AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಮುದ್ರ “ಆಡಿಯೋ ಸೀರಿಯಲ್” ತಂಡ ಇನ್ನೊಂದು ಸಿಹಿ ಸುದ್ದಿಯೊಂದಿಗೆ #avintvcom

Featured Video Play Icon

“ಸಮುದ್ರ “ಆಡಿಯೋ ಸೀರಿಯಲ್” ತಂಡ ಇನ್ನೊಂದು ಸಿಹಿ ಸುದ್ದಿಯೊಂದಿಗೆ
ಚಿಕ್ಕಮಗಳೂರು:
ನ್ಯೂ ವರ್ಲ್ಡ್ಸ್ ಕ್ರಿಯೇಷನ್ ಚಿಕ್ಕಮಗಳೂರು ನಿಂದ ಮೊದಲ ಬಾರಿಗೆ ಸಮುದ್ರ ಎಂಬ ಆಡಿಯೋ ಧಾರಾವಾಹಿ ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದಾ ಕಲಾವಿದರ ಧ್ವನಿಯನ್ನೆ ಬಳಸಿ ,ಪ್ರತಿ ವಾರಕ್ಕೊಂದು ರೋಚಕ ಸಂಚಿಕೆಯನ್ನೊಳಗೊಂಡ ಧಾರಾವಾಹಿ ಸೀರಿಯಲ್ ವರ್ಲ್ಡ್ ಕನ್ನಡ ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರವಾಗುತಿದ್ದು,ಇದೀಗ ಕೊನೆಯ ಹಂತಕ್ಕೆ ತಲುಪಿದೆ,ಒಂದು ಸಮುದ್ರ ತೀರದಲ್ಲಿ ಪ್ರತಿ ಹುಣ್ಣಿಮೆಯ ದಿನದಂದು ನಡೆಯುವ ವಿಚಿತ್ರಗಳ ನಡುವೆ …ಕುತೂಹಲ ಭರಿತ ಸ್ವಾರಸ್ಯಕರ ಸನ್ನಿವೇಶಗಳನ್ನು ಧ್ವನಿಯ ಮೂಲಕವೇ ಕತೆ ಸಾಗುತ್ತದೆ ,ಇದೀಗ 3 ಸಂಚಿಕೆ ಪೂರೈಸಿರುವ ದಾರವಾಹಿ 4 ನೇ ಸಂಚಿಕೆಯಲ್ಲಿ ಕತೆಯನ್ನು ಒಂದು ಅಂತಿಮ ಘಟ್ಟ ತಲುಪಿಸಲಿದೆ..ಕೊಲೆಗಾರನ ಸುಳಿವನ್ನು ಪ್ರೇಕ್ಷಕರಿಂದ ಪಡೆದು ಸುಳಿವು ನೀಡಿದ ವಿಜೇತರಿಂದ ಮಹಾಸಂಚಿಕೆ ಬಿಡುಗಡೆಯಾಗುವುದು ಎಂದು ನಿರ್ದೇಶಕ ರಾಕೇಶ್ ಸಿಂಗ್ ತಿಳಿಸಿದ್ದಾರೆ,
ಈ ದಾರವಾಹಿ ಶೇರ್ ಚಾಟ್ ನಾ ಮೂಲಕ ಅತೀ ಹೆಚ್ಚು ಶೇರ್ ಗಳಿಸಿ vip certificate ಪಡೆದುಕೊಂಡಿದ್ದು ಉತ್ತಮ ಪ್ರಶಂಸೆ ಪಡೆದಿದೆ…ಇನ್ನು ಈ ಆಡಿಯೋ ಧಾರಾವಾಹಿಯ ಕಥೆ ಮತ್ತು ನಿರ್ದೇಶನ ರಾಕೇಶ್ ಸಿಂಗ್ ಮಾಡಿದ್ದೂ ಕರ್ನಾಟಕ ವಿವಿಧ ಜಿಲ್ಲೆಯ ಕಲಾವಿದರು ಪಾತ್ರದ ಧ್ವನಿ ನೀಡಿದ್ದಾರೆ,
ಇದೀಗ ಕೊನೆಯ ಸಂಚಿಕೆಗೆ ಉತ್ತಮ ಕಿರುಚಿತ್ರ ನಟ ಹಾಗೂ ನಿರ್ದೇಶಕರಾದ ಓಂ ಕೌಶಿಕ್ ಕೂಡ ಧ್ವನಿಯಾಗಿದ್ದು ತಂಡಕ್ಕೆ ಜೊತೆಯಾಗಿ ಪ್ರೋತ್ಸಾಹಿಸಿದ್ದಾರೆ, ಇನ್ನು ಕಲಾವಿದರಾದ ಮೂಡಿಗೆರೆಯ ಮೋನಿಷಾ B.S ,ವಿಜಯಲಕ್ಷ್ಮಿ M B ಮಾಕೊನಹಳ್ಳಿಯ ಪರಮೇಶ್ N.k ,ಅಬ್ದುಲ್ ನಾಜಿಮ್ ಮೂಡಿಗೆರೆ, ಕೋಲ್ಹರ್ ಜಿಲ್ಲೆಯ ಸಾಹಿಶ್ರೀ, ನಿತಿನ್ ಗುಲ್ಬರ್ಗ, ರಾಜು ಭದ್ರಾವತಿ, ರಾಕೇಶ್ ಸಿಂಗ್,ರಾಹುಲ್ ಸಿಂಗ್ ಧ್ವನಿ ನೀಡಿದ್ದಾರೆ, ಆಡಿಯೋ ಸಂಕಲನ ರಾಹುಲ್ ಸಿಂಗ್ ಮಾಡಿದ್ದು ಧ್ವನಿಗಳ ಮೂಲಕವೇ ಕಲಾಸೇವೆಯಲ್ಲಿ ತೊಡಗಿದ್ದಾರೆ,..ಇನ್ನು ತಂಡ ಸಿಹಿ ಸುದ್ದಿಯನ್ನೊಂದು ಹಂಚಿಕೊಂಡಿದೆ,ಪ್ರೇಕ್ಷಕರ ಒತ್ತಾಯದ ಮೇರೆಗೆ ಸದ್ಯದಲ್ಲೇ
ಸಮುದ್ರ ಎನ್ನುವ ಮಿನಿ ಮೂವಿ ಗೆ ಸಜ್ಜಾಗಲಿದೆ ಈ ತಂಡ ..
ಈ ತಂಡಕ್ಕೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಶುಭ ಹಾರೈಸೋಣ

ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್.
ಅವಿನ್ tv

Career | job

Navachaitanya Old Age Home

About Author