ಮಾತು ಮೌನವಾದಾಗ”….
1 min read
ಮಾತು ಮೌನವಾದಾಗ”
ಮೂಲ ನಿವಾಸಿ ನಾಗಬೌದ್ಧರನ್ನು ಹುಡುಕಿ ಹುಡುಕಿ ತಲೆ ಕಡಿದು ಉಳಿದವರನ್ನು ದೇಶದಿಂದಲೇ ಬಲವಂತವಾಗಿ ಹೊರದಬ್ಬಿದರು. ಅದನ್ನು ನಾನು ಮಾತನಾಡುತ್ತಿಲ್ಲ.
ಸಂವಿಧಾನದ ಮೂಲಭೂತ ಹಕ್ಕಾಗಿದ್ದ.
ಆಸ್ತಿಯ ಹಕ್ಕನ್ನು ಕಾನೂನು ಹಕ್ಕಾನ್ನಾಗಿಸಿದರು. ಆಗಲು ನಾನು ಮಾತನಾಡಲಿಲ್ಲ.
ಉದ್ಯಾನದ ಹೆಸರಿನಲ್ಲಿ ದಲಿತರು, ಆದಿವಾಸಿಗಳನ್ನು ಮೂಲ ಸ್ಥಾನದಿಂದ ಒಕ್ಕಲೆಳಿಸಿದರು. ಆಗಲೂ ನಾನು ಮಾತನಾಡಲಿಲ್ಲ.
ಜನಪರ, ಜೀವಪರ ಹೋರಾಟಗಾರರನ್ನು ನಕ್ಸಲರೆಂದು ಹುಡುಕಿ ಹುಡುಕಿ ಕೊಂದರು.
ಆಗಲು ನಾನು ಮಾತನಾಡಲಿಲ್ಲ.
ಚರಿತ್ರೆಯ ಮುಖವಾಡವನ್ನು ಬಿಚ್ಚಿಟ್ಟ ಅನೇಕ ಪ್ರಗತಿಪರ ಚಿಂತಕರ ಮನೆ ಬಾಗಿಲಿಗೆ ಹೋಗಿ ಎದೆಗೆ ಗುಂಡಿಕ್ಕಿ ಕೊಂದರು, ಆಗಲು ನಾನು ಮಾತನಾಡಲಿಲ್ಲ.
ಜಾಗತೀಕರಣದ ಉದಾರೀಕರಣ ಖಾಸಗೀಕರಣ ನೀತಿ ತಂದು ಮೀಸಲಾತಿಯನ್ನು ನಾಶ ಮಾಡಿ ಉದ್ಯೋಗ ಕಿತ್ತುಕೊಂಡರು. ಆಗಲು ನಾನು ಮಾತನಾಡಲಿಲ್ಲ.
ಇಡೀ ವಿಶ್ವವೇ ಒಪ್ಪಿಕೊಳ್ಳುವಂತಹ ಸಂವಿಧಾನವನ್ನು ಬದಲಾಯಿಸಿ ಮನು ಸಂವಿಧಾನ ಜಾರಿಗೆ ತರಲು ಮುಂದಾದರು. ಆಗಲೂ ನಾನು ಮಾತನಾಡಲಿಲ್ಲ.
ಸ್ವಯಂ ಘೋಷಿತ ಅಹಿಂದಾ ಅಹಿಂದಾ ಎಂದುಕೊಂಡು ಒತ್ತುವರಿ ಮಾಡಿಕೊಂಡ ಭೂಮಾಲೀಕರಿಗೆ ಭೂಮಿಯನ್ನು ಗುತ್ತಿಗೆ ನೀಡಿದರು. ಆಗಲೂ ನಾನು ಮಾತನಾಡಲಿಲ್ಲ.
ವೈಜ್ಞಾನಿಕ ಆಚರಣೆಯನ್ನು ನಾಶ ಮಾಡಿ ಮೌಡ್ಯ ತುಂಬಿದ ವೈದಿಕ ಸಂಸ್ಕೃತಿ ರಣಕೇಕೆ ಹಾಕುತ್ತಿದೆ. ಈಗಲೂ ನಾನು ಮಾತನಾಡುತ್ತಿಲ್ಲ.
ದೇವರ ಹೆಸರಿನಲ್ಲಿ ಸಂಘ ಕಟ್ಟಿ ಹಣ ಸುಲಿಗೆ ಮಾಡುತ್ತ, ಅಮಾಯಕ ಸೌಜನ್ಯ ರಂತಹ ನೂರಾರು ಮುಗ್ಧ ಹೆಣ್ಣು ಮಕ್ಕಳನ್ನು ಕೊಂದರು. ಈಗಲೂ ನಾನು ಮಾತಾನಾಡದಿದ್ದರೆ. !!
ಕೊನೆಗೆ ನನ್ನನ್ನೇ ಹುಡುಕಿಕೊಂಡು ಬರುತ್ತಾರೆ. ನನ್ನ ಜೊತೆ ಇವರ್ಯಾರು ಇರುವುದಿಲ್ಲ. ನನ್ನ ಜೊತೆ ಇವರ್ಯಾರು ಇರುವುದಿಲ್ಲ
“ಮಾತು ಮೌನವಾದಾಗ”
ಡಾ.ಹರೀಶ್ ನ
ಸಂಶೋಧನಾ ಬರಹಗಾರರು….

