ಚಿಕ್ಕಮಗಳೂರಿನ ಚಿಕ್ಕಮಗಳು ಇಂದಿರಾಗಾಂಧಿ”……..
1 min read
“ಚಿಕ್ಕಮಗಳೂರಿನ ಚಿಕ್ಕಮಗಳು ಇಂದಿರಾಗಾಂಧಿ”…….. ಸಂವಿಧಾನದ ಪ್ರಸ್ತಾವನೆಗೆ 1976ರಲ್ಲಿ 42ನೇ ತಿದ್ದುಪಡಿ ಮಾಡಿ ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ,ಐಕ್ಯತೆ ಎಂಬ ಪದಗಳನ್ನು ಅಂಗೀಕರಿಸಿದ್ದು ಶ್ರೀಮತಿ ಇಂದಿರಾಗಾಂಧಿಯವರು ಭಾರತದ ಸಂವಿಧಾನವು ದೇಶವನ್ನು ಜಾತ್ಯಾತೀತ ಎಂದು ಘೋಷಿಸಿದೆ ಅಂದರೆ ರಾಜ್ಯವು ಧಾರ್ಮಿಕ ಚಿಂತನೆಗಳು, ಜನರ ವೈಯಕ್ತಿಕ ಅಂಶವೆಂದು ಪರಿಗಣಿಸಿದೆ. ಸಮಾಜವಾದಿ ಜಾತ್ಯತೀತ ಅಂಶಗಳನ್ನು ಪ್ರಸ್ತಾವನೆಯಿಂದ ತೆಗೆಯಬೇಕು ಎಂಬ ಇತ್ತೀಚಿನ ಬೆಳವಣಿಗೆಗೆ ನನ್ನದೊಂದು ಪುಟ್ಟ ಲೇಖನ……… ಭಾರತಕ್ಕೆ ಸ್ವತಂತ್ರ ಬಂದ ನಂತರ ದೀನ ದಲಿತರ ಪರವಾಗಿ ಇಂದಿರಾಗಾಂಧಿಯವರು ಮಾಡಿದಂತಹ ಮಹತ್ತರವಾದ ಕಾರ್ಯವೆಂದರೆ “ಉಳುವವನೇ ಭೂಮಿಯ ಒಡೆಯ” ಯೋಜನೆಯಾಗಿದೆ. ಕಾರಣ ಭೂ ಒಡೆತನದ ಹಿನ್ನೆಲೆ ನೋಡಿದಾಗ ಭೂಮಿಯು ಬಹುಪಾಲು ಜಮೀನ್ದಾರರ ನಿಯಂತ್ರಣದಲ್ಲಿ ಮಾತ್ರ ಇದ್ದು ಇನ್ನುಳಿದ ಭೂಮಿಯನ್ನು ಮಧ್ಯಮ ವರ್ಗದ ರೈತರು ಭೂ ಒಡೆತನ ಹೊಂದಿದ್ದರು. ಸ್ವತಂತ್ರ ಪೂರ್ವದಲ್ಲಿ ದಲಿತ ಸಮುದಾಯದವರು ಕೇವಲ ಬೆರಳೆಣಿಕೆಯಷ್ಟು ಮಾತ್ರ ಒಡೆತನ ಹೊಂದಿದ್ದರು ಇನ್ನುಳಿದ ಬಹುಪಾಲು ಜನರು ಭೂ ಒಡೆತನದಿಂದ ವಂಚಿತರಾಗಿದ್ದು ಇವರು ಕೃಷಿ ಕಾರ್ಮಿಕರಾಗಿ ಕೂಲಿಕಾರ್ಮಿಕರಾಗಿ ಹಾಗೂ ಕೆಲವು ಜಮೀನ್ದಾರರ ಮನೆಯಲ್ಲಿ ಜೀತ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದರು. ಇದನ್ನರಿತು ಇಂದಿರಾಗಾಂಧಿಯವರು ಭಾರತದಾದ್ಯಂತ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದರು ಈ ಕಾಯ್ದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳು ಭೂಮಿಯನ್ನು ಹೊಂದುವುದರ ಮಹತ್ತರವಾದ ತಿರುವನ್ನು ನೀಡಿತು. ಭಾರತದಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಮೊಟ್ಟಮೊದಲ ಬಾರಿಗೆ ಅನುಷ್ಠಾನಕ್ಕೆ ತಂದ ರಾಜ್ಯ ಕರ್ನಾಟಕವಾಗಿದೆ. ಅಂದಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ದೇವರಾಜು ಅರಸುರವರು ಭೂ ಸುಧಾರಣೆ ಕಾಯ್ದೆಯನ್ನು 10-3-1974ರಂದು ಅನುಷ್ಠಾನಗೊಳಿಸಿದರು. ದೀನ ದುರ್ಬಲರ ಸಬಲೀಕರಣ ಗೊಳಿಸುವಲ್ಲಿ ದೇವರಾಜು ಅರಸು ಅವರ ಪಾತ್ರ ಗಣನೀಯವಾಗಿದೆ. ಶೋಷಣೆ ರಹಿತವಾದ ಸಮಾಜವನ್ನು ನಿರ್ಮಿಸುವುದು ಇವರ ಧ್ಯೇಹವಾಗಿತ್ತು. ಭೂಒಡೆತನದ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹೊಂದಿದ್ದ ಅರಸು ತಲೆತಲಾಂತರ ದಿಂದ ಗೇಣಿದಾರರು ಕೂಲಿ ಕಾರ್ಮಿಕರಾಗಿಯೇ ಸವೆದು ಹೋಗಿದ್ದ ತಳ ಸಮುದಾಯಗಳಿಗೆ ಆಸರೆಯಾಗಿ ಉಳುವವನೇ ಭೂಒಡೆಯ ಕಾನೂನನ್ನು ಜಾರಿಗೆ ತಂದರು. ಇದರಿಂದಾಗಿ ದಲಿತ ಕುಟುಂಬಗಳು ಸ್ವಂತ ಭೂಮಿಯನ್ನು ಹೊಂದಿ ಸ್ವಾವಲಂಬನೆಯ ಜೀವನವನ್ನು ನಡೆಸಲು ಸಹಾಯಕವಾಯಿತು 1976ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳು ಉಳ್ಳವರ ಅಥವಾ ಶ್ರೀಮಂತರ ಮನೆಯಲ್ಲಿ ಜೀತದಾಳುಗಳಾಗಿ ಜೀವನ ನಡೆಸುತ್ತಿದ್ದ ಸುಮಾರು 65,000 ಜೀತ ಕಾರ್ಮಿಕರನ್ನು ಜೀತದಾಳುಗಳನ್ನು ಇದರಿಂದ ಮುಕ್ತಿಗೊಳಿಸಲಾಯಿತು. ದಿನವಿಡಿ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದ ಕೃಷಿಕಾರ್ಮಿಕರಿಗೆ ಇಂತಿಷ್ಟು ಹಣವೆಂದು ನಿಗದಿಪಡಿಸಿದ್ದರು. ಅರಸು ಅವರು ಹಿಂದುಳಿದ ವರ್ಗದವರ ದೀನದಲಿತ ಗ್ರಾಮೀಣ ಜನತೆಗೆ ಜೀವನ ಉಲ್ಲಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ನಿಜವಾದ ಅರ್ಥದಲ್ಲಿ ಅರಸು ಅವರನ್ನು ಕರ್ನಾಟಕದ ಗ್ರಾಮೀಣ ಅಭಿವೃದ್ಧಿಯ ಹರಿಕಾರರೆಂದೆ ಹೇಳಬಹುದು. 1971ರ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಇಂದಿರಾಗಾಂಧಿಯವರು ಗೆದ್ದಿರುವುದು ಆಡಳಿತದ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಗೆದ್ದಿದ್ದಾರೆ ಎಂದು ರಾಜ್ ನಾರಾಯಣ್ ರವರು ಅಲಹಾಬಾದ್ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದರು. 1975ರಲ್ಲಿ ಜೂನ್ 12ನೇ ತಾರೀಕು ಹೈಕೋರ್ಟ್ ನ್ಯಾಯಮೂರ್ತಿ ಜಗಮೋಹನ್ ಸಿನ್ನಾ ರವರು ರವರು ಇಂದಿರಾಗಾಂಧಿ ಚುನಾವಣೆಯಲ್ಲಿ ಗೆದ್ದಿರುವುದನ್ನು ಅಸಿಂಧು ಗೊಳಿಸಿದರು. ಪ್ರಬಲವಾಗಿದ್ದ ಇಂದಿರಾಗಾಂಧಿಯವರಿಗೆ ರಾಜಕೀಯವಾಗಿ ದಿಕ್ಕು ತೋಚದಂತಾಯಿತು. ಆ ಸಂದರ್ಭದಲ್ಲಿ ಅವರು ಲೋಕಸಭೆಯನ್ನು ತನ್ನ ಹದ್ಧು ಬಸ್ತಿಗೆ ತೆಗೆದುಕೊಳ್ಳುವ ಸಲುವಾಗಿ ಸಂವಿಧಾನದ ಆರ್ಟಿಕಲ್ 352ರಂತೆ ಅಂದಿನ ರಾಷ್ಟ್ರಪತಿ ಫಕ್ರುದಿನ್ ಆಲಿ ಅಹಮದ್ ಅವರಿಂದ 25.06. 1975ರಲ್ಲಿ ಭಾರತಕ್ಕೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದರು. ಜೂನ್ 25 1975 ರಂದು ಇಂದಿರಾಗಾಂಧಿ ಅವರು ಭಾರತದಲ್ಲಿ ಜಾರಿಗೆ ತಂದ ರಾಷ್ಟ್ರೀಯ ರಾಜಕೀಯ ತುರ್ತು ಪರಿಸ್ಥಿತಿಯಿಂದಾಗಿ ದೇಶದ ಶ್ರೀಮಂತರು ಬಂಡವಾಳ ಶಾಹಿಗಳು, ಧಾರ್ಮಿಕ ಮುಖಂಡರು, ಕಾಂಗ್ರೆಸ್ ವಿರೋಧ ಪಕ್ಷದವರು ಒಂದಿಷ್ಟು ಚಿಂತಕರು ಬರವಣಿಗೆಗಾರರು ದೇಶದಾದ್ಯಂತ ಪ್ರಬಲ ಚಳುವಳಿ ಮುಷ್ಕರ ಹಾಗೂ ದಂಗೆಗೆ ಮುಂದಾದರು. ಈ ಕಾರಣದಿಂದಾಗಿ ಜೈಲು ಗಳೆಲ್ಲ ತುಂಬಿದವು. ಪತ್ರಿಕ ಸ್ವಾತಂತ್ರ್ಯ ಇಲ್ಲದಾಯಿತು ವಾಕ್ ಸ್ವಾತಂತ್ರ ಸ್ತಬ್ದವಾಯಿತು. ಇದರಿಂದಾಗಿ ಇಂದಿರಾಗಾಂಧಿ ಏಕವ್ಯಕ್ತಿಯಾಗಿ ಭಾರತವನ್ನು ಆಳ್ವಿಕೆ ಮಾಡಲು ಆರಂಭಿಸಿದರು ಭಾರತಕ್ಕೆ ಸ್ವತಂತ್ರ ಬಂದು ಕೇವಾಲ 25 ವರ್ಷಗಳ ಅಂತರದಲ್ಲಿ ಈ ಘಟನೆ ನಡೆದಿದ್ದು ವಿಶೇಷ……… ಇಂದಿರಾಗಾಂಧಿಯವರು ಜಾರಿಗೆ ತಂದ ಈ ತುರ್ತು ಪರಿಸ್ಥಿತಿಯಿಂದ ದಂಗೆ ಎದ್ದವರು ಭಾರತದ ಕೇವಲ 20% ಜನ ಮಾತ್ರ ಈ 20% ರಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ದಂಗೆಯನ್ನು ಕೊನೆಗಾಣಿಸಲು ಉಳಿದ 80 % ಅಷ್ಟು ಜನರ ವಿಶ್ವಾಸ ಗಳಿಸಲು ಇಂದಿರಾಗಾಂಧಿ ಮುಂದಾದರು. ಭಾರತಕ್ಕೆ 1950ರ ಜನವರಿ 26ರಂದು ಜನಪರವಾದ ಸಂವಿಧಾನ ಜಾರಿಗೆ ಬಂದಿದ್ದರು ಸಹ ಅದನ್ನು ಜಾರಿಗೆ ಮಾಡಲು 25 ವರ್ಷಗಳಾದರು ಸಾಧ್ಯವಾಗಲಿಲ್ಲ. ಸಂವಿಧಾನದ ಮಹತ್ವ ತಿಳಿಯದಿದ್ದ ಜನಗಳ ಉದ್ಧಾರಕ್ಕಾಗಿ ಸರ್ವಾಧಿಕಾರಿಯಾಗಿದ್ದ ಇಂದಿರಾಗಾಂಧಿ 1975ರಲ್ಲಿ 20 ವರುಷಗಳ ಸಂವಿಧಾನಾತ್ಮಕ ಕಾನೂನುಗಳನ್ನು ಜಾರಿಗೆ ತಂದರು ಈ 20 ಅಂಶಗಳು ಶೇಕಡ 80 ರಷ್ಟು ಜನರ ವಿಶ್ವಾಸ ಗಳಿಸಿತು. ಈ ವಿಶ್ವಾಸದ ಮುಂದೆ 20% ರಷ್ಟು ಜನರ ರಾಷ್ಟ್ರೀಯ ದಂಗೆ ಶಮನವಾಯಿತು. ನಿಜವಾದ ಬಾಬಾ ಸಾಹೇಬರ ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ಸಂವಿಧಾನ ಜಾರಿಗೆ ಬಂದಂತಾಯಿತು. ಇಷ್ಟೆಲ್ಲ ಜನಪರ ಕೆಲಸ ಮಾಡಲು ಇಂದಿರಾಗಾಂಧಿಯವರ ಕೈಹಿಡಿದಿದ್ದು ಚಿಕ್ಕಮಗಳೂರಿನ ದಲಿತ ಸಮುದಾಯದ ಮತದಾರರು………….. ಡಿ.ವಿ ಚಂದ್ರೇಗೌಡ ರವರು ರಾಜೀನಾಮೆ ನೀಡಿದ ನಂತರ 20.9.1975 ರಂದು ಕೊಪ್ಪದಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಸಮ್ಮೇಳನದಲ್ಲಿ ಇಂದಿರಾಗಾಂಧಿಯವರನ್ನು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ನಿರ್ಣಯವಾಯಿತು 06.10.1975 ರಂದು ಇಂದಿರಾಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ರಾಷ್ಟ್ರದಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಿದ ಪ್ರಧಾನಿಗೆ ರಾಜಕೀಯ ಪುನರ್ಜನ್ಮ ನೀಡಲು ಚಿಕ್ಕಮಗಳೂರು ಕಣವಾಗಿ ಸಿದ್ಧವಾಯಿತು. ರಾಷ್ಟ್ರದ ಹಾಗೂ ವಿಶ್ವದ ಎಲ್ಲಾ ಕಣ್ಣುಗಳು ಮಲೆನಾಡ ಬೆಟ್ಟ ಸೆರಿಗಿನ ಜಿಲ್ಲೆಯತ್ತ ಕೇಂದ್ರೀಕೃತವಾದವು. ಕೇಂದ್ರದಲ್ಲಿ ಆಡಳಿತರೂಢ ಜನತಾ ಪಕ್ಷ ವೀರೇಂದ್ರ ಪಾಟೀಲರನ್ನು ಇಂದಿರಾ ಗಾಂಧಿಯವರ ಪ್ರತಿಸ್ಪರ್ಧೆಯಾಗಿ ನಿಲ್ಲಿಸಿತು. ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಜನತಾಪಕ್ಷದ ಚುನಾವಣಾ ಪ್ರಚಾರದ ಹೊಣೆಯನ್ನು ಹೊತ್ತರು. ಇಂದಿರಾ ಕಾಂಗ್ರೆಸ್ಸಿನ ಎಲ್ಲಾ ರಾಷ್ಟ್ರೀಯ ನಾಯಕರು ಚಿಕ್ಕಮಗಳೂರಿಗೆ ದಾವಿಸಿದರು. ರಾಷ್ಟ್ರೀಯ ಪತ್ರಿಕೆಗಳ ಕಾರ್ಯಾಲಯಗಳು ಆರಂಭವಾದವು ಸುದ್ದಿ ಸಂಸ್ಥೆಗಳ ಟೆಲಿಗ್ರಾಂ ದಿನದ 24 ಗಂಟೆ ಚಟಗುಟ್ಟಿದವು ಬಿರುಸಿನ ಪ್ರಚಾರ ಭಾಷಣ, ಪತ್ರಿಕಾಗೋಷ್ಠಿಗಳು ನಡೆದವು. ಇಂದಿರಾ ಹಾಗೂ ಜನತಾ ಪಕ್ಷದ ನಡುವೆ ನೇರ ಹೋರಾಟದಲ್ಲಿ 26 ಕ್ಕೂ ಹೆಚ್ಚು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಇದ್ದುದ್ದು ದಾಖಲೆಯಾಯಿತು. ಮಲೆನಾಡಿನ ಮೂಲೆ ಮೂಲೆಗಳಲ್ಲಿ ರಸ್ತೆ ಬದಿಗಳಲ್ಲಿ ಇಂದಿನ ಪ್ರಿಯದರ್ಶಿನಿ ಎಂದು ಜನರ ಭಾವನೆಗಳನ್ನು ತಟ್ಟಿದರು ತುರ್ತು ಪರಿಸ್ಥಿತಿ ಏರಿದ ಪ್ರಧಾನಿ ಜನರಿಂದ ಸೋಲು ಅನುಭವಿಸಿದ ಪ್ರಧಾನಿ ಎಂಬೆಲ್ಲಾ ಹಣೆಪಟ್ಟಿಗಳು ಮರೆಯಾದವು ಜನ ಅವೆಲ್ಲವನ್ನು ಮರೆತು ಇಂದಿರಾಗಾಂಧಿ 77,333 ಮತಗಳ ಅಂತರದಿಂದ ಜಯಗಳಿಸಿ ಆ ಮೂಲಕ ರಾಜಕೀಯ ಪುನರ್ಜನ್ಮ ಪಡೆದರು. ಇತಿಹಾಸದ ಪುಟಗಳಲ್ಲಿ ಚಿಕ್ಕಮಗಳೂರು ಟೀಕೆ ಹಾಗೂ ಪ್ರಶಂಸೆಗೆ ಪಾತ್ರವಾಯಿತು. ಇನ್ನು ಮಹಿಳೆಯರಲ್ಲಿರಾಜಕಾರ ದಲ್ಲಿ ಶಾಸಕಿಯಾಗಿದ್ದ ಬಿ ಎಲ್ ಸುಬ್ಬಮ್ಮ ಶಾಸಕಿಯಾಗಿದ್ದ ಮೊಟ್ಟಮ್ಮ, ಹಾಗೂ ಲೋಕಸಭಾ ಸದಸ್ಯರಾದ ಕುಮಾರಿ ಡಿಕೆ ತಾರದೇವಿ ಅವರ ಹೆಸರನ್ನು ಹೆಸರಿಸಬಹುದು. 20 ಅಂಶಗಳ ಪ್ರಮುಖ ವಿಷಯಗಳೆಂದರೆ…………. 1.ಉಳುವವನೇ ಭೂ ಒಡೆಯನಾದನು, .( ಅಸ್ಪೃಶ್ಯರು ಭೂ ಒಡೆಯರಾದರು). 2. ಶತಮಾನಗಳಿಂದ 1975 ರ ವರೆಗೂ ಜೀತ ಮಾಡುತ್ತಿದ್ದವರು (ಅಸ್ಪ್ರಶ್ಯರು)ಜೀತ ಮುಕ್ತರಾದರು. 3. ಶತಮಾನಗಳಿಂದ 1975 ರ ವರೆಗೂ ಜಮೀನ್ದಾರರ ಋಣದಲ್ಲಿ ಬದುಕುತ್ತಿದ್ದವರು ಋಣಮುಕ್ತರಾದರು (ಅಸ್ಪೃಶ್ಯರು). 4. ಶತ ಶತಮಾನಗಳಿಂದಲೂ ಶಿಕ್ಷಣದ ಹಕ್ಕು ತಮ್ಮ ಹಕ್ಕಲ್ಲ ಎಂದುಕೊಂಡವರಿಗೆ ಕಡ್ಡಾಯ ಶಿಕ್ಷಣ ಜಾರಿಗೆ ಬಂದು ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಯಿತು. 5. ಶತಶತಮಾನಗಳಿಂದಲೂ ಜಮೀನ್ದಾರರಿಂದ ಪಡೆದ ಹಣಕ್ಕೆ ಬಡ್ಡಿ ಚಕ್ರಬಡ್ಡಿ ಕಟ್ಟಿ ಜೀವನಪೂರ್ತಿ ದುಡಿದು ತಾನು ಸತ್ತ ನಂತರ ತನ್ನ ಮಕ್ಕಳಿಗೆ ಅದೇ ಸಾಲದಲ್ಲಿ ಜೀತ ಮಾಡಬೇಕಾದ ಸಂದರ್ಭದಲ್ಲಿ ತಪ್ಪಿಸಲು ಸಾಲಮುಕ್ತ ಪದ್ದತಿ ಜಾರಿಗೆ ಬಂದಿತು ಬ್ಯಾಂಕುಗಳನ್ನು ರಾಷ್ಟ್ರಕರಣ ಗೊಳಿಸಲಾಯಿತು ಈ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲದ ಸೌಲಭ್ಯ ನೀಡಿ ಅವರ ಅಭಿವೃದ್ಧಿಗೆ ಭಾರತವನ್ನು ಮುಕ್ತವಾಗಿ ತೆರೆಯಲಾಯಿತು.6. ಸಾವಿರಾರು ಗ್ರಾಮ ಹಳ್ಳಿಗಳನ್ನು ಗ್ರಾಮದತ್ತು ಯೋಜನೆಯಲ್ಲಿ ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಲಾಯಿತು. 7. ಪಂಚವಾರ್ಷಿಕ ಯೋಜನೆಯಲ್ಲಿ ಈ ಎಲ್ಲಾ ಜನಪರ ಕಾರ್ಯಗಳಿಗೆ ಹಣ ಮೀಸಲಿಡಲಾಯಿತು.. ಹೀಗೆ ಜನಪರವಾದ 20 ಅಂಶಗಳನ್ನು ಜಾರಿಗೆ ತಂದು ಇಂದಿರಾಗಾಂಧಿ ಸ್ವತಂತ್ರ ಬಂದ ನಂತರ 25 ವರ್ಷಗಳಿಂದ ನಿಜ ಭಾರತೀಯರಿಗೆ ಸ್ವತಂತ್ರದ ಅಲ್ಪಸ್ವಲ್ಪ ಸುಖವನ್ನು ನೀಡಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಅಂಬೇಡ್ಕರ್ ಸಂಘದಿಂದ ಹಾಂದಿಯಲ್ಲಿ 20 ಅಂಶಗಳ ಬಗ್ಗೆ ದಿನಾಂಕ 19.08.1976 ರಲ್ಲಿ ಆಳ್ವಾರಯ್ಯ ನವರ ಅಧ್ಯಕ್ಷತೆಯಲ್ಲಿ ಸುಮಾರು 15 ಗ್ರಾಮಗಳನ್ನು ಸೇರಿಸಿಕೊಂಡು ತುರ್ತು ಪರಿಸ್ಥಿತಿಯ ನಂತರ 20 ಅಂಶಗಳು ಹೇಗೆ ದಲಿತರಿಗೆ ಅನುಕೂಲವಾಗಿರುತ್ತವೆ, ಅದರ ಪ್ರಯೋಜನವನ್ನು ಪಡೆಯಲು ನೀವೆಲ್ಲ ಹೇಗೆ ಕಾರ್ಯನಿರ್ವಹಿಸಬೇಕು. ಮತ್ತು ಜೀತ ಪದ್ದತಿ ನಿರ್ಮೂಲನೆ ಮಲ ಹೊರುವ ಪದ್ಧತಿ ನಿರ್ಮೂಲನೆ ಬಗ್ಗೆ ವಿವರಿಸಿದರು. ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಅದರಲ್ಲೂ ದಲಿತ ಕೇರಿಗಳಿಗೆ ವಿಶೇಷ ಪ್ಯಾಕೇಜ್ ಅನ್ನು ಹೊರಡಿಸಲಾಯಿತು. ( ಅದು ಸಮರ್ಪಕವಾಗಿ ದಲಿತ ಕೇರಿಗಳಿಗೆ ಬಳಕೆಯಾಗದಿದಿದ್ದು ದುರಂತ )……………………..ಪ್ರಮುಖವಾಗಿ ಪ್ರತಿ ಹಳ್ಳಿಗಳಿಗೂ 15ರಿಂದ 20 ಇಂದಿರಾ ಆವಾಜ್ ಯೋಜನೆಯಲ್ಲಿ ಮೂರು ರೂಮುಗಳ ಹೊಂದಿದ ಗಟ್ಟಿಮುಟ್ಟಾದ ಮನೆಯನ್ನು ಕಲ್ಪಿಸಲಾಯಿತು. ಭಾಗ್ಯ ಜ್ಯೋತಿ ಯೋಜನೆಯನ್ನು ದಲಿತಕೇರಿಗಳಿಗೆ ಉಚಿತವಾಗಿ ವಿದ್ಯುತ್ ನೀಡಿದರು. ದಲಿತರಿಗಾಗಿ ಐ.ಆರ್.ಡಿ.ಪಿ ಸಾಲವನ್ನು ಗ್ರಾಮೀಣ ಬ್ಯಾಂಕುಗಳಲ್ಲಿ ಮಂಜೂರು ಮಾಡಿದರು. ಇದರಿಂದ ಚಿಕ್ಕಮಗಳೂರಿನ ದಲಿತರು ಮೊದಲ ಬಾರಿಗೆ ಬ್ಯಾಂಕ್ ಕಡೆಗೆ ಮುಖ ಮಾಡಿದರು ಹಾಗೆಯೇ ಸಾಲವನ್ನು ತೆಗೆದುಕೊಂಡು ಅನೇಕ ವ್ಯಾಪಾರ ವ್ಯವಹಾರಗಳನ್ನು ಪ್ರಾರಂಭಿಸಿದರು ಅನೇಕರು ಬಾಳೆಕಾಯಿ, ಮೆಣಸು, ಕಾಫಿ ,ಕಾಳು ಮೆಣಸು , ಕಿತ್ತಲೆ ಹಣ್ಣು ಹಾಗೆ ಮಲೆನಾಡಿನಲ್ಲಿ ಸಿಗುವ ಸೊಪ್ಪು ತರಕಾರಿಗಳನ್ನು ಮಾರಲು ಪ್ರಾರಂಭಿಸಿದರು. ಒಂದಿಷ್ಟು ಆರ್ಥಿಕವಾಗಿ ಪ್ರಬಲರಾದರು ಆಗಿಯೇ ಪಟ್ಟಣ ಪ್ರದೇಶಗಳೊಂದಿಗೆ ಸಂಪರ್ಕವನ್ನು ಕಲ್ಪಿಸಿಕೊಂಡರು ಹಾಗೆಯೇ ಮತ್ತೊಂದು ದಲಿತ ಕೇರಿಗಳಿಗೆ ಪ್ರತಿ ಗ್ರಾಮಗಳಿಗೆ ರಾಮಮಂದಿರ ಈಗೀನ ( ಸಮೂದಾಯ ಭವನ) ಮಂಜೂರು ಮಾಡಿದರು. ಅನೇಕ ಗ್ರಾಮಗಳಲ್ಲಿ ಅದರ ಅವಶೇಷಗಳನ್ನು ಈಗಲೂ ನೋಡಬಹುದು. ಜಿಲ್ಲೆಯಲ್ಲಿ ಅನೇಕ ಕಡೆ ಇಂದಿರಾ ಬಡಾವಣೆಗಳನ್ನು ಕಾಣಬಹುದಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸೀರೆಗಳನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದರು ಚಿಕ್ಕಮಗಳೂರು ಜಿಲ್ಲೆಗೆ ರೈಲ್ವೆ ಅಡಿಪಾಯ ಹಾಕಿ ಉದ್ಘಾಟನೆ ಮಾಡಿದರು. ಬಹುಮುಖ್ಯವಾಗಿ ಇಂದಿರಾಗಾಂಧಿಯವರು ಸಂಸದರಾದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯವಾಗಿ ಅನೇಕ ಮಹಿಳೆಯರು ಮುಖ್ಯ ವಾಹಿನಿಗೆ ಬಂದರು ಪ್ರಮುಖವಾಗಿ ದಲಿತ ಸಮುದಾಯಕ್ಕೆ ಸೇರಿದಂತಹ ಶ್ರೀಮತಿ ಮೊಟ್ಟಮ್ಮ ನವರು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡರು. ಹಾಗೆಯೇ ಮೂಡಿಗೆರೆಯ ಸರ್ಕಾರಿ ಆಸ್ಪತ್ರೆ ಸ್ಥಾಪನೆಯಾಯಿತು. ದಲಿತ ಸಂಘಟನೆಯ ಬೇಡಿಕೆಯಂತೆ ಹಳ್ಳಿಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಗಳು ಪ್ರಾರಂಭವಾಯಿತು. ಹಾಗೂ ಪ್ರತಿ ದಲಿತ ಕೇರಿಗಳ ಮಧ್ಯದಲ್ಲಿ ಬೋರ್ ವೆಲ್ ಕೂಡ ಸ್ಥಾಪನೆಯಾದವು . ಉಳುವವನೇ ಭೂ ಒಡೆಯ ಯೋಜನೆಯಿಂದಾಗಿ ಅನೇಕರು ಭೂಮಿಯನ್ನು ಪಡೆದರು. ಒಟ್ಟಾರೆಯಾಗಿ ಇಂದಿರಾಗಾಂಧಿಯವರ ಪ್ರವೇಶದಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ದಲಿತರಿಗೆ ಅನೇಕ ರೀತಿಯ ಪ್ರಯೋಜನಗಳನ್ನು ಕಾಣಬಹುದು. ಆದರೆ ಇಂದು ಶ್ರೀಮತಿ ಇಂದಿರಾಗಾಂಧಿಯವರು 1976ರಲ್ಲಿ ಸಂವಿಧಾನಕ್ಕೆ ಜಾತ್ಯತೀತ, ಸಮಾಜವಾದಿ ಐಕ್ಯತೆ ಎಂಬ ಪದಗಳನ್ನು ಸೇರಿಸಿದಬಗ್ಗೆ ಒಂದಿಷ್ಟು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಇಂದಿರಾಗಾಂಧಿಯವರ ಜಾತ್ಯತೀತ ಪರಿಕಲ್ಪನೆ ಅದೆಷ್ಟು ವಿಸ್ತಾರವಾಗಿತ್ತು ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕಾಗಿದೆ. ಮಹಿಳೆಯಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಜಪಾನ್ ನಂತರ ಸಂವಿಧಾನಕ್ಕೆ 1976ರಲ್ಲಿ ಮೂಲಭೂತ ಕರ್ತವ್ಯಗಳನ್ನು ಸಹ ಸೇರಿಸಿ ಮೂಲಭೂತ ಹಕ್ಕುಗಳು ಎಷ್ಟು ಶ್ರೇಷ್ಠವೋ, ಅಷ್ಟೇ ಮೂಲಭೂತ ಕರ್ತವ್ಯಗಳು ಕೂಡ ಶ್ರೇಷ್ಠ ಎಂಬುದನ್ನು ಅರಿತು ದೇಶದ ಉಳಿವಿಗಾಗಿ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಿದ ಮಹಾನ್ ಕೆಲಸ ಜೊತೆಗೆ, ಪರಮಾಣು ವಿಜ್ಞಾನಿ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಉಪಗ್ರಹವನ್ನು ಉಡಾವಣೆ ಮಾಡಿ ಕೋಟ್ಯಂತರ ರೂಪಾಯಿ ನಷ್ಟ ಮಾಡಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾದರು. ಆದರೂ ವೈಜ್ಞಾನಿಕ ಕ್ಷೇತ್ರದಲ್ಲಿ ತನ್ನದೇ ಆದ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದ ಅವರು ಮತ್ತೆ ಎರಡನೇ ಬಾರಿ ಅಬ್ದುಲ್ ಕಲಾಂ ರವರ ನೇತೃತ್ವದಲ್ಲಿ ಮತ್ತೊಮ್ಮೆ ಉಪಗ್ರಹವನ್ನು ಉಡಾವಣೆ ಮಾಡಿ ಯಶಸ್ವಿಗೊಳಿಸಿ ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ಶ್ರೀಮತಿ ಇಂದಿರಾಗಾಂಧಿಯವರು. ದೂರ ದೃಷ್ಟಿಯುಳ್ಳ ಜನಪರ ಕಾರ್ಯವಾಗಿತ್ತು. ಇಂದಿರಾ ಗಾಂಧಿ ಅವರ ಕಾರ್ಯಕ್ರಮದ ಕೆಲವೊಂದು ಅಂಶಗಳ ಪಿಠೀಕೆ ಅಷ್ಟೇ ಇದು………. ಅವರ ಅನೇಕ ಜನಪರ ಕಾರ್ಯಕ್ರಮಗಳನ್ನು ಅರ್ಥ ಮಾಡಿಕೊಳ್ಳದೆ ಕೇವಾಲ ತುರ್ತು ಪರಿಸ್ಥಿತಿಯನ್ನೇ ಕೇಂದ್ರವಾಗಿಟ್ಟುಕೊಂಡು ಅವರ ಯೋಜನೆಗಳನ್ನು ಮರೆಯಬಾರದು.ಇಷ್ಟೆಲ್ಲ ಜನಪರ ಕೆಲಸ ಕಾರ್ಯಗಳನ್ನು ಮಾಡಲು ಇಂದಿರಾ ಗಾಂಧಿಯವರಿಗೆ ಶಕ್ತಿ ತುಂಬಿದವರು ಚಿಕ್ಕಮಗಳೂರಿನ ಪ್ರಜ್ಞಾವಂತರು. ಆದ್ದರಿಂದ ಈ ಎಲ್ಲಾ ದೃಷ್ಟಿಯಿಂದಲೂ. “ಚಿಕ್ಕಮಗಳೂರಿನ ಚಿಕ್ಕಮಗಳು ಇಂದಿರಾ ಗಾಂಧಿಯವರು”……… ✍️ ಹರೀಶ್ ನಲ್ಕೆ ಸಂಶೋಧನಾ ಬರಹಗಾರರು 9731493209

