ಅವಿನ್ ಟಿವಿ ಜಾಲತಾಣ.ತರೀಕೆರೆ೨೦: *ಶರಣರ ವಚನಗಳಲ್ಲಿ ಅಂಬೇಡ್ಕರ್ ಕುರಿತು ಚಿಂತನ ಮಂಥನ*
1 min read
✒️ಅವಿನ್ ಟಿವಿ ಜಾಲತಾಣ.ತರೀಕೆರೆ೨೦: *ಶರಣರ ವಚನಗಳಲ್ಲಿ ಅಂಬೇಡ್ಕರ್ ಕುರಿತು ಚಿಂತನ ಮಂಥನ*







ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು
ದಲಿತ ಸಾಹಿತ್ಯ ಪರಿಷತ್ತು
ಕದಳಿ ಮಹಿಳಾ ವೇದಿಕೆ
ಇನ್ನರ್ ವೀಲ್. ಚುಟುಕು ಸಾಹಿತ್ಯ ಪರಿಷತ್ ತರೀಕೆರೆ ತಾಲೂಕು ಘಟಕಗಳ ವತಿಯಿಂದ ಭಾನುವಾರ ಮಧ್ಯಾಹ್ನ 3:00 ಘಂಟೆಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕನ್ನಡದ ಮೊದಲ ಕವಯತ್ರಿ ಶರಣೆ ಅಕ್ಕಮಹಾದೇವಿ ಸಂಸ್ಮರಣೆ ಕಾರ್ಯಕ್ರಮ ನಡೆಯಿತು
ಕಾಯ೯ಕ್ರಮದಲ್ಲಿ
*ಶರಣರ ವಚನಗಳಲ್ಲಿ ಅಂಬೇಡ್ಕರ್ ಹುಡುಕಾಟ* ವಿಷಯ ಕುರಿತು ಮಾತನಾಡಿದ ಕುವೆಂಪು ವಿವಿಯ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೊ. ಶುಭ ಮರವಂತೆ ಅಂಬೇಡ್ಕರ್ ಕನಾ೯ಟಕದಲ್ಲಿ ಹುಟ್ಟಿದ್ದರೆ ಬಸವಣ್ಣನ ಅನುಯಾಯಿಯಾಗುತ್ತಿದ್ಜರು. ಬಸವಣ್ಣನ ಮುಂದಿನ ಜನ್ಮವೇ ಅಂಬೇಡ್ಕರ್ ಇರಬಹುದೆಂದು ಅನಿಸುತ್ತಿದೆ ಎಂದು ಹೇಳಿದರು
ದೇವರ ಅಸ್ತಿತ್ವವನ್ನು ಶರಣರು ಪ್ರಶ್ನಿಸಿದಂತೆ ಅಂಬೇಡ್ಕರ್ ಸಹ ದೇವರ ಅಸ್ತಿತ್ವವನ್ನು ಪ್ರಶ್ನಿಸಿದರು. ದೇಶ ಅಂಬೇಡ್ಕರ್ ಕಾರಣದಿಂದ ಜೀವಂತವಾಗಿದೆ. ಜಾತಿಭೇದ ಕಾರಣಕ್ಕೆ ಬಸವಣ್ಣ ದೇಗುಲವನ್ನು ತಿರಸ್ಕರಿಸಿದರೆ ಅಂಬೇಡ್ಕರ್ ಕಾಳಾರಾಂ ದೇವಾಲಯ ಪ್ರವೇಶಿಸುವ ಮೂಲಕ ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆದರು.
ಮಹಿಳಾ ಸದಸ್ಯರನ್ನು ಸಂವಿಧಾನ ಸಭೆಗೆ ಸೇರಿಸಿಕೊಂಡರು.
ಬುದ್ಧನ ಶರಣಂ ಗಚ್ಛಾಮಿ ತತ್ವವನ್ನು ಶರಣರು ಶರಣ ತತ್ವ ವಾಗಿಸಿದರು. ಬುದ್ಧನಿಂದ ಬಸವ , ಬಸವನಿಂದ ಅಂಬೇಡ್ಕರ್ ಎಂಬುದನ್ನು ವಿವರಿಸಿದರು
*ಅಕ್ಕ ಮಹಾದೇವಿ ವಚನಗಳಲ್ಲಿ*
*ಸ್ತ್ರೀತ್ವದ ತಲ್ಲಣಗಳು ಮತ್ತು ಸಮಾನತೆಯ ಆಶಯಗಳು*
ವಿಷಯ ಕುರಿತು ಈದಿನ ಡಾಟ್ ಕಾಮ್ ವರದಿಗಾರ್ತಿ ಎಸ್. ಜಿ. ಗಿರಿಜಾ
ಮಾತನಾಡಿ ಅಕ್ಕ ಮಹಾದೇವಿ ರಾಜಪ್ರಭುತ್ವ ಧಿಕ್ಕರಿಸುವ ಮೂಲಕ ಮಹಿಳಾ ಶೋಷಣೆಯ ಖಂಡಿಸಿದರು. ಜಗತ್ತಿನ ಮೊದಲ ಮಹಿಳಾ ಧ್ವನಿಯಾಗಿ ಅಂಗಭಾವ ತೊರೆದು ಲಿಂಗ ಭಾವ ತೊಟ್ಟರು. ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಅಕ್ಕ ಮಹಾದೇವಿ ತಮ್ಮ ವಚನಗಳ ಮೂಲಕ ಬಂಡಾಯದ ಧ್ವನಿಯಾಗಿದ್ದಾರೆ ಎಂದು ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶೇಖರಪ್ಪ, ಕಾರ್ಯಕ್ರಮ ಉದ್ಘಾಟಿಸಿದ ಇನ್ನರ್ ವೀಲ್ ಅಧ್ಯಕ್ಷೆ ಉಮಾ ದಯಾನಂದ, ಕುವೆಂಪು ವಿವಿಯ ಪ್ರಾಧ್ಯಾಪಕಿ ದಿವ್ಯಾ , ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿದರು.
ಕಾಟಿಗನೆರೆ ರಂಗಪಯಣ ತಂಡದ ಕಲಾವಿದ ಲೋಕೇಶ್ ಭಕ್ತನಕಟ್ಟೆ, ಸೇರಿದಂತೆ ಬಿ.ಎಸ್.ಭಗವಾನ್, ಉಮಾ ಪ್ರಕಾಶ್, ಟಿ.ಜಿ.ಸದಾನಂದ್, ರೋಹಿಣಿ ನರಸಿಂಹ ಮೂರ್ತಿ, ರಾಜು , ವಚನ ಹಾಗೂ ಕ್ರಾಂತಿ ಗೀತೆಗಳ ಹಾಡಿದರು
ಅಜ್ಜಂಪುರ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಮುಖಂಡ ಮಹೇಂದ್ರ ಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತಾ ರಮೇಶ್ , ಶರಣ ಸಾಹಿತ್ಯ ಪರಿಷತ್ತಿನ ಚೇತನ್ ಉಪಸ್ಥಿತರಿದ್ದರು.
ಬರಹ ••✒️
ಡಿ.ಎಂ.ಮಂಜುನಾಥಸ್ವಾಮಿ

