ಜೇಸಿ ವತಿಯಿಂದ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಕುನ್ನಹಳ್ಳಿ ಸಮುದಾಯ #avintvcom
1 min read
*ಯೋಗ ದಿನಾಚರಣೆ*
ಮೂಡಿಗೆರೆ ಜೇಸಿ ವತಿಯಿಂದ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ಕುನ್ನಹಳ್ಳಿ ಸಮುದಾಯ
ಭವನದಲ್ಲಿ ಆಚರಿಸಲಾಯಿತು. ಮೂಡಿಗೆರೆ
ಜೇಸಿ ಅಧ್ಯಕ್ಷರಾದ ಜೇಸಿಚಂದ್ರಶೇಖರ ಕುನ್ನಹಳ್ಳಿ ಸ್ವಾಗತವನ್ನು ಮಾಡಿದರು.
ಮೂಡಿಗೆರೆ ಜೇಸಿ ವತಿಯಿಂದ ಇಂದು ಕುನ್ನಹಳ್ಳಿ ಗ್ರಾಮದ ಸಮುದಾಯಭವನದಲ್ಲಿ ಆಚರಿಸಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್ ಕುಮಾರ್, ಮಂಡಿಸಿದರು.
ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣ ವಾಗಿದ್ದು ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದರು. ವಿಶ್ವಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದವು.
ಭಾರತದ ಗೌರನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2015 ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸುವ ಮೂಲಕ ವಿಶ್ವಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದೇವೆ.
ಜೇಸಿರೇಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ಅವರು ಮಾತನಾಡಿ ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ ಚಿಂತನೆ ಮತ್ತು ಕ್ರಿಯೆ ಸಮಯ ಮತ್ತು ಸಾರ್ಥಕತೆಯನ್ನು ಒಗ್ಗೂಡಿ ಸುತ್ತದೆ.
ಹಾಗೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನು ಉಂಟುಮಾಡುತ್ತದೆ. ಯೋಗ ಆರೋಗ್ಯ ಮತ್ತು ಯೋಗಕ್ಷೇಮ ಸಮಗ್ರ ವಿಧಾನವಾಗಿದೆ.
ಜೇಸಿರೇಟ್ ಕಾರ್ಯದರ್ಶಿ ಕೃತಿ ಪ್ರದೀಪ್ ವಂದಿಸಿದರು.
ಕಾರ್ಯಕ್ರಮದಲ್ಲಿ ಜೇಸಿ ಉಪಾಧ್ಯಕ್ಷರಾದ ಜೇಸಿ ಪ್ರದೀಪ್ ಕುನ್ನಹಳ್ಳಿ ,ಜೆಜೆಸಿ ಅಧ್ಯಕ್ಷರಾದ ರಾಣಿ ಚಂದ್ರಶೇಖರ್.
ಜೆಜೆಸಿ ಪ್ರಸಂಶ,
ಕುನ್ನಹಳ್ಳಿ ಗ್ರಾಮದವರಾದ ಅಂಗನವಾಡಿ ಕಾರ್ಯಕರ್ತೆ ಕೃಷ್ಣಕುಮಾರಿ ,ಗೌರಮ್ಮ ಮಹೇಂದ್ರ,
ಲತಾ ಮೋಹನ್,
ವೇದ ಹಾಗೂ ಮೌಲ್ಯಪ್ರೇಮ್ ಕುಮಾರ್, ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/