AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಾಲೆಯ ಮೇಲೆ ಬಿದ್ದ ಮರ.ತೆರವುಗೊಳಿಸಿದ ಸ್ವಯಂಸೇವಕರು**#avintvcom

1 min read
Featured Video Play Icon

 

**ಮೂಡಿಗೆರೆ.
ಶಾಲೆಯ ಮೇಲೆ ಬಿದ್ದ ಮರ.
ತೆರವುಗೊಳಿಸಿದ ಸ್ವಯಂಸೇವಕರು**

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ
ಬಣಕಲ್.
:ಜೂನ್, 17 ಗುರುವಾರ.

ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮತ್ತು ಗಾಳಿಯಿಂದ. ಬಣಕಲ್ ವಿಲೇಜ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ಮರ ಬಿದ್ದಿರುತ್ತದೆ.

ಪರಿಣಾಮ ಎರಡು , ಮೂರು, ತಿಂಗಳ ಹಿಂದೆ ಸುಣ್ಣ-ಬಣ್ಣ ಕಂಡು ಶೃಂಗಾರಗೊಂಡಿದ್ದ, ಶಾಲೆಯ ಕನಿಷ್ಠ 60 ರಿಂದ 70 ಹೆಂಚುಗಳು ಹಾನಿಯಾಗಿವೆ.
ಗೋಡೆಯ ಮೇಲೆ ನೀರು ಬಿದ್ದು ಸುಣ್ಣ ಬಣ್ಣ ಮಾಸಿಹೋಗಿದೆ.

ಶಾಲೆಗೆ ಆಗಮಿಸಿದ ಮುಖ್ಯೋಪಾಧ್ಯಾಯರು
ಶಾಲೆಯ ಮೇಲೆ ಮರ ಬಿದ್ದಿರುವ ವಿಷಯವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದರು.

ತಕ್ಷಣ ಅಧ್ಯಕ್ಷರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ
ಬಣಕಲ್ ಆರಿಫ್ ಇವರಿಗೆ ಕರೆ ಮಾಡಿ ಶಾಲೆಯ ಮೇಲೆ ಬಿದ್ದಿರುವ ಮರವನ್ನು ತೆರವು ಗೊಳಿಸುವಂತೆ
ಮನವಿ ಮಾಡಿಕೊಂಡರು.

ಮನವಿಗೆ ತಕ್ಷಣ ಸ್ಪಂದಿಸಿದ ಸ್ವಯಂಸೇವಕರು. ಬಿದ್ದಿರುವ ಮರವನ್ನು ತೆರವುಗೊಳಿಸಿ ಶಾಲೆಗೆ ಹೆಂಚುಗಳನ್ನು ಹಾಕಿ ಶಾಲೆಯ ಒಳಗೆ ಸ್ವಚ್ಛಗೊಳಿಸಿದರು.

ಈ ಕಾರ್ಯದಲ್ಲಿ ಸ್ವಯಂ ಸೇವಕರಾದ ಆರಿಫ್, ಜಗದೀಶ್, ಸುರೇಶ್, ವಿಜಯಕುಮಾರ್ . ಮತ್ತು ಸಂಯೋಜಕರಾದ ರವಿ ಕೂಡ ಹಳ್ಳಿ ಭಾಗವಹಿಸಿದ್ದರು.

ಸ್ವಯಂಸೇವಕರ ಈ ಕಾರ್ಯಕ್ಕೆ, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ :-
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Career | job

Navachaitanya Old Age Home

About Author