊತೆ ಗೂಡಿ ಎಚ್ಚರಿಕೆಯಿಂದ ಇದ್ದರೆ ಮಾನವ ಕಳ್ಳ ಸಾಗಣಿಕೆಯನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ಪಟ್ಟರು.

ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಅಧ್ಯಕ್ಷ ಜಗತ್ ಬಿ ಎಂ ಮಾತನಾಡಿ ಕಾನೂನಿನ ಮುಂದೆ ನಾವೇಲ್ಲರು ಒಂದೇ ಎಂಬ ಮನೋಭಾವನೆ ಬೆಳಸಿ ಕೊಂಡಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬಾಳ ಬಹುದು ಆದ್ದರಿಂದ ಪ್ರತಿಯೊಬ್ಬರು ಕಾನೂನು ಅರಿವು ಪಡೆಯಬೇಕು ಆಗ ಮಾತ್ರ ಅಪರಾಧಗಳ ಸಂಖ್ಯೆ ಗಣನಿಯವಾಗಿ ಕಡಿಮೆಯಾಗುತ್ತದೆ. ಇ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣವಾಗಿ ದೇಶದ ಅಭಿರುದ್ದಿಗೆ ನಾಂದಿಯಾಗುತ್ತದೆ ಎಂದರು.

ವಕೀಲರಾದ ಆದರ್ಶ ಹೆಚ್ ಜಿ ಮಾನವ ಕಳ್ಳ ಸಾಕಾಣಿಕೆ ಬಗ್ಗೆ ಮಕ್ಕಳಿಗೆ ಉಪನ್ಯಾಸ ನೀಡಿ ಅನಕ್ಷರತೆ, ಬಡತನ, ನಿರುದ್ಯೋಗ ಸಹಿತ ಹಲವು ಕಾರಣಗಳು ಮಾನವ ಕಳ್ಳ ಸಾಗಣಿಕೆ ಪ್ರಕಾರಣಗಳು ಹೆಚ್ಚಾಗಲು ಕಾರಣ ಇದರಲ್ಲಿ ಶೇ 95 ರಷ್ಟು ದುರ್ಬಲ ವರ್ಗದವರು ಬಲಿಯಾಗುತ್ತಿದ್ದಾರೆ. ಮಾನವ ಕಳ್ಳ ಸಾಕಾಣಿಕೆಯಂತಹ ಶೋಷಣೆಗೆ ಅತಿ ಹೆಚ್ಚು ಬಲಿಯಾಗುವವರು ಹೆಣ್ಣು ಮಕ್ಕಳು ಇ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು ಆನ್ ಲೈನ್ ನಲ್ಲಿ ಅಪರಿಚತರೊಂದಿಗೆ ವೈಯಕ್ತಿಕ ವಿಚಾರ ಹಂಚಿಕೊಳ್ಳಬೇಡಿ ಅಸೆ ಮತ್ತು ಆಕಾಂಕ್ಷೆ ಗಳನ್ನು ಈಡೇರುಸುವ ನಿಟ್ಟಿನಲ್ಲಿ ಆಮಿಷಕ್ಕೆ ಬಲಿಯಾಗದಿರಿ ಮಾನವ ಕಳ್ಳ ಸಾಗಣಿಕೆ ಎಂಬುವುದು ಸಾಮಾನ್ಯ ಮಹಿಳೆಯರಿಗೆ ಸಮಾಜದಲ್ಲಿ ಸಾಮಾನ್ಯಯುತವಾಗಿ ಬದುಕಲು ಸಮಸ್ಯೆಯಾಗುತ್ತಿದೆ. ಮಹಿಳೆಯರ ಕಳ್ಳ ಸಾಗಣಿಕೆಯಿಂದ ಅವರನ್ನು ಬೇರೆ ಬೇರೆ ಕ್ರಿಯೆಗೆ ಬಳಸಿಕೊಳ್ಳಿವದರಿಂದ ಕೆಲವು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಮನುಷ್ಯನೇ ಮನುಷ್ಯರನ್ನು ಕಳ್ಳ ಸಾಗಣಿಕೆ ಮಾಡುತ್ತಿರುವದು ನಮ್ಮ ದುರ್ದೈವ ಎಂದರು.

ಮಾನವ ಕಳ್ಳ ಸಾಗಣಿಕೆ ವಿರೋಧಿ ದಿನ ಅರಿವು ನೆರವು ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಹೆಚ್ ಕೆ ದೇವರಾಜ್, ಕಾರ್ಯದರ್ಶಿ ರಾಘವೇಂದ್ರ, ಜೆಸಿಐ ಕಾರ್ಯದರ್ಶಿ ಹೆಚ್ ಎಂ
ಸಂತೋಷ, ಪೂರ್ವ ಅಧ್ಯಕ್ಷರು ಸಿ ಎಸ್ ಚಂದ್ರಶೇಖರ ಮತ್ತು ಯೋಗೇಶ್ ಕುಮಾರ್,
ಶಾಲಾ ಮುಖ್ಯ ಶಿಕ್ಷಕಿ ಶಕುಂತಳ ಶಾಲಾ ಅಭಿರುದ್ದಿ ಮಂಡಳಿ ಉಪಾಧ್ಯಕ್ಷೆ ನೌಶದ್ ಮೇಡಂ ಹಾಗೂ ಶಾಲಾ ಸಹ ಶಿಕ್ಷಕರುಗಳು ಮತ್ತು ಜೆಸಿಐ ಸಂಸ್ಥೆಯ ಸದಸ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed