AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಶತಮಾನದಷ್ಟು ಹಳೆಯ ಬೃಹತ್ ಮನೆಯೊಂದರಲ್ಲಿ ವಿಭಿನ್ನ ಶೈಲಿಯ ಹೋಟೆಲ್*

1 min read
Featured Video Play Icon

*ಶತಮಾನದಷ್ಟು ಹಳೆಯ ಬೃಹತ್ ಮನೆಯೊಂದರಲ್ಲಿ ವಿಭಿನ್ನ ಶೈಲಿಯ ಹೋಟೆಲ್*

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ.

ಸುಮಾರು ನೂರು ವರ್ಷದಷ್ಟು ಹಳೆಯದಾದ ಮನೆ, ಒಳಗೆ ಹೋದಂತೆ ಅನೇಕ ಕೋಣೆಗಳು, ಗಟ್ಟಿಮುಟ್ಟಾದ ಬಾಗಿಲು, ಕಿಟಕಿಗಳು, ಮರದ ಹಲಗೆಯಿಂದ ಮಾಡಿದ ಮಾಳಿಗೆ, ಕೋಣೆಗಳಲ್ಲಿ ಮಿನುಗುವ ಬಣ್ಣಬಣ್ಣದ ಬೆಳಕಿನ ಬಲ್ಪ್ ಗಳು ಗೋಡೆಗಳಲ್ಲಿ ಚಿತ್ತಾರ.

ಇಂತಹ ವಿಭಿನ್ನ ಶೈಲಿಯ ಹೋಟೆಲಿನಲ್ಲಿ ಕುಳಿತು ಭೋಜನ ಮಾಡುವ ಗ್ರಾಹಕರಿಗೆ ವಿಶೇಷ ಅನುಭವ ಉಂಟಾಗುತ್ತದೆ.
ಹಳೇ ಕಾಲದ ಮನೆಯಾಗಿರುವುದರಿಂದ ಫ್ಯಾನ್ ಅಥವಾ ಎಸಿ ಇಲ್ಲದಿದ್ದರೂ ಒಳಗೆ ತಣ್ಣನೆಯ ವಾತಾವರಣ. ಯಾರೇ ಆದರೂ ಇಲ್ಲಿಗೆ ಭೇಟಿ ನೀಡಿದರೆ ಅಬ್ಭಾ.
ಇಂತಹ ಮಾದರಿಯಲ್ಲೂ ಹೋಟೆಲ್ ಮಾಡಿದ್ದಾರಲ್ಲವೇ ಎಂದು ಹುಬ್ಬೇರಿಸದೇ ಇರಲಾರರು.

ಹೌದು. ಕಾಫಿ ನಾಡಿಗೆ ಹೇಳಿ ಮಾಡಿಸಿದಂತಹ ವಿಶೇಷ ಶೈಲಿಯಲ್ಲಿ ಮೂಡಿಗೆರೆಯ ಖಲೀಲ್ ಎಂಬವರು *ಖಲೀಲ್ಸ್ ಕಿಚನ್ *ಹೆಸರಿನಲ್ಲಿ ಈ ಹೋಟೆಲ್ ಆರಂಭಿಸಿದ್ದಾರೆ. ಮೊದಲ ದಿನವೇ ಸಾಕಷ್ಟು ಗ್ರಾಹಕರು ಭೇಟಿ ನೀಡಿದ್ದರು. ಹಲವು ಬಗೆಯ ಸಮುದ್ರ ಮೀನುಗಳ ಸ್ಪೆಷಲ್ ಐಟಂಗಳ ತಯಾರಿಕೆಯಲ್ಲಿ, ಹೆಚ್ಚಿನ ಗ್ರಾಹಕರನ್ನು ಈ ಹೊಟೆಲ್ ಸೆಳೆಯತೊಡಗಿದೆ. ಮೂಡಿಗೆರೆಯ ಆಜಾದ್ ರಸ್ತೆಯಲ್ಲಿ ಆರಂಭಿಸಿರುವ ಖಲೀಲ್ಸ್ ಕಿಚನ್ ಹೋಟೆಲನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಧರ್ಮಪಾಲ್ ಉದ್ಘಾಟಿಸಿದರು.
ಈ ವೇಳೆ ತಾಪಂ ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಪಪಂ ಉಪಾಧ್ಯಕ್ಷ ಸುಧೀರ್, ವೆಂಕಟೇಶ್ ಮತ್ತಿತರರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Assisted living facilities in Bangalore India

About Author