ಸಂಕ್ರಾಂತಿ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ
1 min read![Featured Video Play Icon](https://avintv.com/wp-content/plugins/featured-video-plus/img/playicon.png)
ಸಂಕ್ರಾಂತಿ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ
ಹಬ್ಬಗಳು ಸೌಹಾರ್ದತೆಗೆ ವೇದಿಕೆಯಾಗಲಿ
ಸಂಕ್ರಾಂತಿ ಕವಿಗೋಷ್ಠಿ ಹಾಗೂ ಈಗಲ್ ಪತ್ರಿಕೆಯ 20 ನೇ ವಾರ್ಷಿಕೋತ್ಸವ
ಮೂಡಿಗೆರೆ:ಹಬ್ಬಗಳು ಸೌರ್ಹಾದತೆಯ ವೇದಿಕೆಯಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಬಹುಭಾಷಾ ಸಾಹಿತಿ ಹಾಗೂ ಸಂಪಾದಕರಾದ ಸುಂದರ ಬಂಗೇರಾ ಅವರ ನಿವಾಸದಲ್ಲಿ ನಡೆದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಈಗಲ್ ಪತ್ರಿಕೆಯ 20 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಹಿತ್ಯದ ಸಾಮೀಪ್ಯದಿಂದ ಬದುಕಿನ ಕುರಿತ ಒಳನೋಟಗಳು ಸಿಗುತ್ತವೆ. ಕವಿಗೋಷ್ಠಿಗಳಂಥ ಕಾರ್ಯಕ್ರಮಗಳು ಎಲೆಮರೆಯ ಪ್ರತಿಭೆಗಳಿಗೆ ವೇದಿಕೆಯಾಗಲಿ ಎಂದರು.
ಬಹುಭಾಷಾ ಸಾಹಿತಿ ಹಾಗೂ ಸಂಪಾದಕರಾದ ಸುಂದರ ಬಂಗೇರಾ ಮಾತನಾಡಿ ಮುಂದಿನ ದಿನಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಉದ್ದೇಶಿಸಿದ್ದು ಇದಕ್ಕೆ ಸಾಹಿತ್ಯಾಭಿಮಾನಿಗಳ ಸಹಕಾರ ಇರಲಿ ಎಂದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಎಂ ಎಸ್ ನಾಗರಾಜು, ಪತ್ರಕರ್ತ ಹಾಗೂ ಲೇಖಕ ನಂದೀಶ್ ಬಂಕೇನಹಳ್ಳಿ, ಸಾಹಿತಿಗಳಾದ ಪ್ರದೀಪ್ ಸಾಲಿಯಾರ್, ವಿಶ್ವ ಹಾರ್ಲಗದ್ದೆ, ಪರಿಸರ ಚಿಂತಕ, ಸಾಹಿತಿಗಳಾದ ಧನಂಜಯ ಜೀವಾಳ, ಸಾಹಿತಿ ಅಲ್ತಾಫ್ ಬಿಳಗುಳ,
ಸ್ಥಳೀಯರಾದ ಷಣ್ಮುಖ ಮೂಡಿಗೆರೆ, ಲಕ್ಷ್ಮಣ್ ಶೆಟ್ಟಿ ಮೂಡಿಗೆರೆ,
ಸಮಾಜ ಸೇವಕರಾದ
ಅಸೈನಾರ್ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |