ಬಿಜೆಪಿಯನ್ನು ಸೋಲಿಸಿ.ರುದ್ರಯ್ಯ ಕರೆ.
1 min read
ಬಿಜೆಪಿಯನ್ನು ಸೋಲಿಸಿ. ರುದ್ರಯ್ಯ ಬಿ….ಕರೆ.
ಭಾರತ್ ಕಮ್ಯುನಿಸ್ಟ್ (ಮ್ರಾಕ್ಸ್ ವಾದಿ—ಲೆನಿನ್ ವಾದಿ)
ಸಿಪಿಎಂಎಲ್ ರೆಡ್ ಸ್ಟಾರ್…
ಪಕ್ಷದ ರಾಜ್ಯ ಕಾರ್ಯದರ್ಶಿ ರುದ್ರಯ್ಯ ಬಿ. ಇಂದು ವಾಹಿನಿಯೊಂದಿಗೆ ಮಾತನಾಡಿ……
ಫ್ಯಾಸಿಸ್ಟ್ ಅರ್.ಎಸ್.ಎಸ್.ಬಿಜೆಪಿಯನ್ನು ಸೊಲಿಸಿ…ಸಂವಿಧಾನ.ಪ್ರಜಾಪ್ರಭುತ್ವ. ಜಾತ್ಯಾತೀತತೆ ಮತ್ತು ಜಾತಿ ಆದಾರಿತ ಮೀಸಲಾತಿಯನ್ನು ಉಳಿಸಿ ಎಂದು ಹೇಳಿದರು.
ಮಾರ್ಚ್.10.2024.ರಂದು ನಮ್ಮ ಪಕ್ಶದ ನೇತೃತ್ವದಲ್ಲಿ ಫ್ಯಾಸಿಸ್ಟ್ ವಿರೋಧಿ ಅಖಿಲ ಬಾರತ ಜನತಾ ಸಮಾವೇಶ ವು ಕೈಗೊಂಡ ರಾಜಕೀಯ ನಿರ್ಣಯವನ್ನು ನಾಗಪುರ ಘೋಷಣೆ ಎಂದು ಪ್ರಕಟಿಸಲಾಗಿದೆ.ಈ ಘೋಷಣೆಯ ಪ್ರಕಾರ ಅದಿಕಾರ ರೂಡ ಮೋದಿ ಸರ್ಕಾರವು ವಿದೇಶಿ ಹಣಕಾಸು ಬಂಡವಾಳದ ಹಿತ ಮತ್ತು ಭಾರತ ಬ್ರಾಹ್ಮಣವಾದಿ ಸಿದ್ದಾಂತದ ಚಿತಾವಣೆಯಿಂದ ಕೂಡಿದ ಫ್ಯಾಸಿಸ್ಟ್ ಸರ್ಕಾರವಾಗಿದೆ.
ಇದನ್ನು ಕೇವಲ ಕೋಮುವಾದವೆಂದು ಅರ್ಥೈಸುವುದು ಅತ್ಯಂತ ಅಪ ಅಂದಾಜು ಅಗುತ್ತದೆ.ದೇಶದ ಸಂಪತ್ತು.ಆಡಳಿತ. ಮಿಲಿಟರಿ. ನ್ಯಾಯಾಂಗ.ಚುನಾವಣ ಆಯೋಗ.ಕಲೆ.ಸಂಸ್ಕ್ರುತಿ ಮತ್ತು ಮಾದ್ಯಮ ಕ್ಷೇತ್ರಗಳಲ್ಲಿ ಹಿಂದುತ್ವವಾದಿ ಪ್ಯಾಸಿಸಂ ತಾಂಡವಾಡುತ್ತಿದೆ.
ದೇಶದ ಸಾರ್ವಜನಿಕ ಉತ್ಪಾದನ ಹಾಗೂ ಸೇವಾವಲಯಗಳು .ಪ್ರಕೃತಿ ಸಂಪತ್ತು ಮತ್ತು ಮೂಲಭೂತ ಸೌಕರ್ಯಗಳು ಅದಾನಿ.ಅಂಬಾನಿ ಸೇರಿದಂತೆ ಬಹು ರಾಷ್ಟ್ರೀಯ ಕಂಪನಿಗಳಿಗೆ ಬಿಕಾರಿ ಅಗುತ್ತಿದೆ.ಆಪಾರ ಪ್ರಮಾಣದ ಉದ್ಯೋಗಗಳ ನಾಶ ಹಾಗೂ ನೀರುದ್ಯೋಗಿಗಳ ಅಗ್ಗದ ಶ್ರಮ ಮಾರಾಟದ ಸ್ಪರ್ದೆ ಮಿತಿಮೀರಿ ಹೋಗುತ್ತಿದೆ.
ರೈತಾಪಿ ವರ್ಗದ ಎಂ.ಎಸ್.ಪಿ.ಕಾನೂನು ಖಾತ್ರಿ ಹೋರಾಟವನ್ನು ಬಲ ಪ್ರಯೊಗದ ಮೂಲಕ ಹತ್ತಿಕ್ಕಲಾಗುತ್ತಿದೆ.ಪ್ರದಾನಿ ನೇತ್ರತ್ವದ ರಾಮಮಂದಿರ ಉದ್ಘಾಟನೆಯು ಹಿಂದು ರಾಷ್ಟ್ರದ ಉದ್ಘಾಟನೆ ಅಗಿದೆ.
ಇಡಿಯಾಗಿ ದೇಶದಲ್ಲಿ ಮತ್ತೊಮ್ಮೆ ಫ್ಯಾಸಿಸ್ಟ್ .ಅರ್.ಎಸ್.ಎಸ್.ಅಧಿಕಾರ ಹಿಡಿಯುವ ಲಕ್ಷಣಗಳು ಬರಿಗಣ್ಣಿಗೆ ಕಾಣುತ್ತಿದೆ.
ಪರಿಸ್ಥಿತಿಯ ಈ ತಿವ್ರತೆಯ ಆದಾರದ ಮೇಲೆ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷಯು ನಾಗಪುರ ಸಮಾವೇಶದ ಮೂಲಕ ಅರ್.ಎಸ್.ಎಸ್.ನ್ನು ಅಧಿಕಾರ ದಿಂದ ಕಿತ್ತೊಗೆಯುವುದೆ ತಕ್ಷಣದ ಪ್ರಮುಖ ರಾಜಕೀಯ ಕರ್ತ್ಯವ್ಯವೆಂದು ದೇಶಕ್ಕೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ.
ಕರ್ನಾಟಕದ ಯವುದೆ ಕ್ಷೇತ್ರದಲ್ಲಿ ನಾವು ಸ್ಪರ್ದಿಸುವುದಿಲ್ಲ.ಜೊತೆಗೆ ನಾವು ಇಂಡಿಯಾ ಮೈತ್ರಿಯ ಬಾಗವು ಅಲ್ಲ.ಬಿಜೆಪಿ ವೀರೊದಿ ಓಟುಗಳ ವಿಭಜನೆಗೆ ನಮ್ಮ ಸಮ್ಮತಿ ಇಲ್ಲ.ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬಲ್ಲ ಯಾವುದೇ ಪಕ್ಷದ ಅಭ್ಯರ್ಥಿಗೆ ನಮ್ಮ ಮತ.ನಮ್ಮ ರಾಜಕೀಯ ಸಂಕಲ್ಪ ಎಂದರು.
ಈ ಚುನಾವಣೆಯಲ್ಲಿ ಎರಡು ಪಕ್ಷಗಳ ಬದಲು ಎರಡು ರಾಷ್ಟ್ರಗಳು ಎರಡು ಸಿದ್ದಾಂತಗಳು ಸ್ಪರ್ದೆಯಲ್ಲಿವೆ ಎಂದರು.
ಈ ಸಮಯದಲ್ಲಿ ಶಿವಪ್ಪ.ತಾಲೂಕು ಸದಸ್ಯರು.
ಶಂಕರ್.ಜಿಲ್ಲಾ ಕಮಿಟಿ ಸದಸ್ಯರು ಇದ್ದರು.

