ಅಂತರ ರಾಷ್ಟ್ರೀಯ ಮಾದಕವಸ್ತುಗಳ ವಿರೋಧಿ ದಿನ ಆಚರಣೆ.ಮೂಡಿಗೆರೆ…..
1 min readಮೂಡಿಗೆರೆಯಲ್ಲಿ ಮಾದಕ ದ್ರವ್ಯ ವಿರೋಧ ಜಾಥಾ
ಮೂಡಿಗೆರೆ:
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧ ದಿನದ ಅಂಗವಾಗಿ, ಮೂಡಿಗೆರೆ ಪೊಲೀಸ್ ಠಾಣೆಯ ಆಶ್ರಯದಲ್ಲಿ ಗುರುವಾರ ಜನಜಾಗೃತಿ ಜಾಥಾವನ್ನು ಆಯೋಜಿಸಲಾಯಿತು.
ಈ ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳು, ಆಟೋ ಚಾಲಕರು ಹಾಗೂ ಆಟೋ ಮಾಲೀಕರ ಸಂಘದ ಸದಸ್ಯರು ಭಾಗವಹಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು, ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಲಾಯಿತು.
ಪೊಲೀಸ್ ವೃತ್ತ ನೀರಿಕ್ಷಕರು ಶ್ರೀ ರಾಜಶೇಖರ್ ಮೂಡಿಗೆರೆ ವೃತ್ತ ಹಾಗೂ ಪೊಲೀಸ್ ಉಪ ನೀರಿಕ್ಷಕರಾದ ಶ್ರೀ ಶ್ರೀನಾಥ ರೆಡ್ಡಿ ರವರುಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಸಾರ್ವಜನಿಕರಿಗೆ ಮಾದಕ ದ್ರವ್ಯಗಳ ಹಾನಿಕಾರಕತೆ ಮತ್ತು ಅದರಿಂದ ದೂರವಿರುವ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.

