“ಗಾಂಧೀ ಗ್ರಾಮ ಪುರಸ್ಕಾರ : ಮೂಡಿಗೆರೆ ತಾಲ್ಲೂಕಿಗೆ ಕೀರ್ತಿ ತಂದ ಜಾವಳಿ ಗ್ರಾಮ ಪಂಚಾಯಿತಿ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಾಳೂರು ಹೋಬಳಿಯ,ಜಾವಳಿ ಗ್ರಾಮ ಪಂಚಾಯಿತಿಗೆ ಉತ್ತಮ ಸೌಲಭ್ಯ, ಕಚೇರಿ ಕಡತಗಳ ನಿರ್ವಹಣೆ,ಅನುದಾನ ಸಮರ್ಪಕ ಬಳಕೆ ಮತ್ತಿತರ ಸೌಲಭ್ಯಗಳನ್ನು ಅನುಸರಿಸಿ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಗಿದೆ.


ಜಾವಳಿ ಗ್ರಾಮ ಪಂಚಾಯಿತಿಗೆ ಗಾಂಧೀ ಗ್ರಾಮ ಪ್ರಶಸ್ತಿಯನ್ನು ಗಾಂಧೀ ಜಯಂತಿಯಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರದಾನ ಮಾಡಿದ್ದಾರೆ.

ಪ್ರಶಸ್ತಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಪ್ರದೀಪ್, ಉಪಾಧ್ಯಕ್ಷ ಮನೋಹರ್, ಹಾಗೂ ಪಿಡಿಓ ಯತೀಶ್ ಕುಮಾರ್ ಸ್ವೀಕರಿಸಿದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

