**ಬಾಂಧವ್ಯ ಜೆಸಿ ಸಪ್ತಾಹ**ಮಹಿಳಾ ಆರೋಗ್ಯ ಮಾಹಿತಿ ಕಾರ್ಯಗಾರ ಹಾಗೂ ಕಾನೂನು ಅರಿವು,ಕಾರ್ಯಕ್ರಮ
1 min read
*ಬಾಂಧವ್ಯ ಜೆಸಿ ಸಪ್ತಾಹ* 2021, 6ನೇ ದಿನವಾದ ಇಂದು ಮಹಿಳಾ ಆರೋಗ್ಯ ಮಾಹಿತಿ ಕಾರ್ಯಗಾರ ಹಾಗೂ ಕಾನೂನು ಅರಿವು,, ಕಾರ್ಯಕ್ರಮ , ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿರೇಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ವಹಿಸಿದರು, ನಿಕಟಪೂರ್ವ ಅಧ್ಯಕ್ಷರಾದ ವಿದ್ಯಾರಾಜು ಅವರು ಸ್ವಾಗತಿಸಿದರು, ಮುಖ್ಯ ಅತಿಥಿಗಳಾಗಿ ಜೆಸಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಕುನ್ನಹಳ್ಳಿ ,.. MGM ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಮಾನಸ ಪಿಜಿಷಿಯನ್ ಇವರು ಮಹಿಳೆಯರಿಗೆ ಮಹಿಳಾ ಆರೋಗ್ಯ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾದ ನಯನ ಮೋಟಮ್ಮನವರು ವಕೀಲರು ,ಮಹಿಳೆಯರಿಗೆ ಕಾನೂನು ಅರಿವು ಮಾಹಿತಿಯನ್ನು ನೀಡಿದರು, ಉರುಬಗ್ಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೆ.ಪಿ. ಭಾರತಿ ಕುನ್ನಹಳ್ಳಿ,
ವಲಯ 14 ರ ಜೆಸಿರೆಟ್ ವಿಭಾಗದದ ನಿರ್ದೇಶಕರು, ಜೆಸಿ ಆಶಾ ಜೈನ್, ಮುಖ್ಯ ಅಥಿತಿಗಳಾಗಿ, ಭಾಗವಹಿಸಿದ್ದರು. ಜೆಸಿ ಕಾರ್ಯದರ್ಶಿ ಶ್ರೇಷ್ಠಿ ,ಬಾಂಧವ್ಯ ಜೇಸಿ ಸಪ್ತಾಹದ ನಿರ್ದೇಶಕರಾದ ಹಮಿದ್ ಸಬ್ಬೇನಹಳ್ಳಿ, ಈ ದಿನದ ಪ್ರಾಜೆಕ್ಟ್ ಡೈರೆಕ್ಟರ್ ಆದ ರಮ್ಯಾ ಸಂದೇಶ, ಜೇಸಿರೇಟ್ ಕಾರ್ಯದರ್ಶಿ ಕೃತಿ ಪ್ರದೀಪ್ ವಂದಿಸಿದರು.
3:00 ಗಂಟೆಗೆ ಜೇಸಿರೇಟ್ ಗಳಿಗೆ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್