ಒಂದು ಸುಖಃ ಸಂಸಾರದಲ್ಲಿ…..
1 min read
ಒಂದು ಸುಖಃ ಸಂಸಾರದಲ್ಲಿ
ಹೌದು ಒಂದು ಸಂಸಾರವನ್ನು ಹೊಡೆದು ಹಾಕ್ತೀನಿ ಅಂದ್ರೆ ಅದು ಸುಲಭದ ಕೆಲಸ .ಆದರೆ ಅದೇ ಸಂಸಾರವನ್ನು ಜೋಡಿಸ್ತೀನಿ ಅಂದ್ರೆ ಅದು ಕಷ್ಟದ ಕೆಲಸ. ಒಬ್ಬ ಹೇಳ್ತಾನೆ ಈ ಗಂಡನಿಗೆ ಡಿವರ್ಸ್ ಕೊಟ್ಟು ಬಂದು ಬಿಡು ನಾನು ನಿನಗೆ ಕೊನೆಯ ಜೀವನ ತನಕ ಸಾಕ್ತಿನಿ ಅಂತ ಒಬ್ಬ ಶ್ರೀಮಂತ ಅಪ್ಪ ಮಗಳಿಗೆ ಭರವಸೆ ಕೊಡುತ್ತಾನೆ. ಆದರೆ ಆ ಭರವಸೆಯೂ ಸುಳ್ಳಾಗುತ್ತೆ ಯಾಕೆಂದರೆ ಅವನ ಮಗಳಿಗೆ ಅನ್ನ ಹಾಕ್ತೀಯ ಐಷಾರಾಮಿ ಬಂಗಲೆ ಮನೆ ಮಠ ಅಂತ ಕೊಡಬಹುದು. ಮಗಳನ್ನು ಸುಖವಾಗಿ ಬಾಳಿಸಬಹುದು ಆದರೆ ಗಂಡ ಕೊಡೋದನ್ನ ಈ ಶ್ರೀಮಂತ ಅಪ್ಪ ಕೊಡೋದಿಕ್ಕೆ ಆಗೋದಿಲ್ಲ. ಹಾಗೆ ಒಬ್ಬಳು ನಿನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ಬಿಡು ಇನ್ನೊಬ್ಬಳನ್ನು ಮದುವೆ ಮಾಡುತ್ತೇನೆ ಅಂತ ಹೇಳುತ್ತಾಳೆ ಆದರೆ ಆ ಮದುವೆ ಶಾಶ್ವತವಾಗಿ ಇರೋದಿಲ್ಲ ಯಾಕೆಂದರೆ ಮನುಷ್ಯನಮನಸ್ಸಿನ ಭಾವನೆಗಳೆ ಬೇರೆ ಇದ್ದಾವೆ. ಉದಾಹರಣೆಗೆ ಹೇಳಬೇಕೆಂದರೆ-ನೀವು ಒಂದು ಸ್ಥಳದಲ್ಲಿ ವಾಸವಾಗಿದ್ದೀರಾ ಆದರೆ ಅನಿವಾರ್ಯ ಕಾರಣದಿಂದ ಆ ಊರನ್ನೇ ತೊರೆದು ಬೇರೆ ಊರಿಗೆ ಹೋಗ್ತೀರಾ. ಅಲ್ಲಿ ಕೆಲವು ಕಾಲ ಬೆಳಿತೀರಾ ಆದರೆ ಪುನಃ ಅದೇ ಊರನ್ನು ನೋಡಬೇಕೆಂಬ ಆಸೆ ಬರುತ್ತೆ ಅಲ್ಲಿ ಆಟ ಆಡಿರ್ತೀರ ಕೆಲವು ಸ್ಥಳಗಳನ್ನು ಕಣ್ತುಂಬಿಕೊಂಡಿರುತ್ತೀರಾ ಅದನ್ನು ಮರೆಯೋಕೆ ಆಗಲ್ಲ ಯಾಕೆ ?ಕಾರಣ ಅಲ್ಲಿ ನಿಮ್ಮ ಹಳೆ ಸವಿ ನೆನಪುಗಳು ಇರುತ್ತವೆ. ಹಾಗೆ ಸಂಸಾರ ಜೀವನದಲ್ಲಿ ಬರುವ ಬಿರುಕುಗಳನ್ನು ಮುಚ್ಚಿ ಅದನ್ನು ಸರಿದಾರಿಗೆ ತರಬೇಕೆ ಹೊರತು ಅದನ್ನ ಯಾವತ್ತು ಹೊಡೆದು ದೂರ ಮಾಡಬಾರದು. ಗಂಡ ಕೊಡೋ ಸುಖ ತಂದೆ ತಾಯಿಗಳು ಕೊಡೋಕೆ ಆಗಲ್ಲ ಅವರು ಹಣವನ್ನು ಕೊಡಬಹುದು ಐಷಾರಾಮಿ ಬದುಕನ್ನು ಕಲ್ಪಿಸಿ ಕೊಡಬಹುದು. ಆದರೆ ಅದು ಗಂಡನ ಜೊತೆ ಬಾಳಿದಂತೆ ಆಗೋದಿಲ್ಲ ಏಕೆಂದರೆ ಅಲ್ಲಿ ತನ್ನ ಜೀವನದ ಭೂತಕಾಲದ ನೆನಪುಗಳು ಶಾಶ್ವತವಾಗಿ ಕೊಲ್ಲುತ್ತಾ ಕೊರಗಿಸುತ್ತ ಅವಳ ನೆಮ್ಮದಿಯನ್ನೇ ಹಾಳು ಮಾಡಿಬಿಟ್ಟಿರುತ್ತವೆ.
ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….

