day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮೂಡಿಗೆರೆಯ ಲಯನ್ಸ್ ಸಂಸ್ಥೆಗೆ 44ನೇ ವಾರ್ಷಿಕೋತ್ಸವದ ಸಂಭ್ರಮ – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಮೂಡಿಗೆರೆಯ ಲಯನ್ಸ್ ಸಂಸ್ಥೆಗೆ 44ನೇ ವಾರ್ಷಿಕೋತ್ಸವದ ಸಂಭ್ರಮ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮೂಡಿಗೆರೆಯ ಲಯನ್ಸ್ ಸಂಸ್ಥೆಗೆ 44ನೇ ವಾರ್ಷಿಕೋತ್ಸವದ ಸಂಭ್ರಮ

ಪೂರ್ವ ತಯಾರಿಯೇ ಯಶಸ್ಸಿನ ಮೂಲ ಗುಟ್ಟು :ಲಯನ್ ವಸಂತ್ ಕುಮಾರ್ ಶೆಟ್ಟಿ

ಪೂರ್ವ ತಯಾರಿಯೇ ಯಶಸ್ಸಿನ ಮೂಲ ಗುಟ್ಟು ಎಂದು ಲಯನ್ಸ್ ನ ಜಿಲ್ಲೆಯ ರಾಜ್ಯಪಾಲರಾದ ಲಯನ್ ವಸಂತ್ ಕುಮಾರ್ ಶೆಟ್ಟಿ ಹೇಳಿದರು.

ಮೂಡಿಗೆರೆ ಪಟ್ಟಣದ ಮೂಡಿಗೆರೆ ಕ್ಲಬ್ ನಲ್ಲಿ ದಿನಾಂಕ 14/12/2021ರಂದು ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಮೂಡಿಗೆರೆಯ ಲಯನ್ಸ್ ಸಂಸ್ಥೆಯ 44ನೇ ವಾರ್ಷಿಕೋತ್ಸವ ಮತ್ತು ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಸಮಾರಂಭದಲ್ಲಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೇವೆ ಮತ್ತು ಸಾಂಗತ್ಯದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ಲಯನ್ಸ್ ಸಂಸ್ಥೆಯು 180ಕ್ಲಬ್ ಗಳನ್ನು ಹೊಂದಿದ್ದು ಅದರ ಎಲ್ಲಾ ಅಧ್ಯಕ್ಷರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಫಲವಾಗಿ ಜಿಲ್ಲೆಯಲ್ಲಿ ನಾವು ಹೆಮ್ಮೆಯಯಿಂದ ಸಂಚರಿಸುತ್ತಿದ್ದೇವೆ ಎಂದರು.

ಕ್ಲಬ್ ಕ್ರಿಯಾಶೀಲವಾಗಿರಬೇಕೆಂದರೆ ಸದಸ್ಯರು ಮತ್ತು ಪದಾಧಿಕಾರಿಗಳು ಕೈಜೋಡಿಸಿ ಅಧ್ಯಕ್ಷರಿಗೆ ಬೆನ್ನೆಲುಬಾಗಿದ್ದಲ್ಲಿ ಮಾತ್ರವೇ ಸಂಸ್ಥೆಯು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಲಯನ್ಸ್ ಕ್ಲಬ್ ಮೂಡಿಗೆರೆ ಇನ್ನೇನು ಕೆಲವೇ ವರ್ಷಗಳಲ್ಲಿ 50ವರ್ಷಗಳತ್ತ ಯಶಸ್ಸಿನ ದಾಪುಗಾಲಿಡುತ್ತಿದೆ ಈ ಸಂದರ್ಭದಲ್ಲಿ 50ನೇ ವರ್ಷದ ಸಂಭ್ರಮದ ಆಚರಣೆಯಲ್ಲಿ ಬಲಿಷ್ಠ ನಾಯಕರನ್ನು ಸಿದ್ದಪಡಿಸುವಲ್ಲಿ ಇಂದಿನಿಂದಲೇ ಪೂರ್ವ ತಯಾರಿಯನ್ನು ಮಾಡುವುದು ಅಗತ್ಯವೆಂದು ಹೇಳಿ, ನೂತನವಾಗಿ ಸಂಸ್ಥೆಗೆ ಸೇರ್ಪಡೆಯಾದ ಸದಸ್ಯರಿಗೆ ಸಂಸ್ಥೆಯ ಧ್ಯೇಯವನ್ನು ತಿಳಿಸುವ ಪ್ರಮಾಣವನ್ನು ಬೋಧಿಸುವ ಮೂಲಕ ಈ ವರ್ಷದ ಲಯನ್ಸ್ ಸಂಸ್ಥೆಯ ಧ್ಯೇಯವಾಕ್ಯ INSPIRE -SHARE HAPPYNES ಎಂಬುದುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಮೂಡಿಗೆರೆ ಇದರಲ್ಲಿ ಸದಸ್ಯರಾಗಿ ಶಿಕ್ಷಣ, ವೈದ್ಯಕೀಯ, ಕೃಷಿ, ಸೇನೆ, ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರದಲ್ಲಿ ಸಾಧನೆಮಾಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಇಲ್ಲಿಯವರೆಗೆ 25000/-ರೂಗಳ ಕನ್ನಡಕವನ್ನು ಉಚಿತವಾಗಿ ಇ ವರ್ಷ ನೀಡಲಾಗಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ರಂಗನಾಥಗೌಡ ಅಧ್ಯಕ್ಷರು, ಲಯನ್ಸ್ ಸಂಸ್ಥೆ ಮೂಡಿಗೆರೆ ಇವರು ವಹಿಸಿದ್ದರು,
ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ಎನ್.ಎಲ್. ಸುಂದರೇಶ್ವರ, ವಲಯ ಅಧ್ಯಕ್ಷರಾದ ಲಯನ್ ಗೋಪಾಲಗೌಡ, ಕಾರ್ಯದರ್ಶಿ ಲಯನ್ ಎಂ.ಈ.ಜಯಕುಮಾರ್, ಖಜಾಂಚಿ ಲಯನ್ ಸಿಪ್ರಿಯನ್ ಲೋಬೋ, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಆಹ್ವಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಕೃಪೆ :
ಹೆಸಗಲ್ ವೆಂಕಟೇಶ್.

ವರದಿ:
ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.

Career | job

Navachaitanya Old Age Home

About Author