ಚಾರ್ಮಡಿಯಲ್ಲಿ ಟ್ಯಾಂಕರ್ ಪಲ್ಟಿ ,ಪೆಟ್ರೋಲ್ ಸೋರಿಕೆ
1 min read
ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಸೋರಿಕೆ.
ವಿಜಯವಾಣಿ ಸುದ್ದಿಜಾಲ ಬಣಕಲ್:ಚಾರ್ಮಾಡಿ ಘಾಟ್ ನ ಆಲೇಕಾನ್ ಸಮೀಪ ಪೆಟ್ರೋಲ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಪೆಟ್ರೋಲ್ ಸೋರಿಕೆಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಮಂಗಳೂರಿನಿಂದ ಮಾಗುಂಡಿಗೆ ಸಾಗುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಅಲೇಕಾನ್ ಸಮೀಪ ಪಲ್ಟಿಯಾಗಿದೆ. ಟ್ಯಾಂಕರ್ ನಲ್ಲಿ 8000 ಲೀಟರ್, 4000 ಲೀ ಡಿಸೇಲ್ ಸಂಗ್ರಹವಿದ್ದು ಪೆಟ್ರೋಲ್ ಸೋರಿಕೆಯಾಗುತ್ತಿರುವುದರಿಂದ
ಸ್ಥಳಕ್ಕೆ ಬಣಕಲ್ ಪೋಲಿಸರು ಆಗಮಿಸಿದ್ದು ಆಗಮಿಸಿದ್ದು ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು.
ಪುತ್ತೂರಿನಿಂದ ಬಂದ ಕ್ರೈನ್ ಸಹಾಯದಿಂದ ರಾತ್ರಿ 11.30.ರ ಹೊತ್ತಿಗೆ ಟ್ಯಾಂಕರನ್ನು ಮೆಲಕ್ಕೆತ್ತಿ ಕಳುಹಿಸಲಾಯಿತು.
ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸಿದ್ದರಿಂದ ಬಾರಿ ಅವಘಡ ತಪ್ಪಿದಂತಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/navachaithanya-old-age-home/