ಗತಿಗೆಟ್ಟ ಮೆಸ್ ಕಾಂ….ಮತಿಗೆಟ್ಟ ಸಿಬ್ಬಂದಿ….
1 min read
ಗತಿಗೆಟ್ಟ ಮೆಸ್ ಕಾಂ….ಮತಿಗೆಟ್ಟ ಸಿಬ್ಬಂದಿ….







ಚಿಕ್ಕಮಗಳೂರು ಜಿಲ್ಲೆ..ಮೂಡಿಗೆರೆ ತಾಲೂಕಿನಲ್ಲಿ..03.05.2025.ರ ಶನಿವಾರ ಸಂಜೆ 3.ಗಂಟೆಗೆ ಮಾಯವಾದ ವಿದ್ಯುತ್ ಇವರೆಗೆ ಕಾಣದಾಗಿದೆ..ಕರೆಂಟ್ ಹೊಡೆದ ಕಾಗೆಯಂತಾಗಿರುವ ಮೆಸ್ ಕಾಂ ಸಿಬ್ಬಂದಿಗಳು ಯಾರ ಮೊಬೈಲ್ ಕರೆಗಳನ್ನು ಸ್ವಿಕರಿಸುತ್ತಿಲ್ಲ.
ಒಂದು ದಿನ ಕರೆಂಟ್ ಇಲ್ಲ ಎಂದು ಒಂದು ವಾರದ ಮುಂಚೆಯೆ ಸಂದೇಶ ರವಾನಿಸುವ ಇಲಾಖೆ,
ಇಂದು ಯಾವ ಸಂದೇಶ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.ಮೈನ್ ಸಪ್ಲೆ ಹಾಳಾಗಿದೆ ಎಂದು ಬಾಯಿಂದ ಬಾಯಿಗೆ ಸಾರ್ವಜನಿಕರು ಹೇಳುತ್ತಾರೆ ಹೊರತು ಯಾವಾಗ ಕರೆಂಟ್ ಬರುತ್ತದೆ ಎಂದು ಹೇಳಲು ಯಾವ ಮೆಸ್ ಕಾಂನ ಮೊಬೈಲ್ ಗಳು ರಿಂಗೆಣಿಸುತ್ತಿಲ್ಲಾ.
ದಿನ ಬಳಕೆಯ ವಸ್ತುಗಳು ಹಾಳಾಗುವುದರ ಜೊತೆಗೆ ಸಾರ್ವಜನಿಕರಿಗೆ ವಿತರಿಸಲು ಆಗುತ್ತಿಲ್ಲ.
ಅಚಾನ್ನಕ್ಕಾಗಿ ರೀಪೆರಿ ಬಂದರೆ ಸರಿಯಾಗುವ ಅಂದಾಜಿನ ಸಮಯವನ್ನು ಗ್ರಾಹಕರಿಗೆ ತಿಳಿಸುವಂತಾಗಲಿ ಎಂಬುದೆ ಸಾರ್ವಜನಿಕರ ಅಭಿಪ್ರಾಯವಾಗಿದೆ

