ಮಾರುತಿ ವ್ಯಾನ್ ಮೇಲೆ ಕಾಡಾನೆ ದಾಳಿ*
1 min read
*ಮಾರುತಿ ವ್ಯಾನ್ ಮೇಲೆ ಕಾಡಾನೆ ದಾಳಿ*
ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ವ್ಯಾನ್ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಇಂದು ಬೆಳಗ್ಗೆ ಬೆಳಗ್ಗೆ 11:30 ಗಂಟೆ ಸಮಯದಲ್ಲಿ
ಪೊನ್ನಂಪೇಟೆ ತಾಲೂಕು ಕಾನೂರು ಕುಟ್ಟ ರಸ್ತೆಯ ಕೇಂಬುಕೊಲ್ಲಿಯ ಬಿ.ಸಿ ಕುಟ್ಟಪ್ಪನವರ ಮನೆಯ ಮುಂಭಾಗ ನಡೆದಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಮುಕ್ಕಾಟೀರ ಮಧು ಎಂಬುವವರ
ಮಾರುತಿ ವ್ಯಾನನ್ನು ದಿಡೀರ್ ಪ್ರತ್ಯಕ್ಷ ಗೊಂಡ ಮೂರು ಆನೆಗಳ ಪೈಕಿ ಒಂದು ಆನೆ ಅಡ್ಡಗಟ್ಟಿ ಮುಂಬಾಗವನ್ನು ಗುದ್ದಿ ಜಖಂ ಗೊಳಿಸಿದೆ. ಹಿಂಬದಿಯಲ್ಲಿ ವಾಹನಗಳ ಸಾಲು ಇದ್ದುದರಿಂದ ಬೆದರಿದ ಆನೆಗಳು ವ್ಯಾನನ್ನು ಬಿಟ್ಟು ತೋಟದೊಳಗೆ ನುಸುಳಿವೆ. ವ್ಯಾನಿನೊಳಗಿದ್ದವರಿಗೆ ಯಾವುದೇ ಅಪಾಯ ಉಂಟಾಗಿಲ್ಲ.
ವರದಿ….
*ಕ್ಯೂಟ್ ಕೂರ್ಗ್ ನ್ಯೂಸ್*

