लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಎಸ್ಪಿ ಜಿಲ್ಲಾ ಘಟಕ ವತಿಯಿಂದ 134.ನೇ ಅಂಬೇಡ್ಕರ ಜನ್ಮ ದಿನಾಚರಣೆ ಮತ್ತು ಸಂಸ್ಥಾಪನಾ ದಿನದ ಕಾರ್ಯಕ್ರಮ…

1 min read

ಬಿಎಸ್ಪಿ ಜಿಲ್ಲಾ ಘಟಕ ವತಿಯಿಂದ 134.ನೇ ಅಂಬೇಡ್ಕರ ಜನ್ಮ ದಿನಾಚರಣೆ ಮತ್ತು ಸಂಸ್ಥಾಪನಾ ದಿನದ ಕಾರ್ಯಕ್ರಮ

.
ಚಿಕ್ಕಮಗಳೂರು ಜಿಲ್ಲಾ ಬಿಎಸ್ಪಿ ವತಿಯಿಂದ ದಿನಾಂಕ -18-04-2 025ರ ಶುಕ್ರವಾರದಂದು ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಮತ್ತು ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು,
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿಗೆ ತರುವ ಯಾವುದಾದರು ರಾಜಕೀಯ ಪಕ್ಷ ಇದ್ದರೆ ಅದು ಬಹುಜನ ಸಮಾಜ ಪಕ್ಷ ಮಾತ್ರ ಎಂದು ಹೇಳಿ,ಚುನಾವಣೆಯಲ್ಲಿ ಆಮಿಷಗಳಿಗೆ ಬಲಿಯಾಗಬಾರದು ಸರ್ವರ ಸಮಾನತೆಗಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡುತ್ತಿರುವ ಬಹುಜನ ಸಮಾಜ ಪಕ್ಷವನ್ನೂ ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಟಿ ರಾಧಾಕೃಷ್ಣ ಮಾತನಾಡಿ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿಕೊಂಡು ಬಂದ ಒಂದು ಜನಾಂದೋಲನ ಪಾರ್ಟಿ ಬಿಎಸ್ಪಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಗಳನ್ನು ಹಳ್ಳಿ ಹಳ್ಳಿಗೆ ತಲುಪಿಸಿ ಜನ ಜಾಗೃತಿ ಮೂಡಿಸಿದ್ದೇವೆ..
ಇದರ ಪರಿಣಾಮವೇ ಇಂದು ಶೋಷಿತ ಸಮುದಾಯಗಳು ಸಮಾಜದಲ್ಲಿ ಪ್ರಶ್ನಿಸುವ ಹಕ್ಕು ಪಡೆಯುವ ಮಟ್ಟಕ್ಕೆ ಬೆಳೆದಿರುವುದು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ, ಕೆ ಬಿ ಸುಧಾ, ಶೃಂಗೇರಿ ಗೋಪಾಲ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಹಸೈನಾರ್ ಬಿಳಗುಳ, ಫಿಶ್ಮೋನು ಮೂಡಿಗೆರೆ, ನಿವೃತ್ತ ಶಿಕ್ಷಕ ಹಾಲಯ್ಯ, ಕಡೂರು ಕುಮಾರಸ್ವಾಮಿ ಇವರನ್ನು ಸನ್ಮಾನಿಸಲಾಯಿತು.ಹೋರಾಟಗಾರರಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ ಕೆ ಟಿ ರಾಧಾಕೃಷ್ಣ, ಗೋಪಾಲ್, ಮಂಜಯ್ಯ, ಹಾಂದಿ ಬಾಬಣ್ಣ, ಜಾಕೀರ್ ಹುಸೇನ್ ಜಗದೀಶ್ ಕಡೂರು ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಎಸ್ಪಿ ಅಧ್ಯಕ್ಷ ಪಿ. ಪರಮೇಶ್ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಜಾಕೀರ್ ಅಲಿಖಾನ್, ಗಂಗಾಧರ್, ಬಿಎಂ ಶಂಕರ್, ವಾಹಿದ್ ಜಾನ್, ಜಿಲ್ಲಾ ಸಂಯೋಜಕರಾದ ಯು ಬಿ ಮಂಜಯ್ಯ, ಮಂಜುಳಾ, ಪುಟ್ಟಸ್ವಾಮಿ, ನಾರಯಣ ಸ್ವಾಮಿ, ಎಲ್ ಬಿ ರಮೇಶ್,ಚಂದ್ರಶೇಖರ್, ಶೀಲಾ ಸುಕೇಶ್, ಆನಂದ್, ಮೋಹನ್, ರತ್ನ, ಸವಿತಾ, ವಿಜಯ್ ಮುಂತಾದವರು ಉಪಸ್ಥಿತರಿದ್ದರು.
ಸ್ವಾಗತ ಪಿಕೆ ಮಂಜುನಾಥ್ ಮಾಡಿದರು, ಮಂಜುಳಾ ವಂದಿಸಿದರು,ಕಾರ್ಯಕ್ರಮದ ನಿರೂಪಣೆಯನ್ನು ಬಕ್ಕಿ ಮಂಜುನಾಥ್ ನೆರವೇರಿಸಿದರು.

About Author

Leave a Reply

Your email address will not be published. Required fields are marked *

You may have missed