**ತರುವೆ, ಬಣಕಲ್ ಗ್ರಾ.ಪಂ ಚುನಾವಣೆ ಮತದಾನ
1 min read
**ತರುವೆ, ಬಣಕಲ್ ಗ್ರಾ.ಪಂ ಚುನಾವಣೆ ಮತದಾನ
27.12.2021**
ಮೂಡಿಗೆರೆ.
ಬಣಕಲ್:ಬಣಕಲ್ ಹಾಗೂ ತರುವೆ ಗ್ರಾ.ಪಂ ಚುನಾವಣೆಯ ಮತದಾನ ನಡೆಯಲಿದೆ.
ಬಣಕಲ್ ಗ್ರಾ.ಪಂ ವ್ಯಾಪ್ತಿಯ 7.ಮತ್ತು ತರುವೆ ಗ್ರಾ.ಪಂ ವ್ಯಾಪ್ತಿಯ 2.ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ತರುವೆ ಗ್ರಾ.ಪಂ ವ್ಯಾಪ್ತಿಯಲ್ಲಿ ಪುರುಷ ೭೬೮, ಮಹಿಳೆ ೮೪೯ ಸೇರಿದಂತೆ ೧೬೧೭ ಮತದಾರದಿದ್ದು ೧೩ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಣಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ೧೫ ಸ್ಥಾನಗಳಿದ್ದು ಹೆಗ್ಗುಡ್ಲು ಅವಿರೋಧ ಆಯ್ಕೆಯಾದ ಹಿನ್ನಲೆಯಲ್ಲಿ ೧೪ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ೭ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಬಣಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ೨೪೧೮ ಪುರುಷ,ಮಹಿಳೆ ೨೫೨೪ ಸೇರಿದಂತೆ ಒಟ್ಟು ೪೯೪೨ ಮತದಾರರಿದ್ದಾರೆ. ಅವಿರೋಧ ಆಯ್ಕೆಯಾದ ಅಭ್ಯರ್ಥಿ ಹೊರತು ಪಡಿಸಿ ೪೪ ಮಂದಿ ಕಣದಲ್ಲಿದ್ದು ಇಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಮತದಾನ ನಡೆಯಲಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.