लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರವೀಣ್ ಬಾಳೆಕೆರೆಯವರ ಮಿರಾಕಲ್ ಡ್ಯಾನ್ಸ್ ಟೀಮ್ ಮತ್ತೊಂದು ಸ್ಟುಡಿಯೋ ಶಾಖೆ ಶುಭಾರಂಭ

1 min read
Featured Video Play Icon

ಪ್ರವೀಣ್ ಬಾಳೆಕೆರೆಯವರ ಮಿರಾಕಲ್ ಡ್ಯಾನ್ಸ್ ಟೀಮ್ ಮತ್ತೊಂದು ಸ್ಟುಡಿಯೋ ಶಾಖೆ ಶುಭಾರಂಭ ಮಿರಾಕಲ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕರಾದ ಪ್ರವೀಣ್ 2014 ಅಕ್ಟೋಬರ್ 08 ಸ್ಥಾಪನೆಯಾದ ಈ ಡ್ಯಾನ್ಸ್ ಟೀಮ್ ಸತತ ಏಳು ವರ್ಷಗಳಿಂದ ನೃತ್ಯ ತರಬೇತಿಯನ್ನು ನೀಡಿ ಹಲವಾರು ಮಕ್ಕಳನ್ನು ನೃತ್ಯಗಾರನಾಗಿ ಮಾಡಿದ್ದಾರೆ 2014ರಂದು ಸ್ಥಾಪನೆಯಾದ ವರ್ಷವೇ ಶಿರೂರಿನಲ್ಲಿ ನಡೆದ ಡಾನ್ಸ್ ಕಾಂಪಿಟೇಶನ್ ನಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ ಅದರ ಜೊತೆಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಖ್ಯಾತಿ ತಂಡಕ್ಕಿದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಡ್ಯಾನ್ಸ್ ಡ್ಯಾನ್ಸ್ ಭಾಗವಹಿಸಿದ್ದು ಅಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ 2017 ಅಕ್ಟೋಬರ್ ನಲ್ಲಿ ಇದೇ ಪ್ರವೀಣ್ ಮಿರಾಕಲ್ ಅವರಿಗೆ ಆಕ್ಸಿಡೆಂಟ್ ಆಗಿತ್ತು ಕಾರ್ಯಕ್ರಮಗಳನ್ನು ನಡೆಸುವುದು ಅನಿವಾರ್ಯವಾಗಿತ್ತು ಅದೇ ಸಂದರ್ಭದಲ್ಲಿ ಹೆಮ್ಮಾಡಿಯ ನೃತ್ಯ ತರಬೇತಿ ಕೇಂದ್ರವು ತೆರವುಗೊಂಡಿತ್ತು ಆ ಸಂದರ್ಭದಲ್ಲಿ ನೃತ್ಯಪಟುಗಳು ಬೀಚ್ನಲ್ಲಿ ಹೋಟೆಲ್ಗಳಲ್ಲಿ ದೇವಸ್ಥಾನಗಳಲ್ಲಿ ನೃತ್ಯ ತರಬೇತಿಯನ್ನು ಪಡೆದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿ ಕೊಟ್ಟ ಹಿರಿಮೆ ಈ ತಂಡಕ್ಕಿದೆ ನೃತ್ಯ ಕಲೀಬೇಕು ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ಒಂದು ಮಾತು ಮಿರಾಕಲ್ ಡ್ಯಾನ್ಸ್ ಕಟ್ ಬೆಲ್ತೂರುನಲ್ಲಿ ರಾಮ ಲಕ್ಷ್ಮಣ ಸಭಾಗ್ರಹಹೆಮ್ಮಾಡಿ ಕೊಲ್ಲೂರು ರೋಡ್ ಇಲ್ಲ ಹೊಸದಾಗಿ ನೃತ್ಯ ತರಬೇತಿ ಕೇಂದ್ರವನ್ನು, ಆರಂಬಿಸಿದ್ದು ಮಿರಾಕಲ್ ಡಾನ್ ಸ್ಟುಡಿಯೋದಲ್ಲಿ ಕಲಿತ ಶ್ಲಾಘ ಸಾಲಿಗ್ರಾಮ, ಧನ್ವಿ ಪೂಜಾರಿ ಮರವಂತೆ ಇನ್ನೂ ಕೆಲವು ಪ್ರತಿಭೆಗಳು ಉನ್ನತಮಟ್ಟದ ಸಾಧನೆ ಮಾಡಿದ ಕಲಾವಿದರಾಗಿ ರೂಪುಗೊಂಡಿದ್ದಾರೆ ಶಾಲೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಶಾಲೆಯ ಕಲಿಕೆಯೊಂದಿಗೆ ನಮ್ಮ ಆಸಕ್ತ ನೃತ್ಯ ಕಲಿಯಲು ಅನುವಾಗಲಿ ಎಂದು ಶನಿವಾರ ಮತ್ತು ಭಾನುವಾರ ಹೊಸ ವಿದ್ಯಾರ್ಥಿಗಳಿಗೆ ನುರಿತ ನೃತ್ಯಗಾರ ರಿಂದ ಡಾನ್ಸ್ ಕಲಿಸಿ ಕೊಡಲಾಲೂ ಪ್ರಾರಂಭಿಸಲಾಗಿದೆ. ಡಾನ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಗುರುಗಳಾದ ಪ್ರವೀಣ್ ಬಾಳಿಕೆರೆ ಇವರು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಡಾನ್ಸ್ ಸ್ಟುಡಿಯೋ ಒಮ್ಮೆ ಭೇಟಿಕೊಟ್ಟು ಇಲ್ಲಿನ ಶಿಸ್ತು ಮತ್ತು ನಿಯಮಗಳನ್ನು ವೀಕ್ಷಿಸಿ ತಮ್ಮ ಮಕ್ಕಳನ್ನು ನೃತ್ಯ ಅಭ್ಯಾಸಕ್ಕೆ ಸೇರ್ಪಡಿಸಿ ಎಂದು ವಿನಂತಿ ಮಾಡಿಕೊಂಡರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Assisted living facilities in Bangalore India

About Author