लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪೊಲೀಸರ ಭಯ ಬೇಡ.

ಮೂಡಿಗೆರೆ: ಪೊಲೀಸರು ಎಂದರೆ ಭಯವಲ್ಲ. ಜನರಿಗೆ ರಕ್ಷಣೆ ಮತ್ತು ಧೈರ್ಯ

ತುಂಬಲು ಇರುವವರು. ಪೊಲೀಸರ ನೆರವು ಬೇಕಾದಲ್ಲಿ ಭಯಪಡದೆ ತುರ್ತು ಸಂಖ್ಯೆಗೆ ಕರೆ ಮಾಡಿದರೆ ಮರುಕ್ಷಣದಲ್ಲೇ ಭೇಟಿ ನೀಡಲಾಗುವುದು, ಪೊಲೀಸ್ ಠಾಣೆಗಳು ಸಾರ್ವಜನಿಕರಿಗಾಗಿ ಸದಾ ಬಾಗಿಲು ತೆರೆದಿರುತ್ತವೆ. ಯಾವ ಸಂದರ್ಭದಲ್ಲಿ ಕೂಡ ಠಾಣೆಗೆ ಭೇಟಿ ನೀಡಬಹುದು ಎಂದು ಗೋಣಿಬೀಡು ಠಾಣೆ ಪಿಎಸ್‌ಐ ಹರ್ಷವರ್ಧನ್ ಹೇಳಿದರು.

ಗೋಣಿಬೀಡು ಪಿಎಸ್‌ಐ ಹರ್ಷವರ್ಧನ್ ಸಲಹೆ

ಸೋಮವಾರ ಜೇನುಬೈಲ್ ಗ್ರಾಮದಲ್ಲಿ ಪೊಲೀಸ್‌ ಇಲಾಖೆಯಿಂದ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಪೋಕೋ ಕಾಯ್ದೆ ಬಳಸಿಕೊಳ್ಳಲು ಅವಕಾಶವಿದೆ. ಇಂತಹ ಕಠಿಣ ಕಾಯ್ದೆಯಿಂದಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಕಡಿಮೆಯಾಗಿದೆ. ಕಾನೂನಿನ ಅರಿವು ಎಲ್ಲರಲ್ಲೂ ಉಂಟಾಗಬೇಕು.

: ಕಾನೂನಿನ ಬಗ್ಗೆ ಅರಿವಿಲ್ಲದಿದ್ದರೆ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ತಿಳಿವಳಿಕೆ ಮೂಡಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮಹಿಳೆಯರು ಒಂಟಿಯಾಗಿ ಹೋಗುವಾಗ ಸರಗಳ್ಳತನ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಮಹಿಳೆಯರು 112 ಸಂಖ್ಯೆಗೆ ಕರೆ ಮಾಡಿದರೆ ಪೊಲೀಸರು ಸ್ಥಳಕ್ಕೆ ಹಾಜರಾಗುತ್ತಾರೆ. ತುರ್ತು ಸಂದರ್ಭದಲ್ಲಿ ಮಹಿಳೆಯರು ಭಯಪಡದೆ ಪೊಲೀಸರನ್ನು ಸಂಪರ್ಕಿಸಬೇಕು. ಮೊಬೈಲ್ ಫೋನ್ ಬಳಕೆ ವಿಧಾನದಿಂದಾಗಿ ಸೈಬರ್‌ಅಪರಾಧಗಳು ಹೆಚ್ಚುತ್ತಿವೆ. ಅಪರಿಚಿತ ಕರೆಗಳು ಬಂದರೆ ಬ್ಯಾಂಕ್ ಖಾತೆ, ಮನೆ ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿ ನೀಡಬಾರದು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹೆಟ್ ಧರಿಸದೆ ಬೈಕ್ ಸಂಚಾರ, ಸೀಟ್‌ಬೆಲ್ ಧರಿಸದೆ ಕಾರು ಚಾಲನೆಯಿಂದ ಜೀವ ಹಾನಿಯಾಗುವ ಸಾಧ್ಯತೆ ಇದೆ ಎಂದರು. ಪೋಕೋ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಪೋಕೋ ಕಾಯ್ದೆ ಬಗ್ಗೆ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಲಾಗುತ್ತದೆ. ಪಾಲಕರೂಮಕ್ಕಳಿಗೆ ಅರಿವುಮೂಡಿಸಬೇಕು. ಗಾಂಜಾಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಗಾಂಜಾ ಸೇವನೆ ಮತ್ತು ಮಾರಾಟ ಕಾನೂನಿನ ಪ್ರಕಾರ ಅಪರಾಧ. ಅಂತಹ ದುಶ್ಚಟಗಳಿಗೆ ಯಾರೊಬ್ಬರೂ ಬಲಿಯಾಗಬಾರದು ಎಂದು ತಿಳಿಸಿದರು. ಗ್ರಾಮದ ನಾಗೇಶ್, ಕೆಂಚಯ್ಯ, ಸುರೇಶ್, ಪೊಲೀಸ್ ಸಿಬ್ಬಂದಿ ಸುನಿಲ್, ಅಶ್ವಿನಿ ಇತರರಿದ್ದರು.

About Author

Leave a Reply

Your email address will not be published. Required fields are marked *

You may have missed