ತಾಯಿಯ ಹೆಸರಲ್ಲಿ ಗಿಡ ನೆಡಿ……
1 min read
ತಾಯಿಯ ಹೆಸರಲ್ಲಿ ಗಿಡ ನೆಡಿ…
ಚಿಕ್ಕಮಗಳೂರು: ತಾಯಿಯ ಹೆಸರಿನಲ್ಲಿ ಗಿಡಗಳನ್ನು ನೆಡುವ ಮೂಲಕ
ಎಲ್ಲಾ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ನಿಲಯ ಪಾಲಕ ಜಿ.ಟಿ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕೇಂದ್ರ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮೈ ಭಾರತ್ (ಮೇರಾ ಯುವ ಭಾರತ್) ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟಗಳ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಕಡೂರಿನ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಒಂದು ಗಿಡ ತಾಯಿಯ ಹೆಸರಿನಲ್ಲಿ (ಏಕ್ ಪೇಡ್ ಮಾ ಕೇ ನಾಮ್) ಎಂಬ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ಗಗನ್ ಹಾಗೂ ನಿಲಯದ ಸಿಬ್ಬಂದಿ ಅನುಷಮ್ಮ, ವಿನೋದಮ್ಮ, ಬೇಬಿ ಹಾಗೂ ಮೇರಾ ಯುವ ಭಾರತ್ನ ಸ್ವಯಂ ಸೇವಕರಾದ ಮಲ್ಲಿಕಾರ್ಜುನ, ಪ್ರದೀಪ್ ಮತ್ತಿತರರು ಭಾಗವಹಿಸಿದ್ದರು.
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

