लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಆರ್ಥಿಕತೆಯ ನರನಾಡಿ, ದುಡಿಯುವ ವರ್ಗ”

ಅದೊಂದು ಪ್ರತಿಷ್ಠಿತ ಎಂ.ಎನ್.ಸಿ ಕಂಪೆನಿ, “ಸಿ” ಲೆವೆಲ್ ನ ಉದ್ಯೋಗಿಯಾಗಿದ್ದವರು ಒಮ್ಮೆ ಹೇಳುತ್ತಿದ್ರು ನಾನು ದಿನವೂ ಮನೆಗೆ ಹೋಗುತ್ತೇನೆ, ಆದರೆ ನಾನೋಗುವ ಸಮಯ ಮಗ ಮಲಗಿರುತ್ತಾನೆ ನಾನೇಳುವ ಮೊದಲೇ ಆತ ಶಾಲೆಗೆ ಹೋಗಿರುತ್ತಾನೆ ಈಗಾಗಿ ನನಗೆ ಮಗನೊಂದಿಗೆ ಸಮಯ ಕಳೆಯಲು ವಾರಕ್ಕೊಮ್ಮೆಯಷ್ಟೇ ಸಿಗೋದೆಂದು ಬೇಸರದಿಂದ ಹೇಳುತಿದ್ರು ಇದೊಂದು ಘಟನೆ ಹಣ, ಪ್ರತಿಷ್ಠೆ ಇದ್ದರು ಮನುಷ್ಯನಿಗೆ ಬೇಕಾದ ಮಾನಸಿಕ ನೆಮ್ಮದಿಯ ಕೊರತೆಯನ್ನು ಸ್ಪಷ್ಟಪಡಿಸುತ್ತಿತ್ತು!. ಉದ್ಯೋಗ ಅರಸಿ ಪಟ್ಟಣ ಸೇರಿ ಸಣ್ಣಗಾಗಿದ್ದವಾ ದಿನಕ್ಕೆ ಹನ್ನೆರಡು ಗಂಟೆ ದುಡಿಯಲೇಬೇಕೆಂದು ಅಳಲು ತೋಡಿಕೊಳ್ಳುತ್ತಿದ್ದ!. ಎಲ್ಲಕ್ಕಿಂತ ಹೆಚ್ಚು ವಾರಾಂತ್ಯದ ಶುಕ್ರವಾರದಿಂದ ಬಾನುವಾರದ ವರೆಗೆ ಮಲೆನಾಡು ಗಿಜುಗುಡಲು ಪ್ರಮುಖ ಕಾರಣ ನಗರಗಳಲ್ಲಿ ವಾರದ ನಾಲ್ಕು ದಿನವೂ ಒತ್ತಡದಿಂದ ದಿನಕ್ಕೆ ಹತ್ತರಿಂದ ಹನ್ನೆರಡು ಗಂಟೆಯ ದುಡಿಯುವ ಸಮಯ ತಿಂಗಳಂತ್ಯವಂತೂ ದಿನಕ್ಕೆ ಹದಿನೈದು ಗಂಟೆಯೂ ಆಗಬಹುದು!. ಇಂದಿಗೂ ಬಹುತೇಕರಿಗೆ ಭಾರತೀಯ ಕಾರ್ಮಿಕ ಕಾಯ್ದೆಯಂತೆ ದಿನಕ್ಕೆ ಎಂಟು ಗಂಟೆ ಮಾತ್ರ ದುಡಿಯುವ ಸಮಯ, ಎರಡು ಗಂಟೆ ಬ್ರೇಕ್ ಅವರ್ ಬಗ್ಗೆ ತಿಳಿದಿಲ್ಲ!. ಬದುಕಿನ ಅನಿವಾರ್ಯ, ಫ್ಯಾಮಿಲಿ ಕಮಿಟ್ ಮೆಂಟ್, ಗ್ರಾಮೀಣ ಬಾಗದಲ್ಲಿ ಉದ್ಯೋಗದ ಕೊರತೆ, ಬದುಕು‌ ನಡೆಸಲು ಸ್ವಂತ ಕನಿಷ್ಟ ಭೂಮಿ ಇಲ್ಲದಿರುವುದು ಹಾಗೂ ಗ್ರಾಮೀಣ ಬಾಗದಲ್ಲಿ ಕಡಿಮೆ ಸಂಬಳ, ಸರ್ಕಾರದ ಹೆಸರಿನಲ್ಲಿ ನಮ್ಮನ್ನಾಳುತ್ತಿರುವವರು ಶಿಕ್ಷಣ, ಅನುಭವ, ಜ್ಞಾನ, ಆಸಕ್ತಿಗೆ ಹೊಂದುವಂತೆ ಗ್ರಾಮೀಣ ಬಾಗದಲ್ಲಿ ಉದ್ಯೋಗ ಸೃಷ್ಟಿಸದೆ ಇರುವುದರಿಂದ ಬಹುತೇಕ ಗ್ರಾಮೀಣ ಬಾಗದ ಮಾನವ ಸಂಪನ್ಮೂಲ ಪ್ರತಿಭೆಗಳು ಖಾಸಗಿವಲಯದ ಕಡೆ ಮುಖ ಮಾಡುತ್ತಿವೆ. ಖಾಸಗೀಕರಣ, ಜಾಗತೀಕರಣ, ಉದಾರೀಕರಣ ಬಂದ ಮೇಲೆ ಸೋಕಾಲ್ಡ್ ಸರ್ಕಾರಗಳು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆ ಹರಿವಿ‌ನ ಹೆಸರಿನಲ್ಲಿ ದುಡಿಯುವ ವರ್ಗದ ಮೂಗಿಗೆ ತುಪ್ಪ ಸವರಿ ಭಾರತೀಯ ಕಾರ್ಮಿಕ ಕಾನೂನುಗಳ ಗಾಳಿಗೆ ತೂರಿ ತಮ್ಮದೇ ಫಂಡಮೆಂಟಲ್ ರಚಿಸಿಕೊಂಡು ನವಜೀತಗಾರಿಕೆಯನ್ನು ಪೋಷಿಸಲು ಕಾರ್ಪೋರೇಟ್ ಕಂಪೆನಿಗಳಿಗೆ ನೀರುಣಿಸುತ್ತಿವೆ.
ಇಂದಿಗೂ ಕೂಡ ಅದೆಷ್ಟೋ ಗ್ರಾಮ ಮತ್ತು ಪಟ್ಟಣಗಳಲ್ಲಿ ಜನ ಸಾಮಾನ್ಯ ತನ್ನ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಇರಲೊಂದು ಸೂರು, ಬೀದಿ ದೀಪ, ಓಡಾಡಲು ಕನಿಷ್ಠ ರಸ್ತೆಗಾಗಿ ಬೀದಿ ಬೀದಿಯಲ್ಲಿ, ಸರ್ಕಾರಿ ಕಛೇರಿ ಬಾಗಿಲಲ್ಲಿ ನಿಂತು ಕೇಳುತ್ತಿದ್ದಾನೆ ಹೋರಾಟ ನಡೆಸುತ್ತಿದ್ದಾನೆ. ಆದರೆ ಪಟ್ಟಣಗಳಲ್ಲಿ ಓಟ್ ಬ್ಯಾಂಕ್ ಗಾಗಿ ದುಡಿಯುವ ವರ್ಗದವರನ್ನು ಸ್ಲಂ ವಾಸಿಗಳೆಂದು ಹಣೆಪಟ್ಟಿ ಕಟ್ಟಿ ಸರ್ಕಾರದ ಎಲ್ಲಾ ಸವಲತ್ತುಗಳಿಂದ ವಂಚಿಸುತ್ತಾ ಐದು ವರ್ಷಕ್ಕೊಮ್ಮೆ ಅದೇ ವರ್ಗದವರ ಮೂಗಿಗೆ‌ ತುಪ್ಪ ಸವರಿ ಅಧಿಕಾರ ಅನುಭವಿಸುತ್ತಿದ್ದಾರೆ ಗ್ರಾಮೀಣ ಬಾಗದಲ್ಲಂತೂ ಜಾತಿ, ಧರ್ಮದ ಹೆಸರಲ್ಲಿ ಜನರ ಬಾವನೆಗಳ ಜೊತೆ ಆಟ ಆಡಿದರಷ್ಟು ಸಾಕು ಬೋನಸ್ ಆಗಿ ನಾಲ್ಕೈದು ಮಂದಿ ಕ್ರಿಯಾಶೀಲರ ಹೆಗಲಿಗೆ ಕೈಹಾಕಿ ಆತ್ಮೀಯವಾಗಿ ಮಾತನಾಡಿಸಿದರೆ ಗದ್ದುಗೆ ಏರಿದಂತೆ!. ಮತ್ತೆ ದುಡಿಯುವ ವರ್ಗ ಅದೇ ರಸ್ತೆ, ನೀರು, ಬೀದಿದೀಪಕ್ಕಾಗಿ ಎದೆ ಹೊಡೆದುಕೊಳ್ಳುತ್ತಾ ಗಂಟಲರಿದುಕೊಳ್ಳಬೇಕು. ಆದರೆ ಕಾರ್ಪೋರೇಟ್ ಕಂಪೆನಿಗಳು ಮಾತ್ರ ಜಗತ್ತಿನ ಯಾವುದೋ ಮೂಲೆಯಲ್ಲಿ ಕೂತು‌ ಆನ್ ಲೈನ್ ಅಥವಾ ಆಫ್ ಲೈನ್ ಮೀಟಿಂಗ್ ನಡೆಸಿ ನಾವು ನಿಮ್ಮ ನಗರಕ್ಕೆ ಬರುತ್ತೇವೆ ನಮಗೇನು ಕೊಡುತ್ತೀರಾ ಎಂದು ಬೇಡಿಕೆಯನ್ನಿಡುತ್ತಾರೆ. ಆ(ಹಾ)ಳುವ ಸರ್ಕಾರಗಳು ಕೈ ಕಟ್ಟಿ, ನಡು ಬಗ್ಗಿಸಿ, ಹಾ ಜೀ… ಹುಕುಂ ಜೀ ಎನ್ನುತ್ತಲ್ಲೇ ನಿಮಗೆ ಕಂಪೆನಿ ನಡೆಸಲು‌ ಕಡಿಮೆ ದರದಲ್ಲಿ ಎಕರೆಗಟ್ಟಲೆ ಸರ್ಕಾರಿ ಭೂಮಿ, ಕುಡಿಯುವ ನೀರು, ಓಡಾಡಲು ರಸ್ತೆ, ದಿನದ ಇಪ್ಪತ್ತ ನಾಲ್ಕು ಗಂಟೆ ವಿದ್ಯುತ್ ನ್ನು ನೀಡುತ್ತಾ ಕೆಲವು ವರ್ಷ ನೀವು ತೆರಿಗೆ ವಿನಾಯಿತಿ ಯನ್ನು ನಮ್ಮಿಂದ ಪಡೆಯುವಿರಿ ಎಂದು ಬಿಟ್ಟಿ ಆಫರ್ ನೀಡುತ್ತಾರೆ. ಎಲ್ಲವನ್ನೂ ಬಿಟ್ಟಿಯಾಗಿ ಪಡೆವ ಕಂಪೆನಿಗಳು ಅಲ್ಲಿಯ ಸ್ಥಳೀಯ ಭಾಷಿಕರನ್ನು ಮೊದಲು ಕಿಕ್ ಔಟ್ ಮಾಡುತ್ತಾರೆ ಕಾರಣ ಕೆಲವೇ ಸಮಯದಲ್ಲಿ ಕಾರ್ಪೋರೇಟ್ ಕಂಪೆನಿಗಳ ಅನಧಿಕೃತ ನಿಯಮಗಳ ಪ್ರಶ್ನಿಸುತ್ತಾರೆ ಎಂಬ ಭಯ ಮತ್ತು ಕೋಪ. ಎಲ್ಲವೂ ಹೊರಗಿನವರಿಗೆ ಮಣೆ ಹಾಕಿ ಸ್ಥಳೀಯ ಸವಲತ್ತು‌ ಪಡೆದು ಸುತ್ತಲಿನ ಸಮಾಜಕ್ಕೆ ಕಾರ್ಪೋರೇಟ್ ಕಂಪೆನಿಗಳ ಕೊಡುಗೆ ಪರಿಸರ ಮಾಲಿನ್ಯ ಮತ್ತು ಸ್ಥಳೀಯ ಸಂಸ್ಕ್ರತಿಯ ಮೇಲಿನ ದಾಳಿ ಹೊರತಾಗಿ ಬೇರೇನು ಇಲ್ಲ.
ಖಾಸಗಿ ವಲಯದಲ್ಲಿ ದುಡಿಯುತ್ತಿರುವ ಬಹುತೇಕರಿಗೆ ಕಾರ್ಮಿಕರ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳ ಪ್ರಶ್ನಿಸುವ ಸಾಮರ್ಥ್ಯ, ಮಾನಸಿಕತೆ ಅಥವಾ ಸಂಘಟನೆಗಳಾಗಲಿ ಇರುವುದಿಲ್ಲ. ಅವರೊಂತರಾ ಬಾಂಡೆಡ್ ವೈಟ್ ಕಾಲರ್ ಜೀತದಾಳುಗಳು. ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಮಿಕ ಎಂದರೆ ಫ್ಯಾಕ್ಟರಿಗಳಲ್ಲಿ ಮೈ ಬಗ್ಗಿಸಿ, ದೈಹಿಕವಾಗಿ ಶ್ರಮ ಬಳಸಿ ದುಡಿಯುವವರು ಹಾಗೂ ಕಾರ್ಪೋರೇಟ್ ಕಂಪೆನಿಗಳಲ್ಲಿ ಬ್ಯಾಕ್ ಹ್ಯಾಂಡ್ ನಲ್ಲಿ ಬುದ್ದಿವಂತಿಕೆ ಬಳಸಿ ದುಡಿಯುವವರು ಸಿಬ್ಬಂದಿ ವರ್ಗದವರು, ಕಾರ್ಮಿಕರು ಕೀಳು ಹಾಗೂ ಕಂಪ್ಯೂಟರ್ ಮುಂದೆ ಕೂತವರು ಶ್ರೇಷ್ಠ ರು ಎಂಬ ಸೋ ಕಾಲ್ಡ್ ಭ್ರಮೆ ಮೇಲು, ಕೀಳೆಂಬ ದಾಳಕ್ಎ ಸಿಕ್ಕಿರುವವರೆ. ಹೀಗಾಗಿ ಕಂಪ್ಯೂಟರ್ ಮುಂದೆ ಕೂತ ಬುದ್ದಿವಂತರು, ಶ್ರಮಿಕ ಬುದ್ದಿವಂತರಲ್ಲಿ ಸಂಘಟನಾತ್ಮಕ ವ್ಯತ್ಯಾಸವೇ ಬಂಡವಾಳವಾಗಿ ಕಾರ್ಪೋರೇಟ್ ಕಂಪೆನಿಗಳು ಇಂದು ಎಲ್ಲಾ ದುಡಿಯುವ ವರ್ಗದ ಕೆಲಸದ ಸಮಯದ ಮೇಲೆ ನಿಯಂತ್ರಣ ನಡೆಸುತ್ತಿವೆ ಹಾಗೂ ನಮ್ಮಿಂದ ಚುನಾಯಿತರಾದ ಜನಪ್ರತಿನಿಧಿಗಳು ಅವರ ತಾಳಕ್ಕೆ ತಕ್ಕಂತೆ ಕರಡಿ ಕುಣಿತವಾಡುತ್ತಿದ್ದಾರೆ. ಗೆದ್ದವರಿಗೆ ಐದು ವರ್ಷಕ್ಕೊಮ್ಮೆ ಗಂಟು ಸಿಕ್ಕರಷ್ಟು ಸಾಕು ಅವರಿಗೆ ಕಾರ್ಮಿಕ ಮತದಾರನ ಹಿತ ಕಾಪಾಡುವ ಪ್ರಜ್ಞೆ ತಪ್ಪಿದೆ.
ಯಾವುದೋ ಮೂಲೆಯಲ್ಲಿ ಕೂತು ಸಾವಿರಾರು ಕಾರ್ಮಿಕರ ಬೆವರು ಮತ್ತು ಶ್ರಮದ ಫಲ ಉಣ್ಣುತ್ತಿರುವ ಕೃತಘ್ನ ಬಂಡವಾಳಶಾಹಿಯ ದಾಹವನ್ನು ವಿರೋದಿಸಿ
ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ ಕಾರ್ಮಿಕ ಸಂಘಟನೆಗಳು ಇಂದು ಹೋರಾಟ ನಡೆಸುತ್ತಿವೆ.
ಕಾರ್ಮಿಕ ಎಂದರೆ ಜೀತದಾಳಲ್ಲ, ದೇಶದ ಆರ್ಥಿಕತೆಯ ಬೆನ್ನೆಲುಬು ಆತ ಸೆಟೆದುನಿಲ್ಲುವ ಅವಕಾಶ ನಮ್ಮನ್ನಾಳುವವರು ನೀಡಬಾರದು ಹಾಗೂ ಜಗತ್ತಿನಲ್ಲಿ ಮೊದಲಿಗೆ ಕ್ರಾಂತಿ ನಡೆಸಿದವರೇ ದುಡಿಯುವ ವರ್ಗದ ಕಾರ್ಮಿಕರು ಎಂಬುದನ್ನು ಮರೆಯಬಾರದು.

-ಶಿವಪ್ರಸಾದ್ ಬಿ.ಇ

About Author

Leave a Reply

Your email address will not be published. Required fields are marked *

You may have missed