लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹೋಬಳಿ ಕೆಂಪೇಗೌಡ ಒಕ್ಕಲಿಗರ ವೇದಿಕೆ (ರಿ )ಸಭೆ

26/06/2025ರಂದು ಜನ್ನಪುರ ವರ್ತಕರ ಭವನದಲ್ಲಿಗೋಣಿಬೀಡು ಹೋಬಳಿ ಕೆಂಪೇಗೌಡ ಒಕ್ಕಲಿಗರ ವೇದಿಕೆ (ರಿ )ಸಭೆ ನಡೆಸಲಾಯಿತು ಈ ಸಭೆಯ ಅಧ್ಯಕ್ಷತೆ ಸಂತೋಷ ಗೌಡಮೇಕನಗದ್ದೆ ಹೋಬಳಿ ಅಧ್ಯಕ್ಷರ ಘನ ಅಧ್ಯಕ್ಷತೆ ವಹಿಸಿದ್ದರು ತಾಲ್ಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ,ಉಪಾಧ್ಯಕ್ಷರಾದ ಅಶ್ವಥ್ ಗೌಡ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗೌಡ, ಸಂಘಟನಾ ಕಾರ್ಯದರ್ಶಿ ಪ್ರೀತಮ್ ಗೌಡ ಮಾಡ್ಕಲ್, ಕಾರ್ಯದರ್ಶಿ ಪವನ್ ಗೌಡ ಪಟ್ಟದೂರು, ಉಸ್ತುವಾರಿ ಸುರೇಶ್ ಗೌಡ , ಹಿರಿಯರಾದ ಚಂದ್ರೆ ಗೌಡ, ಸಂದೀಪ್ ಗೌಡ, ಭರತ್ ಗೌಡ,ಅನಿಲ್ ಗುರುದೇವ ಗೌಡ, ಜಗದೀಶ್ ಗೌಡ ಉಗ್ಗೇಹಳ್ಳಿ ಸಂತೋಷ ಗೌಡ ಕುಂಬರಡಿ, ಗಿರೀಶ್ ಗೌಡ ಜನ್ನಪುರ,ಮೋಹನ್ ಜಾಣಿಗೆ,ಭರತ್ ಗೌಡ ಕನ್ನೇಹಳ್ಳಿ , ನಯನ ಗೌಡ ಇನ್ನು ಒಕ್ಕಲಿಗ ಹಿರಿಯಕಿರಿಯ ಹೋಬಳಿಯ ಸರ್ವ ಸದಸ್ಯರ ಉಪ ಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು,ಗೋಣಿಬೀಡು ಹೋಬಳಿಯ ಅಧ್ಯಕ್ಷರನ್ನಾಗಿ ಸಂತೋಷ ಗೌಡ ಮೇಕನಗದ್ದೆ ಸರ್ವನುಮತದಿಂದ ಪುನರ್ ಆಯ್ಕೆ ಯಾದರು ಹಾಗೂ ಪ್ರಧಾನ ಕಾರ್ಯಧರ್ಶಿ ಚಿರಾಗ್ ಗೌಡ ಹಾರ್ಮಕ್ಕಿ ಇವರನ್ನು ಆಯ್ಕೆ ಮಾಡಲಾಯಿತು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ ಕಡಿದಾಳು, ಮುಂಬರುವ ನಮ್ಮ ಒಕ್ಕಲಿಗ ಪೀಳಿಗೆಗೋಸ್ಕರ ನಮ್ಮ ಈಸಂಘಟನೆಯನ್ನು ಬಲಪಡಿಸಬೇಕಾಗಿದ್ದು ಹಾಗೂ ಒಕ್ಕಲಿಗರ ಹಿತಾಸಕ್ತಿ ಕಾಪಾಡಿಕೊಳ್ಳುವುದು ಇದರ ಉದ್ದೇಶವೇ ವಿನಹ ಬೇರೆ ಯಾವ ಜಾತಿ ಪಂತಗಳ ವಿರುದ್ಧ ಹೊರಡುವ ಮನೋಭಾವನೆ ಯಾರಿಗೂ ಇಲ್ಲಾ, ಜನಗಣತಿಯಲ್ಲಿ ಒಕ್ಕಲಿಗರನ್ನು ಹಿಂದಿಡುವ ಕೆಲಸ ನಡೆಯುತ್ತಿದೆ ಹಾಗಾಗಿ ನಾವು ಜಾಗೃತರಾಗಬೇಕು ಎಂದು ತಿಳಿಸಿ ಸಂಘಟನೆ ಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು ಎಂದು ಎಚ್ಚರಿಸಿದರು, ಮತ್ತು ಪುನರ್ ಆಯ್ಕೆ ಆದ ಗೋಣಿಬೀಡು ಹೋಬಳಿಯ ಪದಾಧಿಕಾರಿಗಳಿಗೆ ಶುಭಹಾರೈಸಿದರು, ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಸಂತೋಷ ಗೌಡಮೇಕನಗದ್ದೆ ಅವರು ನನಗೆ ಈ ಹಿಂದೆ ನೀಡಿದ ಸಹಕಾರ ಸಲಹೆಯನ್ನು ನೀಡಬೇಕೆಂದು ನೆರೆದಿದ್ದ ಒಕ್ಕಲಿಗ ನಾಯಕರುಗಳಿಗೆ ಮನವಿ ಮಾಡಿದರು,ಮತೊಮ್ಮೆ ಅಧ್ಯಕ್ಷರನ್ನಾಗಿ ಪುನರ್ ಆಯ್ಕೆ ಮಾಡಿದ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ಜನಾಂಗದ ಏಳಿಗೆಗಾಗಿ ದುಡಿಯುವುದಾಗಿ ತಿಳಿಸಿದರು. ಚಿರಾಗ್ ಗೌಡ ಮಾತನಾಡಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು, ಒಕ್ಕಲಿಗ ಜನಾಂಗದ ಹಿರಿಯರು ಮಾತನಾಡಿ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಗಳಿಗೆ ಶುಭಹಾರೈಸಿ ಸಂಘದ ಸಾಧನೆ ಹಾಗೂ ಮೊನ್ನೆ ಚಿಕ್ಕಮಗಳೂರಿನಲ್ಲಿ ನೆಡೆದ ಬೆಳೆಗಾರರ ಸಮಾವೇಶಕ್ಕೆ ಮೂಡಿಗೆರೆಯ ಬೆಳೆಗಾರರನ್ನು ಒಟ್ಟು ಗೂಡಿಸುವಲ್ಲಿ ಸಂಘದ ಪಾತ್ರ ಅತಿ ಮುಖ್ಯವಾಗಿತ್ತು ಎಂದು ಪ್ರಶಂಸಿಸಿ ನಮ್ಮ ಈ ಸಂಘಟನೆಯ ಏಳಿಗೆಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು

About Author

Leave a Reply

Your email address will not be published. Required fields are marked *

You may have missed