ಸಂಘ ಸಂಸ್ಥೆಗಳಿಗೆ ಇಲಾಖೆ ವತಿಯಿಂದ ನೆರವು..
1 min readಇಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಸಂಘ ಸಂಸ್ಥೆಗಳಿಗೆ ಕೊಡುವ ಧನ ಸಹಾಯ ಪಡೆಯುವ ಕುರಿತು ಮಾಹಿತಿ ಕೊಡುವ ಸಭೆಯನ್ನು ಆಯೋಜಿಸಿತ್ತು.
ಜಿಲ್ಲೆಯ ಎಲ್ಲಾ ಪ್ರಕಾರದ ಕಲಾವಿದರು ಭಾಗವಹಿಸಿದ್ದರು.
ಈ ಒಂದು ಸಭೆಯಲ್ಲಿ ಕಲಾವಿದರು ಧನ ಸಹಾಯ ಪಡೆಯುವ ಕ್ರಮವನ್ನು ಇಲಾಖೆಯ ಅಧಿಕಾರಿಯಾದ ಶ್ರೀನಿವಾಸರವರು ವಿವರಿಸಿದರು.
ಸಹಾಯಕ ನಿರ್ದೇಶಕರಾದ ರಮೇಶ್ ರವರು ಕಲಾವಿದರೊಂದಿಗೆ ಮುಕ್ತವಾಗಿ ಚರ್ಚಿಸಿ ಕಲಾವಿದರ ಪ್ರಶ್ನೆಗಳಿಗೆ ಉತ್ತರಿಸಿ ಇಲಾಖೆ ಯಾವಾಗಲೂ ಕಲಾವಿದರ ಪರವಾಗಿ ನಿಲ್ಲುತದೆ ಎಂಬುವ ವಿಶ್ವಾಸವನ್ನು ವ್ಯಕ್ತಪಡಿಸಿದರು.![]()

