*ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿ*
1 min read
*ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿ*






ನೆನ್ನೆ ಬೆಳಿಗ್ಗೆ ಪಾಲಿಬೆಟ್ಟದ ಎಮ್ಮೆಗುಂಡಿ ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿರುವ ಘಟನೆಯ ಕರಿ ಛಾಯೆ ಮರೆ ಆಗುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಂತ್ ರವರ ತಂದೆ, ಕರಡಿಗೋಡು ಬಸವನಹಳ್ಳಿ ಹಾಡಿ ಸಮೀಪದ ನಿವಾಸಿ ಸೊಳ್ಳೆಕೋಡಿ ಚಿಣ್ಣಪ್ಪ (76) ಎಂಬುವರು ಕಾಡಾನೆಯ ದಾಳಿಗೆ ಬಲಿಯಾದವರಾಗಿದ್ದಾರೆ.
ಬೆಳಗಿನ ಜಾವ 1.30 ರ ಸಮಯದಲ್ಲಿ ಅಟ್ಟಣಿಗೆಯಲ್ಲಿ ಮಲಗಿದ್ದ ಚಿಣ್ಣಪ್ಪ ಅವರು ಕಾಡಾನೆಯ ಶಬ್ದಕ್ಕೆ ಹೊರಗೆ ಬಂದಿದ್ದಾರೆ. ಈ ಸಂದರ್ಭ ಅಲ್ಲಿಯೇ ಇದ್ದ ಕಾಡಾನೆ ಅವರ ಮೇಲೆ ದಿಢೀರ್ ದಾಳಿ ನಡೆಸಿ ಸಾಯಿಸಿದೆ.

