AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ,ಮೂಡಿಗೆರೆ ತಾಲ್ಲೂಕಿನ,ಹ್ಯಾಂಡ್ ಪೊಸ್ಟ್ ಬಳಿಯ,ಬೈದುವಳ್ಳಿ ಕ್ರಾಸಿನಲ್ಲಿ ದಿನ ನಿತ್ಯ ನೂರಾರು ದನಗಳು ಬೆಳಿಗ್ಗೆ 6:00 ರಿಂದ 10:00ರವರೆಗೆ ರಸ್ತೆಯಲ್ಲೆ ಮಲಗಿರುತ್ತವೆ.ಇದರಿಂದ ಸಾರ್ವಜನಿಕರಿಗೆ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದೆ.

ಮೂಡಿಗೆರೆ ಹ್ಯಾಂಡ್ ಪೊಸ್ಟ್ ನಿಂದ ಕೊಟ್ಟಿಗೆಹಾರದವರೆಗೆ ಸುಮಾರು 35 ದನಗಳು ಅಪಘಾತಕ್ಕೀಡಾಗಿವೆ.

ಆದರೆ ಬೈದುವಳ್ಳಿ ಕ್ರಾಸಿನಲ್ಲಿ ಇದುವರೆಗೂ ಯಾವುದೆ ದನಗಳು ಅಪಘಾತಕ್ಕೀಡಾಗಿಲ್ಲ.ಅದರೆ ಅನೇಕ ಬೈಕ್ ಸವಾರರು ದನಗಳನ್ನು ತಪ್ಪಿಸಲು ಹೋಗಿ ಬಿದ್ದಿರುವ ಘಟನೆಗಳು ಅಗಿವೆ.

ಹಳೇಮೂಡಿಗೆರೆ ಗ್ರಾಮ ಪಂಚಾಯಿತಿಗೆ ಸೇರಿರುವ ಈ ಜಾಗದಲ್ಲಿ ಮುಂದೆ ಅಪಘಾತಗಳು ನಡೆಯದಂತೆ ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚರ ವಹಿಸಬೇಕೆಂದು ಸಾರ್ವಜನಿಕರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ಜಾನುವಾರು ಕ್ಷೇಮಾಭಿವೃದ್ಧಿ ಸಮಿತಿಯನ್ನು ರಚಿಸಲಾಗಿತ್ತು ಆದರೆ ಇನ್ನೂ ಕೂಡ ಬಿಡಾಡಿ ದನಗಳ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಜೊತೆಗೆ ಬಿಡಾಡಿ ದನಗಳಿಂದಾಗಿ ಅಪಘಾತಗಳು ಕೂಡ ಹೆಚ್ಚಾಗುತ್ತಿದೆ.ದನಗಳ ಮಾಲೀಕರು ಅವುಗಳನ್ನು ಕಟ್ಟಿ ಹಾಕದೇ ಬೇಕಾ ಬಿಟ್ಟಿ ರಸ್ತೆಗಳಲ್ಲಿ ಬಿಟ್ಟಿದ್ದಾರೆ.

ಮೂಡಿಗೆರೆ ತಾಲ್ಲೂಕಿನ,ಹ್ಯಾಂಡ್ ಪೋಸ್ಟ್ ಬಳಿಯ, ಬೈದುವಳ್ಳಿ ಕ್ರಾಸಿನ ಹೆಸರಿಲ್ಲ ಹೋಟೆಲ್ ಮುಂಭಾಗ ಕಂಡು ಬಂದ ದೃಶ್ಯಾವಳಿಗಳು.

ಈ ವಿಚಾರವಾಗಿ ಅವರಿಗೆ ಎಚ್ಚರಿಕೆಯನ್ನು ಕೂಡ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೀಡಬೇಕು ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ಕೆಲಸ ಆಗದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *