लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು ಮೂಡಿಗೆರೆ ಜೆಸಿ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಮೂಡಿಗೆರೆ ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರ ಸಂಘ ಹಾಗೂ ಧರ್ಮಸ್ಥಳ ಶೌರ್ಯ ವಿಪತ್ತು ತಂಡ ಇವರ ಸಹಯೋಗದೊಂದಿಗೆ ನಡೆಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ ಸಿ ಅಧ್ಯಕ್ಷರಾದ ಸುಪ್ರೀತ್ ಕಾರ್ಬೈಲ್ ರವರು ವಹಿಸಿದ್ದರು, ಮುಖ್ಯ ಅತಿಥಿಯಾಗಿ ಜೆ ಸಿ ಪೂರ್ವ ಅಧ್ಯಕ್ಷರಾದ ಹಳೆಕೋಟೆ ರಮೇಶ್ ಹಾಗೂ ಪೊಲೀಸ್ ಇಲಾಖೆಯ ASI ವೆಂಕಟೇಶ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ MGM ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾದ ಡಾಕ್ಟರ್ ಪ್ರಿಯಾಂಕ ರವರು ಹಾಗೂ ಪತ್ರಕರ್ತರಾದ ಅಮರನಾಥ್, ರಕ್ತನಿಧಿ ಜಿಲ್ಲಾಸ್ಪತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಮುರಳಿದಾರ್ ಹಾಗೂ ಸಮಾಜ ಸೇವಕರಾದ ಫಿಶ್ ಮೋನು, ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಮುಖ್ಯಸ್ಥರಾದ ಪ್ರವೀಣ್ ಪೂಜಾರಿ ಹಾಗೂ ಜೆ ಸಿ ಸಂಸ್ಥೆಯ ಕಾರ್ಯದರ್ಶಿ ದೀಕ್ಷಿತ್ ಕಣಚೂರು , ಲೇಡಿಜೆಸಿ ಕಾರ್ಯದರ್ಶಿ ಶೃತಿ ದೀಕ್ಷಿತ್ ಹಾಗೂ ಎಲ್ಲಾ ಜೇಸಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ರಕ್ತದಾನ ಶಿಬಿರದಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

About Author

Leave a Reply

Your email address will not be published. Required fields are marked *

You may have missed