“ಎಲೆಕ್ಷನ್ ಬಂತು ಎಲೆಕ್ಷನ್ : ದುಡ್ಡಿಗೆ ಮತ ಮಾರಬೇಡಿ ಎಂದ ಮಹೇಂದ್ರ ಕುಮಾರ್ ಫಲ್ಗುಣಿ.”
1 min read
ಎಂಜಲು ಕಾಸಿಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಬೇಡಿ ಎಂದು ಯುವ ಜಾಗೃತಿ ಮತದಾರರ ವೇದಿಕೆಯ ರಾಜ್ಯ ಅಧ್ಯಕ್ಷ ಫಲ್ಗುಣಿ ಮಹೇಂದ್ರ ಕುಮಾರ್ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ವಾಹಿನಿಯೊಂದಿಗೆ ಮಾತನಾಡಿರುವ ಅವರು,ಇಂತಹ ನೀಚ ಪ್ರವೃತ್ತಿಯನ್ನು ಕೆಲ ಮತದಾರರು ಕೈ ಬಿಡಬೇಕು.ಒಂದು ಮತಕ್ಕೆ ಬಾರಿ ಬೆಲೆಯಿದೆ.ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.ರಾಜ್ಯದ ಸಾಮರಸ್ಯ ಕದಡ ಬೇಡಿ,ದೇಶದ ಹಿತದೃಷ್ಟಿಯಿಂದಾ ಸಮರ್ಥ ಪ್ರಧಾನಿ ಆಯ್ಕೆ ಮಾಡಿ,ಸದೃಢ ಸಮರ್ಥವಾಗಿ ಜಿಲ್ಲೆಯಿಂದ ಆಯ್ಕೆ ಮಾಡಿ ದೇಶವನ್ನು ಅಭಿವೃದ್ಧಿಪಡಿಸಲು ಒಳ್ಳೆಯ ವ್ಯಕ್ತಿಗಳಿಗೆ ಮತದಾರರು ಮತನೀಡಬೇಕು.ಸ್ವ ಹಿತಾಸಕ್ತಿಗಾಗಿ ಬದುಕಲು ಇಷ್ಟ ಪಡುವ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕು ಎಂದು ಹೇಳಿದರು.
ದೇಶವನ್ನು ಧೈರ್ಯವಾಗಿ ಮುನ್ನೆಡಿಸುವ ವ್ಯಕ್ತಿಗೆ ಮತನೀಡಿ ಎಂದು ಸಲಹೆ ನೀಡಿದ್ದಾರೆ.ಶೇ 95ರಷ್ಟು ಮತದಾನ ಆಗಬೇಕು.ಕಡಿಮೆ ಮತದಾನ ನಡೆಯುವ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹೆಚ್ಚು ಜಾಗೃತಿ ಮೂಡಿಸಬೇಕು.ಪ್ರತಿಯೊಬ್ಬ ಪ್ರಜೆಯೂ ತಪ್ಪದೇ ಮತದಾನ ಮಾಡಿ ಎಂದಿದ್ದಾರೆ ಫಲ್ಗುಣಿ ಮಹೇಂದ್ರ ಕುಮಾರ್.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

