*ಮಹಾತ್ಮ ಗಾಂಧಿಯವರ 152ನೇ ಜನ್ಮದಿನಾಚರಣೆ*
1 min read
*ಮಹಾತ್ಮ ಗಾಂಧಿಯವರ 152ನೇ ಜನ್ಮದಿನಾಚರಣೆ*
ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹ್ಯಾಂಡ್ಪೋಸ್ಟ್ ಮತ್ತು ಸರ್ವೋದಯ ನಗರದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮೊಹಮ್ಮದ್ ಜುಬೇರ್ ಮತ್ತು ಪಂಚಾಯಿತಿ ಆಡಳಿತ ಮಂಡಳಿ ಹಾಗು ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು, ಹಳೇಮೂಡಿಗೆರೆ ಮತ್ತು ಸರ್ವೋದಯ ನಗರದ ಯುವಕ ಸಂಘ ಮತ್ತು ಗ್ರಾಮಸ್ಥರು ಹಾಗು ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಹಳೆಮೂಡಿಗೆರೆ ಗ್ರಾಮ ಪಂಚಾಯಿತಿಯ ಗ್ರಾಮಸ್ಥರಿಗೆ ಒಣ ಕಸವನ್ನು ಶೇಕರಿಸಲು ಗ್ರಾಮಪಂಚಾಯಿತಿ ಯಿಂದ ಕಸದ ಬುಟ್ಟಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಪ್ರಕಾಶರ ವರು, ಅಧ್ಯಕ್ಷರಾದ ಮೊಹಮ್ಮದ್ ಜುಬೇರ್, ಉಪಾಧ್ಯಕ್ಷರಾದ ಶಫಿಯ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಪಿಡಿಓ ಪ್ರಶಾಂತ್ಕುಮಾರ್ ಮತ್ತು ಗ್ರಾಮಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.